ಜೀವನ ಮುಗಿದ ಮೇಲೆ ಮರುಗಬೇಡಿ! -ಭಾಗ 1

ವಿದ್ವಾನ್ ಅರುಣ ಹೆಗಡೆ

ವಿದ್ವಾನ್ ಅರುಣ ಹೆಗಡೆ 

ಯಾವ ಘಳಿಗೆಯಲ್ಲಿ ಯಾವ ಅನಾಹುತ ಆಗುತ್ತದೆಯೋ ಯಾರು ಬಲ್ಲರು?
ಪಂಚೇಂದ್ರಿಯಗಳು (ಕಣ್ಣು, ಕಿವಿ, ಮೂಗು,ನಾಲಿಗೆ ಹಾಗೂ ಚರ್ಮ) ಸರಿಯಾಗಿ ಕೆಲಸ ಮಾಡುತ್ತಿರುವಾಗ, ಆರನೇ ಇಂದ್ರಿಯವಾದ ಮನಸ್ಸನ್ನು ನಿಯಂತ್ರಣದಲ್ಲಿಡುವುದೇ ಎಲ್ಲರಿಗೂ ಕ್ಷೇಮವು.
ರೋಗಿಯಾಗಿ ಆಸ್ಪತ್ರೆಯ ಆವರಣದಲ್ಲಿರುವಾಗ ಮುಖಕ್ಕೆ Oxygen ಇಟ್ಟಾಗ, ನಿನಗೆ ಬರಬೇಕಾದ ಲಕ್ಷಾಂತರ ರೂಪಾಯಿಗಳು ಜಮಾ ಆಗಿದೆ, ಸಾಕಷ್ಟು ಆಸ್ತಿ, ಸಂಪತ್ತಿದೆ , ನೀನು ಏನು ಬೇಕಾದರೂ ತಿಂದು ಆರಾಮಾಗಿ ಸುಖವಾಗಿರು ಅಂತ ಹೇಳಿದರೆ ಆ ಸಂಪತ್ತಿನಿಂದ ಆ ರೋಗಿಗೆ ಯಾವ ಲಾಭವೂ ಆಗೋದಿಲ್ಲಾ ಅಲ್ವಾ?
ಆರೋಗ್ಯ ಸರಿಯಿದ್ದರೆ ಧರ್ಮಾರ್ಥಸುಖ ಅಲ್ವಾ?
ದೇಹದಲ್ಲಿ ಶಕ್ತಿ ಇದ್ದಾಗ, ಸಂಪತ್ತಿದ್ದಾಗ ಭೋಗ ಮಾಡಬಹುದು.
ಅನಾರೋಗ್ಯದಿಂದ ನರಳುತ್ತ ಸಾವು ಬದುಕಿನ ಹೋರಾಟದಲ್ಲಿರುವಾಗ ಯಾವ ಭೋಗವೂ ಬೇಡವಾಗುತ್ತದೆ.
ಅದಕ್ಕೇನೇ  “ಶರೀರಮಾಧ್ಯಂ ಖಲು ಧರ್ಮಸಾಧನಂ “ ಆಂತ ಹೇಳಿದ್ದಾರೆ.
ಇಂದಿನ ಈ ವಿಷಮ ವಾತಾವರಣದಲ್ಲಿಯೂ ಪ್ರತಿಯೊಂದು ಜೀವಿ ಅಂತರಂಗದಲ್ಲಿಯೂ, ಬಹಿರಂಗದಲ್ಲಿಯೂ ಸದಾ ಅವಲೋಕಿಸುವ ಒಂದು ವಿಶೇಷ ಗುಣವೇನೆಂದರೆ – ತಾನು ಮತ್ತೊಂದು ಜೀವಿಗಿಂತ ಬೇರೆ.
“ನಾನವನಲ್ಲ, ನನಗೇನಾಗೊಲ್ಲಾ ಅನ್ನೋ ಭಾವನೆ !”
ಎಂದೂ ಕೇಳರಿಯದ, ಕಾಣದ, ಚಿಕಿತ್ಸೆಗೂ ನಿಲುಕದ ರೋಗ ನಮ್ಮನ್ನು ಆಳುತ್ತಿರುವಾಗ, ನನಗೇನಾಗೋಲ್ಲಾ ಅನ್ನುವವರಿಗೆ ವೈದ್ಯರೂ ದೂರದಿಂದಲೇ ರೋಗಿಯನ್ನು ಕಂಡು ನಿನಗೆ ಈ ತರಹದ ರೋಗ ಬಂದಿದ್ದರಿಂದ ನಿನ್ನನ್ನು ಈ ಕೋಣೆಯಲ್ಲಿ ಇಷ್ಟು ದಿನವಿಟ್ಟು, ಉಪಚಾರ ಮಾಡುತ್ತೇವೆ. (ಕೋಣೆ ಸಿಗೋದು ಕಷ್ಟ, ಹಾಸಿಗೆಯೂ ಇಲ್ಲ ಅಂತ ವಾರ್ತೆಯಲ್ಲಿ ಕೇಳಿದ್ದೇವೆ)
ನೀನು ಗುಣಮುಖನಾಗುತ್ತಿಯೋ ಇಲ್ವೋ ಅಂತ ನಮಗೂ ಗೊತ್ತಿಲ್ಲಾ… ಮುಖಕ್ಕೆ ಮಾಸ್ಕ್ ಹಾಕಿ, ಅಂತರ ಕಾಯ್ದುಕೊಂಡಿದ್ದರೆ ಈ ರೀತಿ ಪರಿಸ್ಥಿತಿ ಬರ್ತಿರ್ಲಿಲ್ಲ.. ದೇವರೇ ಗತಿ ಇನ್ನು ಅಂತ ವೈದ್ಯರೇ ಹೇಳುತ್ತಿದ್ದಾರೆ.
ಸತ್ಯವೂ ಹೌದು.
ಆ ರೋಗಿಯ ಸಂಬಂಧಿಕರೂ ರೋಗಿಯನ್ನು ನೋಡುವಂತಿಲ್ಲ.. ನೀವು ಆಸ್ಪತ್ರೆಗೆ ಬರುವ ಅವಶ್ಯಕತೆ ಇಲ್ಲ ಮನೆಗೆ ಹೋಗಿಬಿಡಿ ಅಂತ ಸಿಬ್ಬಂದಿವರ್ಗದವರು ಹೇಳುತ್ತಾರೆ.
 ಈ ಸ್ಥಿತಿ ಬರಬೇಕಾ ನಮಗೆ?
ಮನಸ್ಸು ಹಾಗೂ ದೇಹವು ಅಪವಿತ್ರವಾದಾಗ ದೇವಸ್ಥಾನಕ್ಕೂ ಯಾರೂ ಹೋಗುವುದಿಲ್ಲ, ಹಾಗೇಯೇ ವಿಷದ ವಾತಾವಾರಣ ಎಲ್ಲೆಡೆ ಇರುವಾಗ ಮನೆಬಿಟ್ಟು ಹೊರಗೆ ತೆರಳದೇ ನಿಯಮಗಳನ್ನು ಪಾಲಿಸೋಣ.
ದೇಹರಕ್ಷಣೆಗೆ ಆಹಾರ ಅವಶ್ಯಕವಾದಂತೆಯೇ ಪ್ರಾಣಶಕ್ತಿಯನ್ನು ಕಾಪಾಡುವ ಶ್ವಾಸಕೋಶವನ್ನೇ ಹದಗೆಡಿಸುವ ರೋಗದ ವಿರುದ್ಧ ನಾವೇನು ಕ್ರಮ ಕೈಗೊಳ್ಳಬೇಕೆಂದು ಮುಂದಿನ ಭಾಗದಲ್ಲಿ ತಿಳಿಸಲಿಚ್ಛಿಸುತ್ತೇವೆ.
(ಮುಂದುವರೆಯುವುದು)
(ಲೇಖಕರ ವಿಳಾಸ –
ವಿದ್ವಾನ್ ಅರುಣ ಹೆಗಡೆ 
ದೇವಿಮನೆ, ಬೆಳಗಾವಿ.
ಜ್ಯೋತಿಷ್ಯರು, ವಾಸ್ತು ಸಲಹೆಗಾರರು ಹಾಗೂ ಅಧ್ಯಾತ್ಮಚಿಂತಕರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button