ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಒಂದೇ ದಿನ ಕೊರೋನಾ ಸೋಂಕಿತರ ಸಂಖ್ಯೆ 300ರ ಗಡಿ ದಾಟಿದೆ. ಶನಿವಾರ ಒಟ್ಟೂ 313 ಜನರಿಗೆ ಸೋಂಕು ದೃಢಪಟ್ಟಿದೆ.
ಇದರಿಂದಾಗಿ 2ನೇ ಅಲೆಯಲ್ಲಿ 2ನೇ ಬಾರಿಗೆ ಮುನ್ನೂರರ ಗಡಿ ದಾಟಿದಂತಾಗಿದೆ.
ಬೆಳಗಾವಿ ತಾಲೂಕಿನಲ್ಲಿ 104, ಅಥಣಿ 21, ಬೈಲಹೊಂಗಲ 8, ಚಿಕ್ಕೋಡಿ 9, ಗೋಕಾಕ 39, ಹುಕ್ಕೋರಿ 10, ಖಾನಾಪುರ 25, ರಾಮದುರ್ಗ 19, ರಾಯಬಾಗ 41, ಸವದತ್ತಿ 16 ಹಾಗೂ ಇತರೆ 21 ಜನರಿಗೆ ಸೋಂಕು ದೃಢಪಟ್ಟಿದೆ.
ಬೆಳಗಾವಿ ತಾಲೂಕಿನ 67 ವರ್ಷದ ವ್ಯಕ್ತಿ ಬಿಮ್ಸ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಆಸ್ಪತ್ರೆಯಲ್ಲಿ 1858 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಲಗಳ ಪ್ರಕಾರ ನಿಜವಾದ ಅಂಕಿಸಂಖ್ಯೆಗಳ ಇದಕ್ಕೂ ಎಷ್ಟೋಪಟ್ಟು ಹೆಚ್ಚಾಗಿದೆ. ಇಲ್ಲಿರುವುದು ಕೇವಲ ಅಧಿಕೃತವಾಗಿ ಲೆಕ್ಕಕ್ಕೆ ಸಿಕ್ಕಿರುವುದು.
ಬೆಳಗಾವಿ ನಗರದಲ್ಲೇ ನಿತ್ಯ 200ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆದರೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಗುತ್ತದೆ ಎನ್ನುವ ಕಾರಣಕ್ಕೆ ಎಷ್ಟೋ ಜನರು ಟೆಸ್ಟ್ ಮಾಡಿಸಿಕೊಳ್ಳುತ್ತಿಲ್ಲ ಎಂದು ಮೂಲಗಳು ಹೇಳಿವೆ.
ಕೊರೋನಾ: ಪುಣೆ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದ ಬೆಂಗಳೂರು
ಬೆಳಗಾವಿಯಲ್ಲಿ ಮತ್ತೊಮ್ಮೆ ಕೊರೋನಾ ಸ್ಫೋಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ