Latest

ಲಾಕ್ ಬೆಂಗಳೂರಿಗೋ? ರಾಜ್ಯಕ್ಕೋ?: ಸಚಿವ ಸಂಪುಟ ಸಭೆಯತ್ತ ಇಡೀ ರಾಜ್ಯದ ಚಿತ್ತ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸೋಮವಾರ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ರಾಜ್ಯ ಸಚಿವಸಂಪುಟ ಸಭೆಯತ್ತ ಇಡೀ ರಾಜ್ಯದ ಗಮನ ಕೇಂದ್ರೀಕೃತವಾಗಿದೆ.

ಕೊರೋನಾ ನಿಯಂತ್ರಣಕ್ಕಾಗಿ ಇಡೀ ರಾಜ್ಯಕ್ಕೆ ಲಾಕ್ ಡೌನ್ ಮಾಡಲಾಗುವುದೋ ಅಥವಾ ಕೇವಲ ಬೆಂಗಳೂರಿಗೆ ಲಾಕ್ ಮಾಡಲಾಗುವುದೋ ?  ಎನ್ನುವುದು ಸಚಿವಸಂಪುಟ ಸಭೆಯಲ್ಲಿ ನಿರ್ಧಾರವಾಗಲಿದೆ. ಅಥವಾ ಈಗಾಗಲೆ ಆದೇಶವಾಗಿರುವಂತೆಯೇ ಸೇಮಿ ಲಾಕ್ ಡೌನನ್ನೇ ಇನ್ನಷ್ಟು ಕಠಿಣ ರೀತಿಯಲ್ಲಿ ಜಾರಿಗೊಳಿಸಲಾಗುವುದೋ ಎನ್ನುವ ಪ್ರಶ್ನೆ ಕೂಡ ಇದೆ.

ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಅನಿವಾರ್ಯ ಎನ್ನುವ ಅಭಿಪ್ರಾಯ ತಜ್ಞರಿಂದ ಬಂದಿದೆ. ಸಿಎಂ ಸೇರಿ ಹಲವು ಸಚಿವರು, ಅಧಿಕಾರಿಗಳು ಸಹ ಅದೇ ಅಭಿಪ್ರಾಯದಲ್ಲಿದ್ದಾರೆ. ಆದರೆ ಲಾಕ್ ಡೌನ್ ಮಾಡಿದರೆ ಬಡ ವ್ಯಾಪಾರಿಗಳು, ಕೂಲಿಕಾರ್ಮಿಕರು ಸಂಕಷ್ಟಕ್ಕೆ ಸಿಲುಕುತ್ತಾರೆ ಎನ್ನುವ ವಾದವೂ ಇದೆ.

ಆದರೆ  ಜೀವ ಉಳಿದರೆ ಕೂಲಿ, ವ್ಯಾಪಾರ. ಹಾಗಾಗಿ ಮೊದಲು ಜೀವ ಉಳಿಸುವ ಕೆಲಸವಾಗಬೇಕು ಎನ್ನುವುದು ಹಲವರ ವಾದ. ಈ ಎಲ್ಲ ಹಿನ್ನೆಲೆಯಲ್ಲಿ ಮೇ 4ರ ವರೆಗೆ ರಾಜ್ಯದಲ್ಲಿ ಲಾಕ್ ಡೌನ್ ಬಹುತಕ ಖಚಿತ ಎನ್ನಲಾಗುತ್ತಿದೆ.

ಲಾಕ್ ಡೌನ್ ಇಡೀ ರಾಜ್ಯಕ್ಕೆ ಜಾರಿಮಾಡಬೇಕೋ? ಕೇವಲ ಬೆಂಗಳೂರಿಗಷ್ಟೆ ಅನ್ವಯಿಸಬೇಕೋ ಎನ್ನುವ ಚರ್ಚೆ ಕೂಡ ಇದೆ.

ಮೇ 4ರ ವರೆಗೆ ಲಾಕ್ ಡೌನ್ ಬಹುತೇಕ ಫಿಕ್ಸ್

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button