ಪ್ರಗತಿವಾಹಿನಿ ಸುದ್ದಿ; ಮಸ್ಕಿ: ಮಸ್ಕಿ ವಿಧಾನಸಭಾ ಕ್ಷೇತ್ರದ ಫಲಿತಾಂಶ ಬಹುತೇಕ ಹೊರಬಿದ್ದಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ. ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ ಗೆಲುವು ಬಹುತೇಕ ಖಚಿತವಾಗಿದೆ. ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅವರಿಗೆ ಮುಖಭಂಗವಾಗಿದೆ.
ಮಸ್ಕಿಯಲ್ಲಿ ತಮ್ಮ ಸೋಲು ಖಚಿತವಾಗುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಗೌಡ, ಮಸ್ಕಿಯಲ್ಲಿ ನನಗೆ ಸೋಲಾಗಲ್ಲ ಎಂದುಕೊಂಡಿದ್ದೆ. ಆದರೆ ನನಗೆ ವಿಶ್ವಾಸಧ್ರೀಹವಾಗಿದೆ. ಅಭಿವೃದ್ಧಿ, ಒಳ್ಳೆತನ ಮುಖ್ಯವಲ್ಲ ಎಂದು ಜನ ಸಾಬೀತು ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜನ ಬದಲಾವಣೆ ಬಯಸಿ, ಕಾಂಗ್ರೆಸ್ ನ ಬಸನಗೌಡಗೆ ಮತಹಾಕಿದ್ದಾರೆ. ಕ್ಷೇತ್ರದ ಜನತೆಗೆ ದೇವರು ಒಳ್ಳೆಯದು ಮಾಡಲಿ. ಜನರ ಮನಸ್ಥಿಯಲ್ಲಿ ಸೋಲಿಸಬೇಕೆಂಬುದು ಬಂದಾಗ ಯಾರು ಬಂದು ಏನೇ ಪ್ರಚಾರ ಮಾಡಿದರೂ ಏನೂ ಪ್ರಯೋಜನ ಆಗಲ್ಲ. ಜನರ ಜೊತೆಗೆ ಇದ್ದು, ಅವರ ಒಡನಾಟದಲ್ಲಿ ಇದ್ದೆ. ಆದರೂ ನನಗೆ ವಿಶ್ವಾಸದ್ರೋಹವಾಗಿದೆ. ನನಗೆ ಒಳಗೊಳಗೆ ಮೋಸ ಆಗಿದೆ. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ನಮ್ಮದೇ ಸರ್ಕಾರ ಇರುವುದರಿದ ಜನರಿಗೆ ಸಹಾಯ ಮಾಡುತ್ತೇನೆ ಅಷ್ಟೇ ಎಂದು ಹೇಳಿದರು.
ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗಿ ಮಸ್ಕಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಮತದಾರ ಆಪರೇಷನ್ ಕಮಲಕ್ಕೆ ಮನಸೋತಿಲ್ಲ ಎನ್ನಲಾಗಿದೆ.
ಬೆಳಗಾವಿ, ಬಸವಕಲ್ಯಾಣದಲ್ಲಿ ಬಿಜೆಪಿ ಮುನ್ನಡೆ; ಮಸ್ಕಿಯಲ್ಲಿ ಕಾಂಗ್ರೆಸ್ ಮುನ್ನಡೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ