Latest

ಕೊರೊನಾ ವೈರಸ್ ಮುಕ್ತಿಗೆ ದೃಢ ಸಂಕಲ್ಪದ ಹೆಜ್ಜೆ

ಪದ್ಮಾವತಿ(ಅವಕ್ಕಾ).ಆ.ಖೆಮಲಾಪೂರೆ

ನಾವೆಲ್ಲರೂ ಭಾರತೀಯರು, ಭಾರತಾಂಬೆಯ ಮಕ್ಕಳು. ಜಾತಿ, ಕುಲ, ಗೋತ್ರ, ಮೇಲು ಕೀಳು; ಆ ಪಕ್ಷ, ಈ ಪಕ್ಷ ಎನ್ನದೆ ಎಲ್ಲವನ್ನು ಮರೆತು ದೇಶದ ಹಿತಕ್ಕಾಗಿ ನಮ್ಮೆಲ್ಲರ ಒಳಿತಿಗಾಗಿ ಸಂಕಲ್ಪ ಮಾಡೋಣ. ಕೊರೋನಾ ಮುಕ್ತಿಗಾಗಿ ಒಳ್ಳೆಯ ಜೀವನ ನಡೆಸೋಣ.

ನಮ್ಮ ಸಂಸ್ಕತಿಯ ಪ್ರಕಾರ ಐದು ಜನ ಮಾತೆಯರು:

ಜನ್ಮದಾತೆ, ಭಾರತಮಾತೆ, ಭೂಮಾತೆ, ಗೋಮಾತೆ ಮತ್ತು ನಿಸರ್ಗಮಾತೆ. ಈ ಐವರಿಗೂ ನಾವು ಅನೇಕ ಕಷ್ಟ – ತೊಂದರೆಗಳನ್ನು ಕೊಟ್ಟಿದ್ದೇವೆ. ಜನ್ಮದಾತೆಯ ಪಾಲನೆ – ಪೋಷಣೆ ಮಾಡದೆ ವೃದ್ಧಾಶ್ರಮಕ್ಕೆ ಕಳುಹಿಸಿದ್ದೇವೆ. ಭಾರತೀಯ ಸಂಸ್ಕಂತಿ – ಸಂಸ್ಕಾರ ಪಾಲಿಸದೆ ಅಗೌರವ ತೋರಿದೆವು.

ಔಷಧಿ ಗೂಣವಿರುವ, ಮಣ್ಣಿನಿಂದ ಕೂಡಿದ ಭೂತಾಯಿಗೆ ರಾಸಾಯನಿಕ ಗೊಬ್ಬರ, ವಿಷ ಕ್ರಿಮಿನಾಶಕಗಳನ್ನು ಸುರಿದು; ಗಣಿಗಾರಿಕೆಗಾಗಿ ಬೆಟ್ಟ-ಗುಡ್ಡಗಳನ್ನು ಹಾಳು ಮಾಡಿ ವಸುಧೆ, ಧರಿತ್ರಿ ಮಾತೆಗೆ ನೋವನ್ನುಂಟು ಮಾಡಿದೆವು.

ಗಿಡಮರಗಳನ್ನು ಕಡಿದು ಪರಿಸರವನ್ನು ಹಾಳುಮಾಡಿದ್ದೇವೆ. ಕೆರೆ – ಬಾವಿ, ಹಳ್ಳ – ಕೊಳ್ಳ, ನದಿಗಳಲ್ಲಿ ತ್ಯಾಜ್ಯ ಕಲ್ಮಶಗಳನ್ನು ಬಿಟ್ಟು; ಜೀವ ಜಂತುಗಳನ್ನು ಕೊಂದು ಜಲಮಾಲಿನ್ಯ, ವಾಯು ಮಾಲಿನ್ಯದಂತಹ ಪಾಪ ಕೃತ್ಯಗಳನ್ನು ಮಾಡುತ್ತಿದ್ದೇವೆ.

 

ತಾಯಿ ಸ್ಥಾನ ಪೂಜ್ಯದಲ್ಲಿರುವ 36 ಕೋಟಿ ದೇವತೆಗಳಿಗೆ ಆಶ್ರಯದಾತೆಯಾದ ಗೋಮಾತೆಯನ್ನು ಕೊಲೆಗೈದು; ಮಾಂಸ ರಪ್ತು ಮಾಡುತ್ತಿದ್ದೇವೆ, ಅರಣ್ಯ ನಾಶ ಮಾಡುತ್ತಿರುವುದರಿಂದ ನಿರಪರಾಧಿ ಮೂಕ ಪ್ರಾಣಿಗಳಿಗೆ ವಾಸಿಸಲು ಸ್ಥಳ ಇಲ್ಲದಂತಾಗಿದೆ, ಅವುಗಳನ್ನು ಕೊಂದು ಮಾಂಸಹಾರ ಮಾಡುವುದಕ್ಕಿಂತ ಪ್ರಾಣಿಗಳ ರಕ್ಷಣೆ ಮಾಡುವುದು ಆದ್ಯ ಕರ್ತವ್ಯವಾಗಿದೆ. ಮಾಂಸಾಹಾರ ಮಾಡಿ ಅಸಂಖ್ಯ ಪಾಪಕ್ಕೆ ಗುರಿಯಾಗಿದ್ದೇವೆ.

ಈ ಎಲ್ಲ ಪಾಪ ಕೃತ್ಯಗಳಿಂದಲೇ ಇಂದು ಕೊರೊನಾ ಎಂಬ ಸೂಕ್ಷ್ಮ ವೈರಸ್ ಮಾರಣಹೋಮ ಮಾಡುತ್ತಿದೆ. ಅದಕ್ಕಾಗಿ ನಮ್ಮೆಲ್ಲರ ಭವಿಷ್ಯಕ್ಕಾಗಿ ಎಲ್ಲ ವ್ಯಸನಗಳನ್ನು ತ್ಯಾಗ ಮಾಡಿ; ಆರೋಗ್ಯವನ್ನು ಕಾಯ್ದುಕೊಂಡು; ಜೀವನದಲ್ಲಿ ಆದರ್ಶಗಳನ್ನು ಅಳವಡಿಸಿಕೊಂಡು ಮನುಷ್ಯತ್ವದಿಂದ ಬಾಳಿರಿ.

ಎಷ್ಟೋ ಜೀವಿಗಳ ಘಾತ ಮಾಡುವಾಗ ಜೀವದ ಕಿಮ್ಮತ್ತು ಗೊತ್ತಿಲ್ಲದಾಗಿತ್ತು. ಈಗ ನಮ್ಮ ಮೇಲೆ ಬಂದಾಗ ಜೀವದ ಕಿಮ್ಮತ್ತು ಏನೆಂಬುದು ತಿಳಿಯಿತು ಇನ್ನೆಂದೂ ಇಂಥ ತಪ್ಪುಗಳನ್ನು ಮಾಡುವುದಿಲ್ಲಾ ಅಂತಾ ದೇವರ ಮುಂದೆ ಪ್ರತಿಜ್ಞೆ ಮಾಡೋಣ.

ನಮ್ಮ ಸಂಸ್ಕಂತಿಯ ಪಾಲನೆ ಮತ್ತು ಗೌರವ ನೀಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ತಾವೆಲ್ಲರೂ ಜ್ಞಾನಿಗಳು ಇದರಲ್ಲಿ ತಪ್ಪು ಅನ್ನಿಸಿದರೆ ಕ್ಷಮೆ ಮಾಡಿರಿ.

( ಲೇಖಕರು – ಮಾಜಿ ಮಹಾಮಂತ್ರಿ, ದಕ್ಷಿಣ ಭಾರತ ಜೈನ ಸಭೆಯ
ಮಹಿಳಾ ಮಹಾಮಂಡಳ
ಮಾಜಿ ಅಧ್ಯಕ್ಷರು ಚಕ್ರೇಶ್ವರಿ ಮಹಿಳಾ ಮಂಡಳಿ
ಬೆಲ್ಲದ ಬಾಗೇವಾಡಿ.)

ಬ್ಲ್ಯಾಕ್ ಫಂಗಸ್; ಇಬ್ಬರು ಬಲಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button