ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಹಾಂತ ವಕ್ಕುಂದ ಫೌಂಡೇಶನ್ ವತಿಯಿಂದ ಇಂದು ಬೆಳಗಾವಿಯ ಕಾರಂಜಿಮಠದಲ್ಲಿ ಕೋವಿಡ್ ಸೋಂಕಿತರಿಗಾಗಿ 25 ಆಕ್ಸಿಜನ್ ಕಾನ್ಸಂಟ್ರೇಟರ್ ಯಂತ್ರಗಳನ್ನು ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಶ್ರೀ ಗುರುಸಿದ್ದ ಮಹಾಸ್ವಾಮಿಜೀಯವರ ಅಮೃತ ಹಸ್ತದಿಂದ ಉಪಕರಣಗಳ ಪೂಜೆ ಮಾಡಿಸಿ ಸಾರ್ವಜನಿಕ ಸೇವೆಗೆ ಇಂದಿನಿಂದ ಮುಕ್ತವಾಗಿಸಲಾಗಿದೆ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು, ವಿಶ್ವ ಹಿಂದೂ ಪರಿಷತ್ತಿನ ಮುಖಂಡರಾದ ದಿಲೀಪ ಜೀ ವೇರ್ಣೇಕರ, ಶ್ರೀಕಾಂತ ಕದಮ, ಬಸವರಾಜ ಹಳಿಂಗಳಿ, ವಿಜಯ ಜಾಧವ, ಬಸವರಾಜ ಭಾಗೋಜಿ, ಸುನೀಲ ಗೌರಣ್ಣ ಹಾಗೂ ಮಹಾಂತೇಶ ವಕ್ಕುಂದ ಉಪಸ್ಥಿತರಿದ್ದರು.
ಈ ಆಕ್ಸಿಜನ್ ಕಾನ್ಸಂಟ್ರೇಟರ್ ಉಪಕರಣಗಳನ್ನು ಆಕ್ಸಿಜನ್ ಪ್ರಮಾಣ 80 ಕ್ಕಿಂತ ಮೇಲ್ಪಟ್ಟು ಹೊಂದಿರುವ ರೋಗಿಗಳು ಮನೆಯಲ್ಲಿ ಬಳಸಬಹುದು. ಈ ಉಪಕರಣ ಸ್ವಯಂ ಆಮ್ಲಜನಕವನ್ನು ಉತ್ಪತ್ತಿ ಮಾಡಿ ಹಂಚುತ್ತದೆ.
ಈ ಉಪಕರಣವನ್ನು ಬಳಸಲು ಇಚ್ಚಿಸುವವರು ಮಹಾಂತ ವಕ್ಕುಂದ ಫೌಂಡೇಶನ್ನನ್ನು ಈ ಕೆಳಕಂಡ ದೂರವಾಣಿ ನಂಬರ್ ಮೂಲಕ ಸಂಪರ್ಕಿಸಲು ಕೋರಲಾಗಿದೆ.
ಮಂಜುನಾಥ 9731744284
ಸಂತೋಷ 9738485337
ತೌಕ್ತೆ ಆರ್ಭಟಕ್ಕೆ ಸಾಂಬ್ರಾದಲ್ಲಿ ವಿಮಾನ ಹಾರಾಟ ರದ್ದು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ