ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗ್ರಾಮ ಪಂಚಾಯಿತಿ ಚುನಾವಣೆ ಬಳಿಕ ವಿಜಯೋತ್ಸವದ ನೆಪದಲ್ಲಿ ಬಿಜೆಪಿ ಬೆಳಗಾವಿಯಲ್ಲಿ ನಡೆಸಿದ್ದ ಜನಸೇವಕ ಸಮಾವೇಶ ಈಗ ಪೊಲೀಸ್ ಆಯುಕ್ತರಿಗೆ ಸಂಕಷ್ಟ ತಂದಿಟ್ಟಿದೆ.
ಸಾಂಕ್ರಾಮಿಕ ರೋಗ ಕೊರೋನಾ ಸಂದರ್ಭದಲ್ಲಿ ಇಂತಹ ಸಮಾವೇಶ ನಡೆಸಿರುವ ಕುರಿತು ರಾಜ್ಯ ಹೈಕೋರ್ಟ್ ಪೊಲೀಸ್ ಆಯುಕ್ತರ ವಿರುದ್ಧ ಗರಂ ಆಗಿದ್ದು, ಜೂನ್ 3ರೊಳಗೆ ವಿವರಣೆ ನೀಡುವಂತೆ ಸೂಚಿಸಿದೆ.
ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜನಸೇವಕ ಸಮಾವೇಶ ನಡೆದಿತ್ತು. ಆಗಿನ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಸಮಾವೇಶ ನಡೆದಿತ್ತು. ಆಗಷ್ಟೆ ಕೊರೋನಾ ಲಾಕ್ ಡೌನ್ ಮುಗಿದಿತ್ತಾದರೂ ರೋಗ ಸಂಪೂರ್ಣ ನಿಂತಿರಲಿಲ್ಲ.
ಸಾಂಕ್ರಾಮಿಕ ರೋಗ ಕಾಯ್ದೆ ಪ್ರಕಾರ ಇಂತಹ ಸಮಾವೇಶ ನಡೆಸುವಂತಿಲ್ಲ. ಆದರೆ ಬಿಜೆಪಿ ಸಮಾವೇಶ ಆಯೋಜಿಸಿ ಲಕ್ಷ ಲಕ್ಷ ಜನರನ್ನು ಸೇರಿಸಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವಾರು ಸಚಿವರು ಭಾಗವಹಿಸಿದ್ದರು.
ಈ ಸಂಬಂಧ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದು ದಾಖಲಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ