ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಖಾನಾಪುರ ತಾಲೂಕು ಆಸ್ಪತ್ರೆಗೆ 30 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಹಸ್ತಾಂತರಿಸಿದರು.
ಖಾನಾಪುರ ತಾಲೂಕು ಬೆಳಗಾವಿ ಜಿಲ್ಲೆಯ ಅತ್ಯಂತ ಕಾಡು ಮತ್ತು ಗುಡ್ಡ ಹೊಂದಿದ ಹಿಂದುಳಿದ ತಾಲೂಕಾಗಿದ್ದು, ಪ್ರಸ್ತುತ ಸಾಂಕ್ರಾಮಿಕ ರೋಗವಾದ ಕೊರೊನಾ, ತಾಲೂಕಿನ ಜನರನ್ನು ಬೆಂಬಿಡದೆ ಕಾಡುತ್ತಿದೆ. ಆಮ್ಲಜನಕದ ತೀವ್ರ ಸಮಸ್ಯೆಯಿಂದ ಅನೇಕ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ಸರ್ಕಾರ ಆರೋಗ್ಯ ಇಲಾಖೆ ಹಗಲಿರುಳು ರೋಗಿಗಳ ಆರೈಕೆಯಲ್ಲಿ ತೊಡಗಿದೆ. ಆದರೂ ಆಕ್ಸಿಜನ್ ಬೆಡ್ ಗಳ ಕೊರತೆ ಖಾನಾಪುರ ತಾಲೂಕಾ ಆಸ್ಪತ್ರೆಯಲ್ಲಿ ಇರುವದನ್ನ ಮನಗಂಡ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ರವರು, ತಮ್ಮ ಡಾ.ಅಂಜಲಿತಾಯಿ ಪೌಂಡೇಶನ್ ಮುಖಾಂತರ ಸೆಲ್ಕೊ ಫೌಂಡೇಶನ್ ನ್ನು ಸಂಪರ್ಕಿಸಿ ಹತ್ತು ಆಕ್ಸಿಜನ್ ಕೊನ್ಸಂಟ್ರೇಟರ್ ಪಡೆಯವಲ್ಲಿ ಯಶಸ್ವಿಯಾಗಿದ್ದಾರೆ. ಅದರ ಜೊತೆಗೆ ತಮ್ಮಿಂದ ಹತ್ತು ಕೊನ್ಸಂಟ್ರೇಟರ್ ಮತ್ತು ಸರ್ಕಾರದಿಂದ ಹತ್ತು ಒಟ್ಟಾರೆ ಇಂದು ಮೂವತ್ತು ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ತಾಲೂಕಾಸ್ಪತ್ರೆಯ, ತಾಲೂಕಾ ವೈಧ್ಯಾಧಿಕಾರಿ ಡಾ. ನಾಂದ್ರೆ ಅವರಿಗೆ ಹಸ್ತಾಂತರಿಸುವ ಮುಖಾಂತರ ಇಲ್ಲಿ ಐವತ್ತಕ್ಕೂ ಹೆಚ್ಚು ಆಕ್ಸಿಜನ್ ಬೆಡ್ ಸಿಗುವಂತೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಅಂಜಲಿ ನಿಂಬಾಳ್ಕರವರು, ಕೋವಿಡ್ ಪೀಡಿತ ಅದರಲ್ಲೂ ತೀವ್ರ ಆಕ್ಸಿಜನ್ ಅನಿವಾರ್ಯತೆ ಹೊಂದಿದ್ದ ರೋಗಿಗಳು ಬೆಳಗಾವಿ ಜಿಲ್ಲಾಸ್ಪತ್ರೆಗೆ ತಲುಪುವುದರೊಳಗೆ ಕೊನೆಯುಸಿರೆಳೆಯುವುದನ್ನ ತಪ್ಪಿಸುವ ನಿಟ್ಟಿನಲ್ಲಿ ಹತ್ತು ಆಕ್ಸಿಜನ್ ಕಾನ್ಸಂಟ್ರೇಟ್ ಬೇಡಿಕೆ ಇಟ್ಟಾಗ ತಕ್ಷಣ ಒದಗಿಸಿದ ಸೆಲ್ಕೊ ಪೌಂಡೇಶನ್ ಮತ್ತು ಸೆಲ್ಕೊ ಸಂಸ್ಥೆಗೆ ವಿಶೇಷ ಧನ್ಯವಾದಗಳು ಎಂದರು.
ಈ ಸಂದರ್ಭದಲ್ಲಿ ಸೆಲ್ಕೊ ಸಂಸ್ಥೆಯ ಬೆಳಗಾವಿ ಏರಿಯಾ ಮೆನಜರ್ ವಿನಾಯಕ ಹೆಗಡೆ, ತಾಲೂಕಾ ವೈಧ್ಯಾದಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ