ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮುತಗಾ ಗ್ರಾಮದ ಗೋಕುಲ್ ನಗರದಲ್ಲಿ ಮೃಣಾಲ ಹೆಬ್ಬಾಳಕರ್ ಹಾಗೂ ಕಾರ್ಯಕರ್ತರು ಬಡ ಜನರಿಗೆ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ರೇಷನ್ ಕಿಟ್ ಗಳನ್ನು ವಿತರಿಸಿದರು.
ಕೊರೋನಾ ಸೋಂಕಿನ ಈ ಸಂಕಷ್ಟದ ಸಂದರ್ಭದಲ್ಲಿ ಬಡ ಜನರು ದುಡಿಮೆಯಿಲ್ಲದೆ ತೊಂದರೆಗೆ ಗುರಿಯಾಗಿದ್ದು, ಜೀವನವನ್ನು ನಡೆಸಲು ಪರದಾಡುತ್ತಿದ್ದಾರೆ. ಅಂತಹ ಬಡ ಜನರಿಗೆ ಲಕ್ಷ್ಮೀ ತಾಯಿ ಫೌಂಡೇಷನ್ ಸಹಾಯ ಮಾಡುವ ಉದ್ದೇಶದಿಂದ ದಿನಸಿ ಹಾಗೂ ಔಷಧ ಕಿಟ್ ಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ರೂಪಾ ಸಣ್ಣಮನಿ, ಸವಿತಾ ಆಲಾರಡ್ಡಿ, ವಿನೋದ ಅಂಬೇಕರ್, ಸೋಮು ಸಣ್ಣಮನಿ, ಸುಜಾತ ಮುರ್ಕಿಕರ್, ರಾಧಿಕಾ ಮುತಗೇಕರ್, ಸುರೇಶ ಶಿಂಧೆ, ಶಾಂತಾ ದೊಡಮನಿ, ಅರ್ಚನಾ ಮೇಟಿ, ಸಂತೋಷ ಪಾಟೀಲ, ಎನ್ ಆರ್. ಪಾಟೀಲ, ವಾಂಡ್ಕರ್, ಗಟವಾಳಿಮಠ್, ತೋಟಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಆಶಾ ಕಾರ್ಯಕರ್ತೆಯರಿಗೆ ನೆರವು
ಹಿಂಡಲಗಾ ಗ್ರಾಮದಲ್ಲಿ 20 ಆಶಾ ಕಾರ್ಯಕರ್ತೆಯರಿಗೆ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ರೇಷನ್ ಕಿಟ್ ಗಳ ವಿತರಣೆ ಹಾಗೂ ಆರ್ಥಿಕವಾಗಿ ಸಹಾಯವನ್ನು ಮಾಡಲಾಯಿತು.
ಈ ಕೋವಿಡ್ 19 ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಸದಾ ಜನಪರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಆದರೆ ಅವರು ಜೀವನ ನಿರ್ವಹಣೆಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಅವರಿಗೆ ನೆರವಾಗುವ ಉದ್ದೇಶದಿಂದ ದಿನಸಿ ಕಿಟ್ ಹಾಗೂ ಧನ ಸಹಾಯ ನೀಡಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ