Kannada NewsKarnataka News

ಬೆಳಗಾವಿ ಪಾಲಿಕೆಗೆ ತೆರಿಗೆ ತುಂಬುವವರ ಗಮನಕ್ಕೆ

ಕೋವಿಡ್ ಹಿನ್ನೆಲೆ ವಲಯ ಕಚೇರಿಗಳಲ್ಲಿ ಆಸ್ತಿ ತೆರಿಗೆ ಪಾವತಿಗೆ ಅವಕಾಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಹಾನಗರ ಪಾಲಿಕೆಯ ವ್ಯಾಪ್ತಿಗೊಳಪಡುವ ಸಾರ್ವಜನಿಕರು ತಮ್ಮ ಆಸ್ತಿ ತೆರಿಗೆಯನ್ನು ಸಂಬಂಧಪಟ್ಟ ವಲಯ ಕಚೇರಿಗಳಲ್ಲಿ ಪಾವತಿಸಬಹುದಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್. ತಿಳಿಸಿದ್ದಾರೆ.
ಸದ್ಯ ಕೋವಿಡ್-19 ಸೋಂಕು ಕರ್ನಾಟಕ ರಾಜ್ಯದಲ್ಲಿ   ಹಾಗೂ ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿಯೂ ಅತಿಯಾಗಿ ಹರಡುತ್ತಿರುವುದರಿಂದ ತಾತ್ಕಾಲಿಕವಾಗಿ ಆಸ್ತಿಕರ ಭರಿಸಿಕೊಳ್ಳುತ್ತಿರುವ ಬೆಳಗಾವಿ-1 ಕೇಂದ್ರಗಳನ್ನು ಬಂದ್ ಮಾಡಲಾಗಿದೆ.
ಆದ್ದರಿಂದ, ಎಲ್ಲ ಆಸ್ತಿ ಮಾಲೀಕರು ತಮ್ಮ ತಮ್ಮ ಆಸ್ತಿ ತೆರಿಗೆಯನ್ನು ಸಂಬಂಧಪಟ್ಟ ವಲಯ ಕಚೇರಿಗಳಲ್ಲಿ ತಮ್ಮ ಮೊಬೈಲ್ ಮತ್ತು ಎ.ಟಿ.ಎಂ.ಕಾರ್ಡ ತೆಗೆದುಕೊಂಡು ಹೋಗಿ ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್. ಅವರು ತಿಳಿಸಿದ್ದಾರೆ.
ವಲಯ ಕಚೇರಿ ವಿಳಾಸ ಹಾಗೂ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು :
ವಾರ್ಡ ಸಂಖ್ಯೆ 1 ರಿಂದ 7 ರಲ್ಲಿ ವಾಸಿಸುವ ಸಾರ್ವಜನಿಕರು ಶಹಾಪೂರದ ಗೋವಾವೇಸ್ ವಾಣಿಜ್ಯ ಸಂಕೀರ್ಣದಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಬಹುದು.
ಮೊ.ಸಂ. 9845891518 ನ್ನು ಸಂಪರ್ಕಿಸಬಹುದು.
ವಾರ್ಡ ಸಂಖ್ಯೆ 8 ರಿಂದ 14 ರಲ್ಲಿ ವಾಸಿಸುವ ಸಾರ್ವಜನಿಕರು ಶಹಾಪೂರದ ಗೋವಾವೇಸ್ ವಾಣಿಜ್ಯ ಸಂಕೀರ್ಣದಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಬಹುದು ಹಾಗೂ ಮೊ.ಸಂ.9900775501 ನ್ನು ಸಂಪರ್ಕಿಸಬಹುದು.
ಅದೇ ರೀತಿ, ಶಹಾಪೂರದ ಗೋವಾವೇಸ್ ವಾಣಿಜ್ಯ ಸಂಕೀರ್ಣದಲ್ಲಿ ವಾರ್ಡ ಸಂಖ್ಯೆ 15 ರಿಂದ 20 ರಲ್ಲಿ ವಾಸಿಸುವ ಸಾರ್ವಜನಿಕರು ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ ಮತ್ತು ಮೊ.ಸಂ. 8970608009
ನ್ನು ಸಂಪರ್ಕಿಸಬಹುದಾಗಿದೆ.
ವಾರ್ಡ ಸಂಖ್ಯೆ 21 ರಿಂದ 26 ರಲ್ಲಿ ವಾಸಿಸುವ ಸಾರ್ವಜನಿಕರು ಕೂಡ ಶಹಾಪೂರದ ಗೋವಾವೇಸ್ ವಾಣಿಜ್ಯ ಸಂಕೀರ್ಣದಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಬಹುದು ಮತ್ತು ಮೊ.ಸಂ.9686799275 ನ್ನು ಸಂಪರ್ಕಿಸಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್. ಮಾಹಿತಿ ನೀಡಿದ್ದಾರೆ.
ವಾರ್ಡ ಸಂಖ್ಯೆ 27 ರಿಂದ 32 ರಲ್ಲಿ ವಾಸಿಸುವ ಸಾರ್ವಜನಿಕರು ತಮ್ಮ ಆಸ್ತಿ ತೆರಿಗೆಯನ್ನು ರಿಸಾಲ್ದಾರ ಗಲ್ಲಿಯಲ್ಲಿರುವ ಹಳೆ ಮಹಾನಗರ ಪಾಲಿಕೆ ಕಟ್ಟಡದಲ್ಲಿ
ಪಾವತಿಸಬಹುದು ಮತ್ತು ಮೊ.ಸಂ.8050133461 ನ್ನು ಸಂಪರ್ಕಿಸಬಹುದು.
ಇನ್ನು, ವಾರ್ಡ ಸಂಖ್ಯೆ 33 ರಿಂದ 39 ರಲ್ಲಿ ವಾಸಿಸುವ ಸಾರ್ವಜನಿಕರು ಕೋನವಾಳ ಗಲ್ಲಿಯಲ್ಲಿರುವ ಗೆಸ್ಟ್ ಹೌಸ್ ನಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಬಹುದು ಹಾಗೂ ಮೊ.ಸಂ. 9731867888 ನ್ನು ಸಂಪರ್ಕಿಸಬಹುದು.
ಅದೇ ರೀತಿ, ಕೋನವಾಳ ಗಲ್ಲಿಯಲ್ಲಿರುವ ಗೆಸ್ಟ್ ಹೌಸ್ ನಲ್ಲಿ ವಾರ್ಡ ಸಂಖ್ಯೆ 40 ರಿಂದ 45 ರಲ್ಲಿ ವಾಸಿಸುವ ಸಾರ್ವಜನಿಕರು ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ ಮತ್ತು ಮೊ.ಸಂ.8147855514
ನ್ನು ಸಂಪರ್ಕಿಸಬಹುದಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್. ಅವರು ತಿಳಿಸಿದ್ದಾರೆ.
ವಾರ್ಡ ಸಂಖ್ಯೆ 46 ರಿಂದ 52 ರಲ್ಲಿ ವಾಸಿಸುವ ಸಾರ್ವಜನಿಕರು ಆಸ್ತಿ ತೆರಿಗೆಯನ್ನು ಅಶೋಕ ನಗರದ ಇ.ಎಸ್.ಐ. ಹಾಸ್ಪಿಟಲ್ ಹತ್ತಿರವಿರುವ ವಲಯ ಕಚೇರಿಯಲ್ಲಿ ಪಾವತಿಸಬಹುದು ಹಾಗೂ ಮೊ.ಸಂ.9731062872 ನ್ನು ಸಂಪರ್ಕಿಸಬಹುದು.
ಅದೇ ರೀತಿ, ಅಶೋಕ ನಗರದ ಇ.ಎಸ್.ಐ. ಹಾಸ್ಪಿಟಲ್ ಹತ್ತಿರವಿರುವ ವಲಯ ಕಚೇರಿಯಲ್ಲಿ ವಾರ್ಡ ಸಂಖ್ಯೆ 53 ರಿಂದ 58 ರಲ್ಲಿ ವಾಸಿಸುವ ಸಾರ್ವಜನಿಕರು ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ ಮತ್ತು ಮೊ.ಸಂ.9902686126 ನ್ನು ಸಂಪರ್ಕಿಸಬಹುದಾಗಿದೆ‌ ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ, ಡೆಬಿಟ್ ಕಾರ್ಡ,ಕ್ರೇಡಿಟ್ ಕಾರ್ಡ ಅಥವಾ ನೆಟ್  ಬ್ಯಾಂಕಿಂಗ್ ಬಳಸಿ, ಆನ್‌ಲೈನ್ ಮೂಲಕ ಕೂಡ ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ ಎಂದು ಎಂದು ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿಗೆ ಮೊಬೈಲ್ ಫೋನ್ ನಿಷೇಧ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button