Kannada NewsKarnataka News

ಸ್ವತಃ ನಿಂತು  ವಿಕಲಚೇತನರಿಗೆ ಕೋವಿಡ್ ವ್ಯಾಕ್ಸಿನೇಷನ್‌ ಹಾಕಿಸಿದ ಲಕ್ಷ್ಮಿ ಹೆಬ್ಬಾಳಕರ್   

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗುರುವಾರ ಕ್ಷೇತ್ರದ ಮುತಗಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಪ್ಪತೈದಕ್ಕೂ ಹೆಚ್ಚಿನ ವಿಕಲಚೇತನರಿಗೆ ಕೋವಿಡ್  ಲಸಿಕೆಗಳನ್ನು (ವ್ಯಾಕ್ಸಿನೇಷನ್‌) ಹಾಕಿಸಿದರು.
ಸ್ವತಃ ನಿಂತು ಲಸಿಕೆಗಳನ್ನು ಹಾಕಿಸಿದ ಹೆಬ್ಬಾಳಕರ್, ವಿಕಲಚೇತನರು ದೇವರ ಮಕ್ಕಳಿದ್ದಂತೆ. ಅವರನ್ನು ಪ್ರೋತ್ಸಾಹಿಸಿ, ಪೋಷಿಸಿ ಬೆಳೆಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ. ಸ್ವಾವಲಂಬಿ, ಸ್ವಾಭಿಮಾನದ ಬದುಕು ಸಾಗಿಸಬೇಕೆಂಬ ಅವರ ಕನಸುಗಳಿಗೆ ನೂರೆಂಟು ವಿಘ್ನಗಳಿವೆ. ಅವರ ಕನಸುಗಳಿಗೆ ನೀರೆರೆಯುವುದಕ್ಕೆ, ಅವರ ರಕ್ಷಣೆಗೆ ಸದಾಕಾಲವೂ ನಿಲ್ಲುವುದಕ್ಕೆ ನಾನು ಸದಾ ಸಿದ್ದನಿದ್ದೇನೆ ಎಂದು ಹೆಬ್ಬಾಳಕರ್ ಈ ಸಂದರ್ಭದಲ್ಲಿ ತಿಳಿಸಿದರು.
 ಇದೇ ಸಂದರ್ಭದಲ್ಲಿ, ಕೋವಿಡ್ ವಾರಿಯರ್ಸ್ಗಳಂತೆ ಹೋರಾಡುತ್ತಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಆರೋಗ್ಯ ಬಗ್ಗೆಯೂ ವಿಚಾರಿಸಿ, ಕೋವಿಡ್ ಲಸಿಕೆಗಳನ್ನು ಹಾಕಿಸಿಕೊಳ್ಳುವಂತೆ, ಸರ್ಕಾರದಿಂದ ವೇತನ ಸೇರಿದಂತೆ ಯಾವುದೇ ಸೌಲಭ್ಯ ಒದಗಿಸುವಲ್ಲಿ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತನ್ನಿ ಎಂದು ಧೈರ್ಯವನ್ನು ತುಂಬಿದರು.
ಜೊತೆಗೆ ಲಕ್ಷ್ಮಿ ತಾಯಿ ಫೌಂಡೇಷನ್ ವತಿಯಿಂದ ರೇಷನ್ ಕಿಟ್ ಗಳನ್ನು ಪೂರೈಸುವ ಭರವಸೆಯನ್ನೂ ನೀಡಿದರು.
ಇನ್ನೆರಡು ದಿನಗಳಲ್ಲಿ ಕ್ಷೇತ್ರದ ಸುಮಾರು  200ಕ್ಕೂ ಹೆಚ್ಚಿನ ಬೀದಿ ವ್ಯಾಪಾರಸ್ಥರಿಗೆ, ಆಟೋ ಚಾಲಕರಿಗೆ ಕೋವಿಡ್ ಲಸಿಕೆಗಳನ್ನು ಹಾಕಿಸುವ ಗುರಿ  ಹೊಂದಿದ್ದೇನೆ ಎಂದು ಹೆಬ್ಬಾಳಕರ್ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕ ಆರೋಗ್ಯಾಧಿಕಾರಿ ಮಾಸ್ತಿಹೊಳಿ, ಮುತಗಾ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹೇಮಲತಾ, ತಾಲೂಕ ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಚಂದ್ರ ಪಾಟೀಲ, ಉಪಾಧ್ಯಕ್ಷರು, ಸದಸ್ಯರು, ಶ್ಯಾಮ ಮುತಗೆಕರ್, ಕಿರಣ ಪಾಟೀಲ, ಸುಧೀರ್ ಪಾಟೀಲ, ಅಜಿತ್ ಪೂಜಾರಿ, ಪಿಂಟು ಯಲಗೌಡ, ಹನಮಂತ ಪಾಟೀಲ, ಮಾರುತಿ ಪಾಟೀಲ, ಬಾಹು ಶಿಂಧೆ, ಸೋಮಲಿಂಗ ಸಣ್ಣಮನಿ, ಶರದ್ ಪಾಟೀಲ, ರಾಧಿಕಾ ಮುತಗೆಕರ್, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button