Latest

ಕೊರೊನಾ ಸೋಂಕಿನ ಮತ್ತೊಂದು ಹೊಸ ತಳಿ ಪತ್ತೆ…!

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಎರಡನೇ ಅಲೆ ಅಟ್ಟಹಾಸ, ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಗಳ ನಡುವೆ ಇದೀಗ ದೇಶದಲ್ಲಿ ಕೊರೊನಾ ಸೋಂಕಿನ ಹೊಸ ತಳಿಯೊಂದು ಪತ್ತೆಯಾಗಿದ್ದು, N440K ಮತ್ತೊಂದು ಸಾಂಕ್ರಾಮಿಕ ವೈರಸ್ ಪತ್ತೆಯಾಗಿದೆ.

ಅಕಾಡೆಮಿಕ್ ಫಾರ್ ಸೈಂಟಿಫಿಕ್ ಆಂಡ್ ರಿಸರ್ಚ್ ಸಂಸ್ಥೆ ಅಧ್ಯಯನದಲ್ಲಿ ಈ ರೋಗದ ಬಗ್ಗೆ ತಿಳಿಸಿದೆ. ದಕ್ಷಿಣ ಭಾರದಲ್ಲಿಯೇ ಅತಿ ಹೆಚ್ಚು ಜನರಲ್ಲಿ ಈ ತಳಿ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ 91, ತೆಲಂಗಾಣ 773, ಕರ್ನಾಟಕದಲ್ಲಿ 54 ಪ್ರಕರಣಗಳು ದಾಖಲಾಗಿವೆ.

ದೇಶದ ಹಲವೆಡೆ ಕೊರೊನಾ ಪರೀಕ್ಷೆ ನಡೆಸಿದಾಗ ಅದರಲ್ಲಿ ಸಂಗ್ರಹಿಸಿದ ಶೇ.50ರಷ್ಟು ಮಾದರಿಗಳು N440K ತಳಿಯಾಗಿದ್ದು, ಈ ತಳಿಗಳು ಅತಿವೇಗವಾಗಿ ಹರಡುತ್ತದೆ ಹಾಗೂ ಸೋಂಕಿನ ತೀವ್ರತೆಯನ್ನು ಹೆಚ್ಚಿಸುತ್ತದೆ ಎಂದು ವರದಿ ತಿಳಿಸಿದೆ.

ಕೊರೊನಾಗೆ ಬಲಿಯಾದ ಒಂದೇ ಕುಟುಂಬದ ನಾಲ್ವರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button