ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೊರೋನಾದಿಂದಾಗಿ ರಾಜ್ಯ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಮಧ್ಯೆಯೇ ರಾಜ್ಯದ 226 ತಾಲೂಕು ಪಂಚಾಯಿತಿಗಳಿಗೆ ಹೊಸದೊಂದು ಹುದ್ದೆ ಸೃಜಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಇದು ಈಗಾಗಲೆ ಇರುವ ಸಹಾಯಕ ನಿರ್ದೇಶಕರ ಹುದ್ದೆಯ ಜೊತೆಗೆ ಮತ್ತೊಂದು ಹೆಚ್ಚುವರಿ ಸಹಾಯಕ ನಿರ್ದೇಶಕರ ಹುದ್ದೆಯಾಗಿದೆ.
ರಾಜ್ಯದ 226 ತಾಲ್ಲೂಕು ಪಂಚಾಯಿತಿಗಳಲ್ಲಿ 226 ಹೊಸ ಹುದ್ದೆಗಳನ್ನು ಹೆಚ್ಚುವರಿಯಾಗಿ ಸೃಜಿಸಿ ಇದೀಗ ಆದೇಶ ಹೊರಡಿಸಲಾಗಿದೆ.
ಈ ರೀತಿ ಹೊಸದಾಗಿ ಸೃಜಿಸಿದ ಹುದ್ದೆಗಳಿಗೆ ಈಗಾಗಲೇ ಚಾಲ್ತಿಯಲ್ಲಿರುವ ವೃಂದ & ನಿಯಮಗಳನ್ವಯ ನೇಮಕಾತಿ ನಡೆಯಲಿದೆ. ಇದು PDO ನಂತರದ ಉನ್ನತ ಹುದ್ದೆಯಾಗಿದೆ.
ಈಗ ಇರುವ ಸಹಾಯಕ ನಿರ್ದೇಶಕರು ಸಂಪೂರ್ಣ ತಾಲೂಕಿನ ಮೇಲ್ವಿಚಾರಣೆ ನಡೆಸಲು ಸಾಧ್ಯವಿಲ್ಲದಿರುವುದರಿಂದ ಹೊಸ ಹುದ್ದೆ ಸೃಜಿಸಲಾಗಿದೆ ಎಂದು ತಿಳಿಸಲಾಗಿದೆ.
ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ – TP Additional AD post-Copy
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ