ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕವಲೆದುರ್ಗ ಕೆಳದಿ ರಾಜಗುರು ಮಹಾಮಹತ್ತಿನ ಭುವನಗಿರಿ ಸಂಸ್ಥಾನ ಮಠದ ಷ ಬ್ರ ಡಾ.ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕೊರೊನಾ ಸೊಂಕಿಗೆ ತುತ್ತಾಗಿದ್ದು, ಇಹಲೋಕತ್ಯಜಿಸಿದ್ದಾರೆ. ಸ್ವಾಮಿಜಿ ನಿಧನಕ್ಕೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಭಾರತೀಯ ಆಧ್ಯಾತ್ಮ ಪರಂಪರೆ ಜಗತ್ತಿನಲ್ಲಿಯೇ ಅನನ್ಯವಾದದ್ದು. ಮಠ-ಮಂದಿರಗಳು, ಸ್ವಾಮಿಗಳು ಈ ನಾಡಿನ ಜೀವ-ಜೀವಾಳ. ಅದರಲ್ಲೂ ವಿದ್ಯದ ಸ್ವಾಮಿಗಳು ಅಂದರೆ ಕವಲೆದುರ್ಗ ಕೆಳದಿ ರಾಜಗುರು ಮಹಾಮಹತ್ತಿನ ಭುವನಗಿರಿ ಸಂಸ್ಥಾನ ಮಠದ ಷ ಬ್ರ ಡಾ. ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು. ಈ ನಾಡು ಕಂಡಂತಹ ಅಪರೂಪದ ಸ್ವಾಮಿಗಳು.
ಇದೀಗ ಕೊವೀಡ್ ದಿಂದ ಲಿಂಗೈಕ್ಯರಾದದ್ದು ತಿಳಿದು ಬೇಸರ, ನೋವು ತರಿಸಿತು. ನಮ್ಮ ನಡುವಿನ ವಿದ್ಯಾವಿಶಾರದೆ ಅಂತೆ ಇದ್ದರು. ಸರ್ವಜನಾಂಗ ಮತ್ತು ಸರ್ವಧರ್ಮವನ್ನು ಪ್ರೀತಿ ಮಾಡುವಂತಹ ಮಾಡಿದ ವಿಶಾಲ ಹೃದಯ ವಂತರಾಗಿದ್ದರು.
ಕನ್ನಡರತ್ನ, ಆಗಮ ಪ್ರವೀಣ, ವೇದಮೂಲ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು 1996ರ ಫೆಬ್ರುವರಿ 4ರಂದು ಉಜ್ಜಯಿನಿ ಜಗದ್ಗುರುಗಳಿಂದ ವೀರಶೈವ ಆಗಮೋಕ್ತವಾಗಿ ಪಟ್ಟಾಧಿಕಾರ ಪಡೆದಿದ್ದರು. ಪಟ್ಟಾಧಿಕಾರ ಪಡೆದಂದಿನಿಂದ ತಮ್ಮ ವಿದ್ವತ್ಪೂರ್ಣ ಪಾಂಡಿತ್ಯದಿಂದ ಮಠದ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿದ್ದರು.
ಜನಿಸಿದ್ದು ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ. ಅಧ್ಯಯನ ಗೈದಂತಹ ಕ್ಷೇತ್ರ ಕಾರ್ಯ ದೊಡ್ಡದು. ಬೆಂಗಳೂರಿನ ಮಹಂತಿನ ಮಠದಲ್ಲಿ ಇದ್ದುಕೊಂಡು ಕನ್ನಡ ಎಂಎ, ಸಂಸ್ಕೃತ ಎಂಎ, ಕನ್ನಡರತ್ನ, ಸಂಸ್ಕೃತ ಸಾಹಿತ್ಯ ಹಾಗೂ ವೀರಶೈವ ಜೈನಾಗಮನಗಳ ಮತ್ತು ವೀರಶೈವ ಶಿವಾನುಭವ ಪರಂಪರೆಯನ್ನು ಅಧ್ಯಯನ ಮಾಡಿದ್ದರು. ಪ್ರಾಚೀನ ಮೌಲ್ಯಗಳೊಂದಿಗೆ ಸಂಸ್ಥಾನ ಮಠದಲ್ಲಿ ಅನ್ನದಾಸೋಹ, ಛತ್ರ ನಿವಾಸ, ವೇದ, ಸಂಸ್ಕೃತ ಪಾಠಶಾಲೆ ಮತ್ತು ಕಲ್ಯಾಣಮಂಟಪ ನಿರ್ಮಿಸುವಂತಹ ಅನೇಕ ಜನಪರ ಯೋಜನೆಗಳನ್ನು ಮಾಡುವುದಿದೆ ಎಂದಿದ್ದರು. ಅದರಲ್ಲಿ ಕೆಲವು ಕಾರ್ಯ ನಡೆದಿವೆ.
ಅದರಲ್ಲೂ ಸ್ವಾಮಿಗಳು ಡಾಕ್ಟರೇಟ್ ಪಡೆದಾಗಲಂತೂ ಅವರ ಆತ್ಮೀಯನಾಗಿದ್ದ ನನಗೆ ಹಂಡೆಹಾಲು ಕುಡಿದಷ್ಟು ಸಂತಸ ಪಟ್ಟಿದ್ದೆ. ಚಿನ್ನದ ಪದಕಗಳ ಮೇಲೆ ಪದಕಗಳು ಬಂದಾಗಲಂತೂ ಬೆರಗಾಗಿ ಹೋಗಿದ್ದೆ. ಕಳೆದ ವರ್ಷ ಸ್ವಾಮಿಜಿಯವರಿಗೆ ಡಿಲೀಟ್ ಪದವಿ ಬಂದಾಗ ಬೆಳಗಾವಿಯ ಹುಕ್ಕೇರಿ ಹಿರೇಮಠದ ಶಾಖಾ ಮಠಕ್ಕೆ ಕರೆಯಿಸಿ ಗೌರವಯುತವಾಗಿ ಸನ್ಮಾನಿಸಿದ್ದನ್ನು ನಾವು ಮರೆಯಲಾರೆವು. ಸ್ವಾಮೀಜಿಯವರೇ ಇನ್ನೂ ನಾನು ಕಲಿಯಬೇಕಾದದ್ದು ಬಹಳಷ್ಟು ಇದೆ ಎಂದಿದ್ದ ಅವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಆಗಿದ್ದರು. ಸಾರಸ್ವತ ಲೋಕದಲ್ಲಿ ಹಲವು ಉತ್ತಮ ಸಾಹಿತಿಕ ಕೃತಿಗಳನ್ನು ಕೂಡ ನೀಡಿದ್ದಾರೆ. ಅವರ ಅಗಲಿಕೆ ಬಹಳ ದು:ಖ ತರಿಸಿದೆ ಎಂದು ತಿಳಿಸಿದ್ದಾರೆ.
ವಿಕಲಚೇತನರು ಹಾಗೂ ಆರೈಕೆದಾರರ ಲಸಿಕಾ ಅಭಿಯಾನಕ್ಕೆ ಚಾಲನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ