ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಜೂನ್ 14ರ ವರೆಗೆ ಲಾಕ್ ಡೌನ್ ಜಾರಿಯಲ್ಲಿದ್ದು ಅದನ್ನು ಮುಂದುವರಿಸಬೇಕೇ ಅಥವಾ ಕೆಲವು ನಿರ್ಬಂಧಗಳೊಂದಿಗೆ ಮುಂದುವರಿಸಬೇಕೇ ಎನ್ನುವ ಕುರಿತು ಇನ್ನೂ ನಿರ್ಧಾರವಾಗಿಲ್ಲ.
ಆದರೆ ಕೊರೋನಾ ಅಬ್ಬರ ಕಡಿಮೆಯಾಗಿರುವುದರಿಂದ ರಾಜ್ಯದಲ್ಲಿ ಹಂತಹಂತವಾಗಿ ಅನ್ ಲಾಕ್ ಮಾಡುವ ಪ್ರಕ್ರಿಯೆ ಈಗಾಗಲೆ ಆರಂಭವಾಗಿದೆ.
ಇನ್ನಷ್ಟು ಅನ್ ಲೌಕ್ ಸಂಬಂಧ 4-5 ದಿನದಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಯಡಿಯೂರಪ್ಪ 3 ದಿನಗಳ ಹಿಂದೆಯೇ ತಿಳಿಸಿದ್ದರು. ಇದರ ಅಂಗವಾಗಿ ಗುರುವಾರ ಮುಖ್ಯಮಂತ್ರಿಗಳು ರಾಜ್ಯದ ಸುಮಾರು 15 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ.
ಕೊರೋನಾ ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿರುವ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಚರ್ಚಿಸುವರು. ಜಿಲ್ಲಾಧಿಕಾರಿಗಳಿಂದ ಬರುವ ಮಾಹಿತಿ ಆಧರಿಸಿ ಅನ್ ಲಾಕ್ ಪ್ರಕ್ರಿಯೆ ಕುರಿತು ಚಿಂತಿಸಲಿದ್ದಾರೆ. ಎಷ್ಟು ಜಿಲ್ಲೆಗಳಲ್ಲಿ ಅನ್ ಲಾಕ್ ಜಾರಿಮಾಡಬೇಕು. ಎಷ್ಟು ಪ್ರಮಾಣದಲ್ಲಿ ಅನ್ ಲಾಕ್ ಮಾಡಬೇಕು. ಯಾವ್ಯಾವುದಕ್ಕೆ ವಿನಾಯಿತಿ ನೀಡಬೇಕು ಎನ್ನುವ ಎಲ್ಲವುಗಳ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಶೇ.10ಕ್ಕಿಂತ ಪಾಸಿಟಿವಿಟ್ ದರ ಹೆಚ್ಚಿರುವ ಜಿಲ್ಲೆಗಳಲ್ಲಿ ಇನ್ನೊಂದು ವಾರ ಸೆಮಿಲಾಕ್ ಡೌನ್ ಮುಂದುವರಿಯುವ ಸಾಧ್ಯತೆ ಇದೆ. ಈ ಜಿಲ್ಲೆಗಳಲ್ಲಿ ಅಗತ್ಯ ವಸ್ತುಗಳ ಖರೀದಿಗಷ್ಟೆ ಅವಕಾಶ ನೀಡಬಹುದು.
ರಾಜ್ಯದ 6 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಇದ್ದರೆ 10 ಜಿಲ್ಲೆಗಳಲ್ಲಿ ಶೇ.10ಕ್ಕಿಂತ ಕಡಿಮೆ ಇದೆ. 15 ಜಿಲ್ಲೆಗಳಲ್ಲಿ ಶೇ.10ಕ್ಕಿಂತಲೂ ಹೆಚ್ಚಾಗಿದೆ.
ಬೆಳಗಾವಿಯಲ್ಲಿ 2 ದಿನ ಸಂಪೂರ್ಣ ಲಾಕ್ ಡೌನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ