Kannada NewsKarnataka News

ಮಹಿಳೆಯರು, ಮಗು ನಾಪತ್ತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ  ಚೆನ್ನಮ್ಮ ನಗರದ ಗೌರಿ ಗಣೇಶ್ ರೆಸಿಡೆನ್ಸಿ ಎಚ್.ಪಿ. ಆಫೀಸ್ ಹತ್ತಿರದ ನಿವಾಸಿಯಾದ ಎರಾ ಬುಷರ ವೈಭವ ಬರ್ಡೆ(ವ.೩೬) ಎಂಬ ಹೆಸರಿನ ಮಹಿಳೆಯು, ಸೋಮವಾರ (ಜೂ.೭) ಮದ್ಯಾಹ್ನ ೧೨ ಗಂಟೆಯ ಸುಮಾರಿಗೆ ತಂದೆ, ತಾಯಿ ಮನೆಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದು, ಮನೆಗೆ ಬಾರದೆ ಕಾಣೆಯಾಗಿದ್ದಾರೆಂದು ತಿಲಕವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಾ ಬುಷರ ವೈಭವ ಬರ್ಡೆ (ವ.೩೬) ೫ ಅಡಿ ಎತ್ತರವಿದ್ದು, ದುಂಡು ಮುಖ, ಗೋದಿ ಮೈಬಣ್ಣ, ಉದ್ದ ಮೂಗು, ಎತ್ತರವಾದ ಹಣೆ ಮತ್ತು ಕಪ್ಪು ಕೂದಲು ಹೊಂದಿದ್ದು, ಸದೃಢ ಮೈಕಟ್ಟು ಹೊಂದಿರುತ್ತಾರೆ.
ಕಾಣೆಯಾದ ಮಹಿಳೆಯು ಕಪ್ಪು ಬಣ್ಣದ ಚೂಡಿದಾರ್ ಧರಿಸಿದ್ದು, ಉರ್ದು, ಕನ್ನಡ, ಮರಾಠಿ, ಹಿಂದಿ, ಇಂಗ್ಲಿಷ್ ಭಾಷೆಯನ್ನು ಮಾತನಾಡುತ್ತಾರೆ.
ಈ ಪ್ರಕಾರ ಚಹರೆಯುಳ್ಳ ಪತ್ತೆಯಾದ ಮಹಿಳೆ ಬಗ್ಗೆ ಮಾಹಿತಿ ಸಿಕ್ಕಲ್ಲಿ, ತಿಲಕವಾಡ ಪೋಲಿಸ್ ಠಾಣೆಯ ದೂರವಾಣಿ ಸಂಖ್ಯೆ: ೦೮೩೧-೨೪೦೫೨೩೬, ಪೋಲಿಸ್ ಇನ್ಸ್ಪೆಕ್ಟರ್ ತಿಲಕವಾಡಿ: ೯೪೮೦೮೦೪೦೫೨, ಪಿಎಸ್‌ಐ(ಕಾ&ಸು) ತಿಲಕವಾಡಿ: ೯೪೮೦೮೦೪೧೧೨, ಪೋಲಿಸ್ ಕಂಟ್ರೋಲ್ ರೂಮ್ ಬೆಳಗಾವಿ: ೦೮೩೧-೨೪೦೫೨೩೧ / ೨೪೦೫೨೫೫ ಅಥವಾ ದೂರುದಾರ ೯೯೦೦೭೫೭೭೭೭ ದೂರವಾಣ ಸಂಖ್ಯೆಗಳಿಗೆ ಸಂಪರ್ಕಿಸಬೇಕೆಂದು ತಿಲಕವಾಡಿ ಪೋಲಿಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಿಳೆ ಮಗು ನಾಪತ್ತೆ

ಚಿಲಕುಂದಿಯ ನಿವಾಸಿಯಾದ ಭಾರತಿ ಚಿದಾನಂದ ತಳವಾರ (ವ.೩೨) ಮತ್ತು ಮಗಳು ಖುಷಿ ಚಿದಾನಂದ ತಳವಾರ (ವ.೦೪) ಎಂಬ ಹೆಸರಿನ ತಾಯಿ ಮತ್ತು ಮಗು, ರವಿವಾರ (ಜೂ.೬) ರಾತ್ರಿ ೧೦ ಗಂಟೆಯಿಂದ(ಜೂ.೭) ಬೆಳಿಗ್ಗೆ ೪ ಗಂಟೆಯ ನಡುವಿನ ಅವಧಿಯಲ್ಲಿ ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಹೋಗಿದ್ದು, ಮರಳಿ ಬರದೇ ತಾಯಿ ಮಗಳು ಕಾಣೆಯಾಗಿದ್ದಾರೆಂದು ಕುಲಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ತೆಯಾದ ಮಹಿಳೆ ಮಗು ಬಗ್ಗೆ ಮಾಹಿತಿ ಸಿಕ್ಕಲ್ಲಿ, ಕುಲಗೋಡ ಪೋಲಿಸ್ ಠಾಣೆಗೆ ಸಂಪರ್ಕಿಸಬಹುದು ಎಂದು ಕುಲಗೋಡ ಪೋಲಿಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button