ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಈ ಬಾರಿ ಎಲ್ಲರೂ ಪಿಯುಸಿ ಪಾಸಾಗಿದ್ದು, ವಿವಿಧ ಪದವಿ ಕೋರ್ಸ್ ಗಳಿಗೆ ಬೇಡಿಕೆ ಬರುತ್ತಿದೆ. ಅಕ್ಟೋಬರ್ ನಿಂದ ಪದವಿ ತರಗತಿಗಳ ಹೊಸ ಶೈಕ್ಷಣಿಕ ವರ್ಷ ಆರಂಭಿಸುವಂತೆ ಉನ್ನತ ಶಿಕ್ಷಣ ಸಚಿವ, ಡಿಸಿಎಂ ಡಾ.ಅಶ್ವತ್ಥನಾರಾಯಣ ಸೂಚಿಸಿದ್ದಾರೆ.
2021-22ನೇ ಸಾಲಿನ ಪದವಿ ತರಗತಿಗಳ ಬಗ್ಗೆ ಕುಲಪತಿಗಳ ಜೊತೆ ಚರ್ಚೆ ನಡೆಸಿದ ಸಚಿವರು, ಅಕ್ಟೋಬರ್ ಮೊದಲ ವಾರದಿಂದ ಪದವಿ ಕೋರ್ಸ್ ಗಳಿಗೆ ದಾಖಲಾತಿ ಆರಂಭಿಸಿ. ಪದವಿ ವ್ಯಾಸಂಗದ ಅಭಿಲಾಶೆಯುಳ್ಳ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಿ ಎಂದರು.
ಬಿಎಸ್ ಇ ಕೋರ್ಸ್ ಗೆ ಈ ಬಾರಿ ಸಿಇಟಿ ಅಂಕ ಪರಿಗಣಿಸುವುದಿಲ್ಲ. ಯಾವ ವಿಶ್ವವಿದ್ಯಾಲಯಗಳಲ್ಲಿ ಪದವಿ ಕೋರ್ಸ್ ಗಳಿಗೆ ಪರೀಕ್ಷೆ ನಡೆಸಿಲ್ಲ ಅಂತಹ ವಿವಿಗಳ ಮಾಹಿತಿ ಪಡೆಯಲಾಗಿದೆ. ರೆಗ್ಯೂಲರ್ ಸೆಮಿಸ್ಟರ್ ಬಗ್ಗೆಯೂ ಚರ್ಚೆ ನಡೆದಿದೆ. ಈಗಾಗಲೇ ಸಮಗ್ರ ಕಲಿಕಾ ನಿರ್ವಹಣ ಅವ್ಯವಸ್ಥೆ ಜಾರಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಏಕೀಕೃತ ವಿವಿ-ಕಾಲೇಜು ನಿರ್ವಹಣಾ ವ್ಯವಸ್ಥೆ ಅನುಸಂಧಾನಗೊಳಿಸಲಾಗುವುದು ಎಂದು ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ ಹೇಗಿದೆ ನೋಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ