Latest

ಈಶ್ವರಪ್ಪ ಆಗ ಏಕೆ ವಿರೋಧಿಸಲಿಲ್ಲ? – ದೇಶಪಾಂಡೆ ಪ್ರಶ್ನೆ

ಬಿರುಗಾಳಿ ಎಬ್ಬಿಸಿದ ಈಶ್ವರಪ್ಪ ಹೇಳಿಕೆ

ಪ್ರಗತಿವಾಹಿನಿ ಸುದ್ದಿ, ಹಳಿಯಾಳ– ಬಿಜೆಪಿಯಲ್ಲಿ ಎದ್ದಿರುವ ಗೊಂದಲದ ಬಗ್ಗೆ ಈಶ್ವರಪ್ಪನವರಿಗೆ ಈಗ ಅರಿವಾಗುತ್ತಿರುವುದು ಆಶ್ಚರ್ಯ. ಕಾಂಗ್ರೆಸ್ ಶಾಸಕರನ್ನು ಕರೆದುಕೊಳ್ಳುವ ಮೊದಲೇ ಹಿರಿಯ ರಾಜಕೀಯ ನಾಯಕರಾದ ಅವರಿಗೆ ಅರಿವಿರಬೇಕಿತ್ತು ಎಂದು ಮಾಜಿ ಸಚಿವ ಹಾಲಿ ಶಾಸಕ ಆರ್.ವಿ. ದೇಶಪಾಂಡೆ ಟಾಂಗ್ ನೀಡಿದ್ದಾರೆ.

ಪೂರ್ಣ ಬಹುಮತವಿಲ್ಲದ ಕಾರಣ ಮುಖ್ಯಮಂತ್ರಿ ಬದಲಾವಣೆ ವಿಚಾರ ಇದೀಗ ಗೊಂದಲಕ್ಕೀಡಾಗಿದೆ ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರ ಹೇಳಿಕೆ ಹಳಿಯಾಳದಲ್ಲಿ ಪ್ರತಿಕ್ರಿಯಿಸಿದ ಅವರು, ಹಿಸ್ಟರಿ ರಿಪೀಟ್ ಆಗಿದೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಏನಾಗಿದೆ ಅಂದ್ರೆ ಇತ್ತ ಜೊತೆಗೆ ಇದ್ದವರು ಅವರ ಹಾದಿ, ಸಂಸ್ಕೃತಿ ಬಿಡುತ್ತಿಲ್ಲ. ಕಾಂಗ್ರೆಸ್ ನಿಂದ ಬಂದವರಿಗೆ ಅಧಿಕಾರ ಸಿಗುತ್ತಿಲ್ಲ. ಅವರವರ ಕೆಲಸಗಳೂ ಆಗುತ್ತಿಲ್ಲ. ಬಿಜೆಪಿಯಿಂದ ನೂರಕ್ಕೂ ಹೆಚ್ಚು ಜನರು ಆಯ್ಕೆಯಾಗಿದ್ದರು ಮಂತ್ರಿಯಾದವರು 10-12 ಜನ ಮಾತ್ರ. ಇದು ಬಹಳ ಜನರಿಗೆ ನೋವಾಗಿದೆ. ನೂರಾರು ಜನ ಬಂದರು, ಪ್ರಾಧಾನ್ಯತೆ ಇಲ್ಲದಂತಾಗಿದೆ. ಇದರ ಮುಂದಾಲೋಚನೆಯನ್ನು ಬಿಜೆಪಿ ಹೈಕಮಾಂಡ್ ಶಾಸಕರನ್ನು ಸೇರಿಸಿಕೊಳ್ಳುವ ಮೊದಲೆ‌ ಮಾಡಬೇಕಿತ್ತು ಎಂದರು.

2 ವರ್ಷ ಮುಗಿಯುವತನಕ ನಾನೇ ಮುಖ್ಯಮಂತ್ರಿ ಎಂದು ಸ್ವತಃ ಯಡಿಯೂರಪ್ಪ ಅವರೇ ಹೇಳಿದ್ರು. ಅದನ್ನ ಹೇಳುವ ಅವಶ್ಯಕತೆ ಅವರಿಗೆ ಇತ್ತೇನು?? ಸಂವಿಧಾನದ ಪ್ರಕಾರ ಇನ್ನು 2 ವರ್ಷ ಇತ್ತು… ನಾನೂ ಎಂಎಲ್ಎ ಇದ್ದೇನೆ. ನಾನು ಯಾಕೆ ಇಷ್ಟು ವರ್ಷ ಇರ್ತೀನಿ ಅಂತ ಹೇಳಲಿ? ಸಂವಿಧಾನದ ಪ್ರಕಾರ ಬರ್ತೀನಿ ಹೋಗ್ತೀನಿ. ಯಡಿಯೂರಪ್ಪನವರಿಗೆ ಆತ್ಮವಿಶ್ವಾಸ ಕಡಿಮೆ ಆಗಿದೆ. ಇದೇ ಅವರ ಹೇಳಿಕೆಗೆ ಕಾರಣ. ಅಂದ್ರೆ ಬಿಜೆಪಿಯಲ್ಲಿ ಒಳಗೇನೋ ನಡೀತಾ ಇದೆ. ಆದ್ರೆ ಇದರಿಂದ ಸಾಮಾನ್ಯ ಜನರಿಗೆ ತೊಂದರೆ ಆಗ್ತಿದೆ. ಕಳೆದ 1 ವರ್ಷದಿಂದ ಆಡಳಿತದ ಮೇಲೆ ದುಷ್ಪರಿಣಾಮ ಆಗ್ತಾ ಇದೆ. ಈ ತರದ ಗೊಂದಲದ ವಾತಾವರಣ ಯಾವತ್ತೂ ನಾನು ನೋಡಿಲ್ಲ. ಅದ್ರಲ್ಲೂ ಈಗ ಭ್ರಷ್ಟಾಚಾರ ಗಗನ್ನಕ್ಕೆರಿದೆ.17 ಜನ ಶಾಸಕರು ಬಿಜೆಪಿಗೆ ಬಂದಮೇಲೆ ಗೊಂದಲ ಉಂಟಾಗಿದೆ ಎಂದು ಈಶ್ವರಪ್ಪ ಹೇಳಿರುವ ಮಾತು ಈಶ್ವರಪ್ಪನವರಿಗೆ ಮೊದಲೇ ಗೊತ್ತಿತ್ತು. ಆದ್ರೆ ಅವರು ಇದಕ್ಕೆ ಜವಾಬ್ದಾರಿ ಯಾಗಿದ್ದಾರೆ ಅನ್ನೋದು ನನ್ನ ಅಭಿಪ್ರಾಯ ಎಂದ್ರು.

17 ಜನ ಬಂದ ನಂತರ ಬಿಜೆಪಿಯಲ್ಲಿ ಗೊಂದಲ: ಈಶ್ವರಪ್ಪ ಬಹಿರಂಗ ಹೇಳಿಕೆ (ವಿಡಿಯೋ ಸಹಿತ)

17 ಜನರ ತ್ಯಾಗದಿಂದಲೇ ಈಶ್ವರಪ್ಪ ಮಂತ್ರಿಯಾಗಿದ್ದು – ಬಿ.ಸಿ.ಪಾಟೀಲ ತಿರುಗೇಟು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button