ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಭವನದ ಉದ್ಯಾನವನ ನಿರ್ವಹಣೆಗಾಗಿ ಸರ್ಕಾರದ ಬೊಕ್ಕಸದಿಂದ ಬರೋಬ್ಬರಿ 3,26,98,613ರೂಪಾಯಿ ಖರ್ಚುಮಾಡಲಾಗಿದೆ.
ಈ ಬಗ್ಗೆ ಆರ್ ಟಿಐ ಹೋರಾಟಗಾರ ಭೀಮಪ್ಪ ಗಡಾದ ಆರೋಪಿಸಿದ್ದು, ಮಾಹಿತಿ ಹಕ್ಕಿನಿಂದ ಅಂಕಿ-ಅಂಶಗಳ ಸಮೇತ ವಿವರಿಸಿದ್ದಾರೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜಭವನ ಉದ್ಯಾನವನಕ್ಕೆ ಬಿಡುಗಡೆಯಾದ ಹಣದ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ್ದಾರೆ.
2014 ಏಪ್ರಿಲ್ ನಿಂದ 2017ರ ಏಪ್ರಿಲ್ ವರೆಗೆ ಉದ್ಯಾನವನದ ದಿನಗೂಲಿ ನೌಕರರ ವೇತನಕ್ಕಾಗಿ ವೆಚ್ಚ ಮಾಡಿದ ಹಣ 11,59,472ರೂ, ರಾಜ್ಯಪಾಲರ ನಿವಾಸದ ಡೈನಿಂಗ್ ಹಾಲ್, ಪ್ರಧಾನ ಕಚೇರಿ, ಗಣ್ಯ ವ್ಯಕ್ತಿಗಳ ಕೊಠಡಿಗಳಲ್ಲಿ ಫ್ಲವರ್ ಪಾಟ್ಸ್ ಸಲುವಾಗಿ ಬಿಡಿ ಹೂಗಳನ್ನು ಬಿಡಿಸಲು 4,80,860ರೂ, ಬ್ರಷ್ ಕಟರ್ ಹಾಗೂ ಪವರ್ ಟಿಲ್ಲರ್ ಗೆ ಇಂಧನ ಖರೀದಿಸಲು 52,428ರೂ, ತರಕಾರಿ ಬೀಜ, ಹೂವಿನ ಸಸಿಗಳು, ಸಸ್ಯ ಸಂರಕ್ಷಣಾ ಔಷಧಿ ಮತ್ತು ಕೆಂಪು ಮಣ್ಣು ಖರೀದಿಗಾಗಿ 15,05,853ರೂ, ಉದ್ಯಾನವನ ಅಬಿವೃದ್ಧಿ ಮಾಸರ್ ಪ್ಲಾನ್ ಹೊಸ ತೋಟಗಳ ಅಭಿವೃದ್ಧಿ, ತುಂತುರು ನೀರಾವರಿ, ಕಾಮಗಾರಿಗಳಿಗಾಗಿ 2017-18ನೇ ಸಾಲಿನಲ್ಲಿ 2,95,00,000 ರೂ.
ಕೇವಲ ರಾಜಭವದನ ಡೈನಿಂಗ್ ಹಾಲ್, ಪ್ರಧಾನ ಕಚೇರಿ, ಗಣ್ಯ ವ್ಯಕ್ತಿಗಳ ಕೊಠಡಿಗಳಲ್ಲಿ ಫ್ಲವರ್ ಪಾಟ್ಸ್ ಸಲುವಾಗಿ ಬಿಡಿ ಹೂಗಳನ್ನು ಬಿಡಿಸಲು ಬರೋಬ್ಬರಿ 5 ಲಕ್ಷ ಖರ್ಚು ಮಾಡಿರುವುದು ಸಾರ್ವಜನಿಕರ ಹುಬ್ಬೇರುವಂತೆ ಮಾಡಿದೆ.
ಬೆಳಗಾವಿ ಜಿಲ್ಲೆಯಲ್ಲಿ ಮಳೆ; ಸೇತುವೆಗಳು ಮುಳುಗಡೆ; 12 ಗ್ರಾಮಗಳ ಸಂಪರ್ಕ ಕಡಿತ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ