ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಲಾಕ್ ಡೌನ್ ನಿಂದಾಗಿ ಬೆಳಗಾವಿಯಲ್ಲಿ ಸಂಕಷ್ಟಕ್ಕೀಡಾಗಿದ್ದ 6 ಒಂಟೆಗಳನ್ನು ರಕ್ಷಿಸಲಾಗಿದ್ದು, ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ಉಸ್ತುವಾರಿ ನೋಡಿಕೊಂಡರು.
ಜನರ ಮನರಂಜನೆಗಾಗಿ ಕೆಲವರು ಬೆಳಗಾವಿಗೆ 7 ಒಂಟೆಗಳನ್ನು ಕರೆತಂದಿದ್ದರು. ಆದರೆ ಲಾಕ್ ಡೌನ್ ನಿಂದಾಗಿ ಅವುಗಳಿಗೆ ಆಹಾರ ಮತ್ತು ಆರೋಗ್ಯದ ಸಮಸ್ಯೆ ಉಂಟಾಗಿತ್ತು. ಅವುಗಳ ಮಾಲಿಕರಿಗೆ ಯಾವುದೇ ಆದಾಯವಿರಲಿಲ್ಲ. ಇದರಿಂದಾಗಿ ಒಂದು ಒಂಟೆ ಮರಣ ಹೊಂದಿತು.
ಹೈಕೋರ್ಟ್ ಆದೇಶ ಮತ್ತು ಕಾನೂನು ಪ್ರಕಾರ ಈ ರೀತಿ ಪ್ರಾಣಿಗಳನ್ನು ಮನರಂಜನೆಗೆ ಬಳಸುವುದು ನಿಷಿದ್ಧ. ಬೆಳಗಾವಿಯ ಎನಿಮಲ್ ರೆಸ್ಕ್ಯೂ ಆ್ಯಂಡ್ ಕೆರ್ (BARC) ಎನ್ ಜಿಒ ಸದಸ್ಯರು ಈ ಒಂಟೆಗಳನ್ನು ಪುಣೆ ಎಪಿಎಂಸಿಗೆ ಸಾಗಿಸಲು ಮುಂದಾದರು. ಕ್ರೇನ್ ಮೂಲಕ ಅವುಗಳನ್ನು ಲಿಫ್ಟ್ ಮಾಡಿ ಲಾರಿಗಳಲ್ಲಿ ಸಾಗಿಸಲಾಯಿತು.
ಈ ವೇಳೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ಉಪಸ್ಥಿತರಿದ್ದು ಉಸ್ತುವಾರಿ ನೋಡಿಕೊಂಡರು. ಸೋನಾಲಿ ಸರ್ನೋಬತ್ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಈ ವಿಷಯದಲ್ಲಿ ನೆರವು ಕೇಳಿದರು.
ಪ್ರಾಣಿಗಳಿಗಾಗಿ ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿ – ಸಚಿವರಲ್ಲಿ ಡಾ.ಸೋನಾಲಿ ಸರ್ನೋಬತ್ 4 ಬೇಡಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ