Latest

ಪ್ರಯಾಣಿಕರ ಗಮನಕ್ಕೆ; ಈ ನಿಯಮ ಪಾಲಿಸಿ ನಾಳೆಯಿಂದ ಬಸ್ ನಲ್ಲಿ ಸಂಚರಿಸಿ…

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾಳೆಯಿಂದ ಅನ್ ಲಾಕ್ ಆರಂಭವಾಗಿತ್ತಿರುವುದರಿಂದ ರಾಜ್ಯಾದ್ಯಂತ ಕೆ ಎಸ್ ಆರ್ ಟಿಸಿ ಬಸ್ ಸಂಚಾರ ಆರಂಭವಾಗಲಿದ್ದು, ಪ್ರಯಾಣಿಕರು ಕೋವಿಡ್ ಮಾರ್ಗಸೂಚಿಯನ್ನು ಪಾಲಿಸುವುದು ಕಡ್ಡಾಯವಾಗಿದೆ.

ನಾಳೆಯಿಂದ ಮೈಸೂರು ಜಿಲ್ಲೆ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲೂ ಕೆ ಎಸ್ ಆರ್ ಟಿಸಿ ಬಸ್ ಸಂಚಾರ ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗಲಿದ್ದು, ಮೊದಲ ಹಂತದಲ್ಲಿ 3000 ಬಸ್ ಗಳು ಸಂಚರಿಸಲಿವೆ. ಆದರೆ ಅಂತರಾಜ್ಯಗಳಿಗೆ ಸದ್ಯಕ್ಕೆ ಬಸ್ ಸಂಚಾರ ಲಭ್ಯವಿರುವುದಿಲ್ಲ. ಪ್ರಯಾಣಿಕರು ಹಾಗೂ ಚಾಲಕರು, ನಿರ್ವಾಹಕರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಸಾರಿಗೆ ಇಲಾಖೆ ಸೂಚಿಸಿದೆ.

ಚಾಲಕರು ಹಾಗೂ ನಿರ್ವಾಹಕರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದ್ದು, ಲಸಿಕೆ ಮೊದಲ ಅಥವಾ ಎರಡನೇ ಡೋಸ್ ಪಡೆದಿರಬೇಕು. ಸಿಬ್ಬಂದಿಗಳು ಮಾಸ್ಕ್ ಧರಿಸುವುದು ಕಡ್ಡಾಯ. ಪ್ರಯಾಣಿಕರು ಮಾಸ್ಕ್ ಇಲ್ಲದೇ ಬಸ್ ಹತ್ತುವಂತಿಲ್ಲ. ಶೇ.50ರಷ್ಟು ಮಾತ್ರ ಪ್ರಯಾಣಿಕರಿಗೆ ಅವಕಾಶವಿದ್ದು, ಮೂಗು, ಬಾಯಿ ಮುಚ್ಚಿಕೊಳ್ಳುವಂತೆ ಮಾಸ್ಕ್ ಧರಿಸಿರಬೇಕು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮಾರ್ಗಸೂಚಿ ಪ್ರಕಟಿಸಲಾಗಿದೆ.
ಬುಧವಾರ ರಮೇಶ ಜಾರಕಿಹೊಳಿ ರಾಜಿನಾಮೆ?; 20 ಸಾವಿರ ಕೋಟಿ ರೂ. ವಿವಾದದ ಸುತ್ತ….

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button