ಪ್ರಗತಿವಾಹಿನಿ ಸುದ್ದಿ; ಶ್ರೀನಗರ: ಜಮ್ಮುವಿನ ಐಎ ಎಫ್ ವಿಮಾನ ನಿಲ್ದಾಣದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿ ಲಭ್ಯವಾಗಿದ್ದು, ಇದೇ ಮೊದಲ ಬಾರಿ ಉಗ್ರರು ಡ್ರೋಣ್ ಬಳಸಿ ಬಾಂಬ್ ಎಸೆದಿದ್ದಾರೆ ಎನ್ನಲಾಗಿದೆ.
ಜಮ್ಮುವಿನ ಐಎ ಎಫ್ ವಿಮಾನ ನಿಲ್ದಾಣದ ಹೆಲಿಕಾಪ್ಟರ್ ಹ್ಯಾಂಗ್ ಬಳಿ ಇಂದು ಮುಂಜಾನೆ ಐಇಡಿ ಬೀಳಿಸಿ ಸ್ಫೋಟ ನಡೆಸಲಾಗಿತ್ತು. ಇಬ್ಬರು ಐಎ ಎಫ್ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಕಟ್ಟಡದ ಛಾವಣಿ ಹಾಗೂ ಓಪನ್ ಏರಿಯಾಗಳಲ್ಲಿ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಪ್ರಕರಣದ ತನಿಖೆ ಚುರುಕುಗೊಳಿಸಲಾಗಿದ್ದು, ಇದೀಗ ಡ್ರೋಣ್ ಸಹಾಯದಿಂದ ಉಗ್ರರು ಬಾಂಬ್ ಸ್ಫೋಟ ನಡೆಸಿದ್ದಾರೆ ಎನ್ನಲಾಗಿದೆ.
ಇಬ್ಬರನ್ನು ಭೇಟಿಯಾದ ಬಳಿಕ ರಮೇಶ್ ಜಾರಕಿಹೊಳಿ ಮಹತ್ವದ ನಿರ್ಧಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ