Latest

ಚುಂಬನದ ಫೋಟೋ ವೈರಲ್: ಆರೋಗ್ಯ ಸಚಿವರ ರಾಜಿನಾಮೆ ; ಪತ್ರದಲ್ಲೇನಿದೆ ಓದಿ

ಇದು ಕೋವಿಡ್ ನಿಯಮಗಳ ಉಲ್ಲಂಘನೆ

 

ಪ್ರಗತಿವಾಹಿನಿ ಸುದ್ದಿ, ಲಂಡನ್ – ಕೋವಿಡ್ ಸಮಯದಲ್ಲಿ ಸಹೋದ್ಯೋಗಿಗೆ ಚುಂಬಿಸಿರುವ ಫೋಟೋ ವೈರಲ್ ಆಗುತ್ತಿದ್ದಂತೆ ಬ್ರಿಟನ್ ಆರೋಗ್ಯ ಸಚಿವ ಮ್ಯಾಟ್ ಹಾನ್ಕಾಕ್ ರಾಜಿನಾಮೆ ನೀಡಿದ್ದಾರೆ.

ಕೊರೋನಾ ವೇಳೆ ಚುಂಬಿಸುವುದು ಕೋವಿಡ್ ( ಸಾಮಾಜಿಕ ಅಂತರದ) ಮಾರ್ಗಸೂಚಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಅದನ್ನು ಒಪ್ಪಿಕೊಂಡು ಬ್ರಿಟನ್ ಆರೋಗ್ಯ ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಆರೋಗ್ಯ ಸಚಿವರಾಗಿ ತಾವೇ ಕೊರೋನಾ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಅವರು ಬೆಲೆ ತೆತ್ತಿದ್ದಾರೆ. ಕಚೇರಿಯಲ್ಲಿ ತಮ್ಮ ಆಪ್ತ ಸಹಾಯಕಿಯನ್ನೇ ಅವರು ಚುಂಬಿಸುತ್ತಿರುವ ಫೋಟೋ ವೈರಲ್ ಆಗಿತ್ತು.  ಹಾಗಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡು ಪ್ರಧಾನಿ ಬಾರಿಶ್ ಜಾನ್ ಸನ್ ಅವರಿಗೆ ತಮ್ಮ ರಾಜಿನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

Home add -Advt

ಜನರು ಕೋವಿಡ್ ಸಮಯದಲ್ಲಿ ಎಷ್ಟೊಂದು ತ್ಯಾಗ ಮಾಡಿದ್ದಾರೆ. ಆದರೆ ಅವರೆದುರು ನಾನೇ ತಪ್ಪು ಮಾಡಿ ಸಣ್ಣವನಾಗಿದ್ದೇನೆ ಎಂದು ಅವರು ರಾಜಿನಾಮೆ ಪತ್ರದಲ್ಲಿ ಬರೆದಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ, ಹಾನ್ಕಾಕ್ ಅವರ ರಾಜಿನಾಮೆ ಸ್ವೀಕರಿಸಲು ಬೇಸರವಾಗುತ್ತಿದೆ. ಅವರ ಸೇವೆಯನ್ನು ನಾನು ಸ್ಮರಿಸುತ್ತೇನೆ ಎಂದಿದ್ದಾರೆ. ಜೊತೆಗೆ ಸಾರ್ವಜನಿಕರು ಈ ವಿಷಯದ ಬಗ್ಗೆ ಹೆಚ್ಚಿನ ಗಮನ ನೀಡದೆ ಕೋವಿಡ್ ನಿಯಮ ಪಾಲಿಸುವುದನ್ನು ಮುಂದುವರಿಸಬೇಕೆಂದು ಕೋರಿದ್ದಾರೆ.

ಕೇವಲ ಚುಂಬನ ನೀಡಿದ್ದಕ್ಕಾಗಿ ಅವರು ರಾಜಿನಾಮೆ ನೀಡುವ ಪ್ರಸಂಗ ಬಂದಿರುವುದು ವಿಪರ್ಯಾಸವೇ ಸರಿ.

 

ಕಾಂಗ್ರೆಸ್ ನಲ್ಲಿಯೂ ಲಿಂಗಾಯತ ನಾಯಕರಿದ್ದೇವೆ; ‘ಕೈ’ ಸಿಎಂ ಅಭ್ಯರ್ಥಿ ಬಗ್ಗೆ ಹೊಸ ಚರ್ಚೆ ಹುಟ್ಟುಹಾಕಿದ ಎಂ.ಬಿ.ಪಾಟೀಲ್

 

Related Articles

Back to top button