ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪ್ರಾದೇಶಿಕ ಆಯುಕ್ತರು ಹಾಗೂ ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ಬಿಮ್ಸ್) ಆಡಳಿತಾತ್ಮಕ ವ್ಯವಸ್ಥೆಯ ಮೇಲುಸ್ತುವಾರಿ ಅಧಿಕಾರಿಗಳಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಮನವಿಯ ಮೇರೆಗೆ ಜಿಲ್ಲೆಯ ವಿವಿಧ ಉದ್ಯಮಿಗಳು ಬಿಮ್ಸ್ ಅಭಿವೃದ್ಧಿಗೆ ಉದಾರ ನೆರವು ನೀಡಿದ್ದಾರೆ.
ಬಿಮ್ಸ್ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ಕಾಗಿ ವಿವಿಧ ಉದ್ಯಮಿಗಳು ಒಟ್ಟಾರೆ ರೂ .22.26 ಲಕ್ಷ ಕೊಡುಗೆಯನ್ನು ನೀಡಲಾಗಿದೆ. ಬೆಳಗಾವಿಯ ಜಿನಾಬಾಕುಲ್ ಫೋರ್ಜ ಪ್ರೈ, ಲಿಮಿಟೆಡ್, ರೂ. 456000, ಜೆ.ಪಿ.ಎಫ್ ಮೆಟಾಕ್ಯಾಸ್ಟ್ ಪ್ರೈ, ಲಿ ರೂ. 125000 ಯಂಕಾಯ್ಸ್ ಎಂಜಿನಿಯರಿಂಗ್ ಪ್ರೈ.ಲಿ 1,20,000, ಏಕಸ್ 10,00,000ನೆತಾಲ್ಕರ್ ಪವರ್ ಟ್ರಾನ್ಸ್ ಮಿಷನ್ 5,00,000, ಡೈಮೆಂಡ್ ಮೆಟಲ್ ಸ್ಕ್ರೀನ್ಸ್ ಪ್ರೈ.ಲಿ ರೂ- 25,000 ಒಟ್ಟು ರೂ. 22,26,000 ಸ್ವೀಕರಿಸಲಾಯಿತು.
ಕೊಡುಗೆ ಸ್ವೀಕರಿಸಿ ಮಾತನಾಡಿದ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು, ಬಿಮ್ಸ್ ಅಭಿವೃದ್ಧಿಗೆ ಉದ್ಯಮಿಗಳು ಕಳಕಳಿಯಿಂದ ಕೊಡುಗೆ ನೀಡಿರುವುದು ಪ್ರಶಂಶನೀಯ. ಈ ಹಣವನ್ನು ಬಿಮ್ಸ್ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಲಾಗುವುದು ಎಂದು ಹೇಳಿದರು. ಅಲ್ಲದೇ ವೈದ್ಯಕೀಯ ಸಂಸ್ಥೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ಉದ್ಯಮಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಬಿಮ್ಸ್ ಸಂಸ್ಥೆಯ ಪ್ರಭಾರ ನಿರ್ದೆಶಕರಾದ ಡಾ. ಉಮೇಶ ಕೆ. ಕುಲಕರ್ಣಿ ಹಾಗೂ ಮುಖ್ಯ ಆಡಳಿತಾಧಿಕಾರಿಗಳು ಎಸ್.ಎಸ್, ಬಳ್ಳಾರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿ; 2 ಲಕ್ಷ 80 ಸಾವಿರ ಜನರಿಗೆ ಕೋವಿಡ್ ಲಸಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ