Latest

ಉಗ್ರರ ಚಟುವಟಿಕೆಗಳಿಗೆ ಕೇಂದ್ರ ಸ್ಥಾನವಾಗುತ್ತಿದೆ ದೇವರನಾಡು

ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ದೇವರನಾಡು ಕೇರಳ ಇದೀಗ ಉಗ್ರರ ನೇಮಕಾತಿ ತಾಣವಾಗಿ ಮಾರ್ಪಡುತ್ತಿದೆ. ವಿದ್ಯಾವಂತ ಯುವಕ-ಯುವತಿಯರು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕೇರಳದ ನಿರ್ಗಮಿತ ಡಿಜಿಪಿ ಲೋಕನಾಥ್ ಬೆಹ್ರ ತಿಳಿಸಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಕೇರಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ಒಂದೆಡೆ ಉಗ್ರರ ನೇಮಕಾತಿ ತಾಣವಾಗುತ್ತಿದ್ದರೆ ಇನ್ನೊಂದೆಡೆ ಕೆಲವರು ಭಯೋತ್ಪಾದಕ ಚಟುವಟಿಕೆಗಳಿಗೆ ಕೋಮು ಬಣ್ಣ ಬಳಿದು ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದರು.

ವಿದ್ಯಾವಂತರು, ಯುವಕ-ಯುವತಿಯರು ಉಗ್ರರ ಜೊತೆ ಸಂಪರ್ಕ ಹೊಂದುತ್ತಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ. ಹಲವು ಅಮಾಯಕರು ಉಗ್ರರ ಗುಂಪಿಗೆ ಸಿಲುಕುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇರಳ ಪೊಲೀಸ್ ಹಲವು ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆಗೆ ಅಡ್ದಿಯುಂಟು ಮಾಡುತ್ತಿದ್ದ ಮಾವೋವಾದಿಗಳ ಪ್ರಯತ್ನಗಳನ್ನು ಹತ್ತಿಕ್ಕಲಾಗಿದೆ. ಮಾವೋವಾದಿಗಳಿಗೆ ಶರಣಾಗಲು ಅವಕಾಶ ನೀಡಲಾಗಿದೆ. ಇದರ ಹೊರತಾಗಿಯೂ ಸಂರಕ್ಷಿತ ಅರಣ್ಯಗಳಲ್ಲಿ ಅಡಗಿ ಕುಳಿತು ಕುಕೃತ್ಯ ನಡೆಸುವವರ ವಿರುದ್ಧ ಕಾರ್ಯಾಚಾರಣೆ ಅನಿವಾರ್ಯ ಎಂದು ಹೇಳಿದರು.

ವಿವಿಧ ಗ್ರಾಮಗಳಿಗೆ ಸಂಸದ ಜೊಲ್ಲೆ ಭೇಟಿ; ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಭರವಸೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button