ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೋವಿಡ್- 19 ರ ಕರೋನಾ ವೈರಾಣುವಿನ ಹರಡುವಿಕೆಯ ನಿಯಂತ್ರಣಕ್ಕಾಗಿ ಪ್ರಸಕ್ತ ಸಾಲಿನ ಜುಲೈ 11 ರಿಂದ ಜುಲೈ 24 ರ ವರೆಗೆ ಪಂಡರಾಪುರ ಕ್ಷೇತ್ರಕ್ಕೆ, ಸಾರ್ವಜನಿಕ ಭಕ್ತಾಧಿಗಳ ಆಗಮನಕ್ಕೆ ನಿರ್ಬಂಧ ವಿಧಿಸಿ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಕಲೇಕ್ಟರ್ ಮತ್ತು ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಅವರು ಆದೇಶ ಹೊರಡಿಸಿದ್ದಾರೆ.
ಏಕಾದಶಿಯ ಅಶಧೀ ಯಾತ್ರಾ ಮಹೋತ್ಸವದ ನಿಮಿತ್ತ ಸೊಲ್ಲಾಪುರ ಜಿಲ್ಲೆಯ ಪಂಡರಾಪುರ ಶ್ರೀ ಕ್ಷೇತ್ರಕ್ಕೆ , ಸಾರ್ವಜನಿಕ ಭಕ್ತಾಧಿಗಳ ಆಗಮನ ನಿರ್ಬಂಧಕ್ಕಾಗಿ ದಿನಾಂಕ ಜುಲೈ 11 ರಿಂದ ಜುಲೈ 25 ರ ಮಧ್ಯರಾತ್ರಿ 12 ಗಂಟೆಯವರೆಗೆ ಅಪರಾಧ ದಂಡ ಸಂಹಿತೆ 144 ರನ್ವಯ ನಿಷೇದಾಜ್ಞೆ ಹಾಗೂ ಬಾಂಬೆ ಪೋಲಿಸ್ ಕಾಯ್ದೆ ಕಲಂ 37 ರನ್ವಯ ನಿರ್ಭಂಧ ಜಾರಿ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯಿಂದ ಹೊರಡುವ ದಿಂಡಿಗಳು ಮತ್ತು ಪಾಲಕಿಗಳೊಂದಿಗೆ ಆಗಮಿಸುವ ಸಾರ್ವಜನಿಕ ಭಕ್ತಾಧಿಗಳ ಗಮನಕ್ಕೆ ತಂದು ಪ್ರವೇಶ ನಿರ್ಬಂಧಿಸಿ ಸಹಕರಿಸಲು ಕೋರಲಾಗಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯ ಸಮಸ್ತ ಸಾರ್ವಜನಿಕ ಭಕ್ತಾಧಿಗಳು ಹಾಗೂ ದಿಂಡಿಗಳ ಮತ್ತು ಪಾಲಕಿಗಳ ಆಯೋಜಕರುಗಳು ಏಕಾದಶಿಯ ಅಶಧೀ ಯಾತ್ರಾ ಮಹೋತ್ಸವದ ನಿಮಿತ್ತ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಪಂಡರಾಪುರದ ಶ್ರೀ ಕ್ಷೇತ್ರಕ್ಕೆ ಪ್ರಯಾಣ ಸಬಾರದು ಎಂದು ಜಿಲ್ಲಾಧಿಕಾರಿಗಳಾದ ಎಂ.ಜಿ ಹಿರೇಮಠ ತಿಳಿಸಿದ್ದಾರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ