Latest

ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಅಭಯ್ ಹೋಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಪ್ರತಿವರ್ಷದಂತೆ ಈ ವರ್ಷವು ಕೂಡ ಪರಿವರ್ತನ ಪರಿವಾರದ ವತಿಯಿಂದ ಶಾಸಕ ಅಭಯ ಪಾಟೀಲ ಆಯೋಜಿಸಿರುವ ಹೋಳಿ ಮಿಲನ್ ಗುರುವಾರ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ನಡೆಯಲಿದೆ.

 ಹೋಳಿಹಬ್ಬದ ನಿಮಿತ್ಯ ಅವರು ಸಂಘಟಿಸುತ್ತಿರುವ 10ನೇ ವರ್ಷದ ಹೋಳಿಮಿಲನ ಕಾರ್ಯಕ್ರಮ ಇದಾಗಿದ್ದು, ಅಂದು ಮುಂಜಾನೆ 9.21ಕ್ಕೆ  ಆರಂಭವಾಗಲಿದೆ.

Home add -Advt

ಹೋಳಿ ಮಿಲನ್ ಕಾರ್ಯಕ್ರಮಕ್ಕೆ ವರ್ಷದಿಂದ ವರ್ಷಕ್ಕೆ ಭಾಗವಹಿಸುವ ಯುವಕ-ಯುವತಿಯರ ಸಂಖ್ಯೆ ಹೆಚ್ಚುತ್ತಿದೆ. 10ನೇ ವರ್ಷದ ಹೋಳಿಮಿಲನ್ ಕಾರ್ಯಕ್ರಮದ ವಿಶೇಷ ಆಕರ್ಷಣೆ ಪುಣೆ ಹಾಗೂ ಕೊಲ್ಲಾಪುರ ಲಾವಣಿ ನೃತ್ಯ, ಸ್ಪಿಂಕಲರ್ ಮೂಲಕ ನೀರು ಸಿಂಪರಣೆ, ಮೈದಾನದಲ್ಲಿ 6 ಬಬಲ್ ಮಶೀನ್ ಗಳನ್ನು ಅಳವಡಿಸಿ, ಬಣ್ಣ-ಬಣ್ಣದ ಬಬಲ್ ಗಳ ಹಾರಾಟ, ರೇನ್ ಗನ್ ಮೂಲಕ ಬಣ್ಣದ ಸಿಂಪರಣೆ, ಪುಡಿಬಣ್ಣ (ಒಣ)ವನ್ನು ಬಳಸುವುದು ಹೀಗೆ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ  ಅಭಯ ಪಾಟೀಲ ವಿನಂತಿಸಿದ್ದಾರೆ.

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ ಹಾಗೂ ನಿಮ್ಮ ಪರಿಚಿತರಿಗೆ ಶೇರ್ ಮಾಡಿ)

Related Articles

Back to top button