ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳ ನಡೆ-ನುಡಿ ನಮಗೆ ಸ್ಫೂರ್ತಿ: ಸಚಿವೆ ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ; ತಾಲೂಕಿನ ನಾಯಿಂಗ್ಲಜದಲ್ಲಿರುವ “ಮ್ಯಾಗ್ನಂ ಟಫ್ ಇಂಡಿಯಾ ಪ್ರೈವೇಟ್ ಲಿ.” ಗಾಜು ಕಾರ್ಖಾನೆಗೆ, ನಡೆದಾಡುವ ದೇವರು, ಪ್ರವಚನಗಳ ಮೂಲಕ ದೇಶ ವಿದೇಶದ ಜನತೆಗೆ ಜ್ಞಾನದಾಸೋಹ ನೀಡುತ್ತಿರುವ ವಿಜಯಪುರದ ಜ್ಞಾನ ಯೋಗಾಶ್ರಮದ ಪರಮಪೂಜ್ಯ ಸಿದ್ದೇಶ್ವರ ಮಹಾ ಸ್ವಾಮೀಜಿಗಳು ಸೌಹಾರ್ದಯುತವಾಗಿ ಗಾಜು ಕಾರ್ಖಾನೆಗೆ ಭೇಟಿ ನೀಡಿದರು.
ಶ್ರೀಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆ ಹಾಗೂ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಬಸವಪ್ರಸಾದ ಜೊಲ್ಲೆ ಯವರು ಆತ್ಮೀಯವಾಗಿ ಬರಮಾಡಿಕೊಂಡು, ಅವರ ಆಶೀರ್ವಾದ ಪಡೆದರು.
ಬಳಿಕ ಸಿದ್ದೇಶ್ವರ ಮಹಾ ಸ್ವಾಮೀಜಿಗಲಿಂದ ದೀಪ ಪ್ರಜ್ವಲನೆ ಮಾಡಿಸಿ, ಸಂಸ್ಥೆಯ ಸಿಬ್ಬಂದಿಗೆ ಆಶೀರ್ವಚನ ನೀಡಿದರು. ಅಲ್ಲಿನ ಕಾರ್ಯವೈಖರಿ, ಗಾಜಿನ ಗುಣಮಟ್ಟ, ಕಾರ್ಮಿಕ ಸ್ನೇಹಿ ವಾತಾವರಣವನ್ನು ಖುದ್ದು ಪರಿಶೀಲಿಸಿ, ಕಾರ್ಖಾನೆಯ ಸುವ್ಯವಸ್ಥೆಯನ್ನು ನೋಡಿ ಹರ್ಷ ವ್ಯಕ್ತ ಪಡಿಸಿದರು.
ಈ ವೇಳೆ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ ಮುಂದೆ ಒಂದು ಗುರಿ ಇರಬೇಕು. ಹಿಂದೆ ಒಂದು ಗುರುಗಳ ಆಶೀರ್ವಾದ ಇರಬೇಕು. ಗುರುಗಳ ದಿವ್ಯಾಶೀರ್ವಾದದಿಂದ ಜೊಲ್ಲೆ ಉದ್ಯೋಗ ಸಮೂಹ ಹೆಮ್ಮರವಾಗಿ ಬೆಳೆದಿದೆ. ಸಿದ್ದೇಶ್ವರ ಮಹಾ ಸ್ವಾಮೀಜಿಗಳು ನಮ್ಮ ಕಾರ್ಖಾನೆಗೆ ಭೇಟಿ ನೀಡಿರುವುದು ನಮ್ಮ ಸೌಭಾಗ್ಯ ಎಂದು ಹೇಳಿದರು.
ಸಿಎಂ ಬಿ.ಎಸ್ ಯಡಿಯೂರಪ್ಪಗೆ ಮತ್ತೆ ಸಂಕಷ್ಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ