ಪ್ರಗತಿವಾಹಿನಿ ಸುದ್ದಿ; ಪುತ್ತೂರು: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯೋರ್ವಳನ್ನು ಪೊಲೀಸರು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಬಳಿಯ ನೆಟ್ಟಣಿಗೆ ಮುಡ್ನೂರು ಬಳಿ ನಡೆದಿದೆ.
ಹನಿಟ್ರ್ಯಾಪ್ ಗೆ ಒಳಗಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾಗಿ 7 ಜನರ ವಿರುದ್ಧ ಯುವಕ ಅಬ್ದುಲ್ ನಾಸೀರ್ ಎಂಬಾತ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಯುವತಿಯೋರ್ವಳನ್ನು ಬಂಧಿಸಿದ್ದು, ಉಳಿದ 6 ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಹನಿಟ್ರ್ಯಾಪ್ ಗೊಳಗಾಗಿ ಬರೋಬ್ಬರಿ 30 ಲಕ್ಷ ರೂ ಕಳೆದುಕೊಂಡಿರುವುದಾಗಿ ನಾಸೀರ್ ದೂರು ದಾಖಲಿಸಿದ್ದ. ಸೇಲ್ಸ್ ಮೆನ್ ಆಗಿದ್ದ ಅಬ್ದುಲ್ ನಾಸೀರ್ ಗೆ, ಚೀಚಗದ್ದೆಯ ಹನೀಫ್ ಯಾನೆ, ಕೊಟ್ಯಾಡಿಯ ಮೊಹಮ್ಮದ್, ಶಾಫಿ, ಸವಣೂರಿನ ಅಝರ್, ಸಯೀದ್ ಮೋನು, ನಾಸೀರ್ ಹಾಗೂ ಕಾರ್ಕಳ ಮೂಲದ ಓರ್ವ ಯುವತಿ ಪರಿಚಯವಾಗಿತ್ತು. ಇದೇಗ್ಯಾಂಗ್ ಇದೀಗ ತನ್ನನು ಹನಿಟ್ರ್ಯಾಪ್ ಮಾಡಿ ಖೆಡ್ಡಾಗೆ ಕೆಡವಿದ್ದು, ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾಗಿ ದೂರು ದಾಖಲಿಸಿದ್ದ.
ಬೆಳಗಾವಿ: ಹಿಂಬಾಲಿಸಿ ಚುಡಾಯಿಸುತ್ತಿದ್ದ ವ್ಯಕ್ತಿಗೆ ಮಹಿಳೆಯಿಂದ ರಸ್ತೆಯಲ್ಲೇ ಬಿತ್ತು ಚಪ್ಪಲಿ ಏಟು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ