Latest

ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಆತಂಕ: ಇದೇ ಮತ್ತೆ ಲಾಕ್ ಡೌನ್ ಗೆ ಕಾರಣವಾಗುವ ಸಾಧ್ಯತೆ

ಭಾರತದ ಒಟ್ಟೂ ನಿತ್ಯದ ಸೋಂಕಿತರ ಸಂಖ್ಯೆಯ ಅರ್ಧದಷ್ಟು ಮಹಾರಾಷ್ಟ್ರ, ಕೇರಳದಲ್ಲಿ

ಪ್ರಗತಿವಾಹಿನಿ ಸುದ್ದಿ, ನವದೆಹಲಿ/ ಬೆಂಗಳೂರು – ಇನ್ನೇನು ಕೊರೋನಾ ಎರಡನೇ ಅಲೆ ತೊಲಗಿತು ಎನ್ನುವ ಹೊತ್ತಿಗೆ ಮತ್ತೊಂದು ದೊಡ್ಡ ಆತಂಕ ಕರ್ನಾಟಕಕ್ಕೆ ಎದುರಾಗಿದೆ. ಇದರಿಂದಾಗಿ ಮೂರನೇ ಅಲೆಯ ಅವಧಿಗಿಂತಲೂ ಮೊದಲೆ ಇನ್ನೊಮ್ಮೆ ಕರ್ನಾಟಕವನ್ನು ಕಂಗೆಡಿಸುವ ಸಾಧ್ಯತೆ ಕಾಣುತ್ತಿದೆ.

ಇಡೀ ರಾಷ್ಟ್ರದಲ್ಲಿ ನಿತ್ಯ ಕಂಡು ಬರುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆಯ ಅರ್ಧದಷ್ಟು ಕೇವಲ ಎರಡೇ ಎರಡು ರಾಜ್ಯದಲ್ಲಿ ಕಂಡು ಬರುತ್ತಿದೆ. ಕರ್ನಾಟಕದ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ನಿತ್ಯಂತ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆ ಭಾರತದ ಒಟ್ಟೂ ಸೋಂಕಿತರ ಸಂಖ್ಯೆ ಅರ್ಧದಷ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೊರೋನಾ ಮೊದಲ ಮತ್ತು ಎರಡನೇ ಅಲೆಯಲ್ಲಿ ಕರ್ನಾಟಕಕ್ಕೆ ದೊಡ್ಡ ಸಂಕಷ್ಟ ತಂದಿದ್ದೇ ಪಕ್ಕದ ಮಹಾರಾಷ್ಟ್ರ ಮತ್ತು ಕೇರಳ. ನಂತರದಲ್ಲಿ ಈ ರಾಜ್ಯಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ ಎಂದೇ ಭಾವಿಸಲಾಗಿತ್ತು. ಹಾಗಾಗಿ ಅಲ್ಲಿ ಅನ್ ಲಾಕ್ ಘೋಷಿಸಲಾಗಿತ್ತು.

ಆದರೆ ಈಗ ಈ ಎರಡೂ ರಾಜ್ಯಗಳಲ್ಲಿ ತೀವ್ರಗತಿಯಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಏರುತ್ತಿದೆ. ಅನ್ ಲಾಕ್ ಮಾಡುವ ಸಂದರ್ಭದಲ್ಲಿದ್ದ ಸೋಂಕಿತರ ಪ್ರತಿ ನಿತ್ಯದ ಸಂಖ್ಯೆಗಿಂತ ಹೆಚ್ಚುಕಡಿಮೆ ಎರಡುಪಟ್ಟು ಏರಿಕೆ ಕೆಲವೇ ದಿನಗಳಲ್ಲಿ ಆಗಿದೆ. ಅಲ್ಲದೆ ದಿನದಿಂದ ದಿನಕ್ಕೆ ಈ ಸಂಖ್ಯೆ ಏರುತ್ತಲೇ ಇದೆ.

ಕೇರಳದಲ್ಲಿ 8 ಸಾವಿರಕ್ಕೆ ಇಳಿದಿದ್ದ ದಿನದ ಸೋಂಕಿತರ ಸಂಖ್ಯೆ ಈಗ 15 -16 ಸಾವಿರಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ 6 ಸಾವಿರಕ್ಕಿ ಇಳಿದಿದ್ದು ಈಗ 9 -10 ಸಾವಿರಕ್ಕೆ ಏರಿದೆ.

ಈಗ ಕರ್ನಾಟಕದಿಂದ ಈ ಎರಡೂ ರಾಜ್ಯಗಳಿಗೆ ಬಸ್ ಸಂಚಾರ ಸೇರಿದಂತೆ ಎಲ್ಲ ಸಾರಿಗೆ ವ್ಯವಸ್ಥೆಯೂ ಆರಂಭವಾಗಿದೆ. ನೆಗೆಟಿವ್ ರಿಪೋರ್ಟ್ ಕಡ್ಡಾಯ ಎಂದು ಹೇಳಲಾಗಿದ್ದರೂ ಕಟ್ಟುನಿಟ್ಟಾಗಿ ಜಾರಿಮಾಡುವುದು ಸುಲಭವಿಲ್ಲ. ಹಾಗಾಗಿ ಮತ್ತೆ ಕರ್ನಾಟಕಕ್ಕೆ ದೊಡ್ಡ ಹೊಡೆತ ನೀಡಬಹುದು ಎನ್ನುವ ಆತಂಕ ಎದುರಾಗಿದೆ.

ಅಲ್ಲದೆ, ಕರ್ನಾಟಕದಲ್ಲಿ ಕೂಡ ಸೋಂಕಿತರ ಸಂಖ್ಯೆ ಕಳೆದ 3 -4 ದಿನದಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ನಿತ್ಯ 1500ಕ್ಕೆ ಇಳಿದಿದ್ದ ಸಂಖ್ಯೆ 3 ಸಾವಿರದತ್ತ ಸಾಗಿದೆ. ಮಾರುಕಟ್ಟೆಗಳು ಜಾತ್ರೆಯೋಪಾದಿಯಲ್ಲಿ ಜನಸಂದಣಿಯಿಂದ ತುಂಬುತ್ತಿವೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಜನರು ಮರೆಯುತ್ತಿದ್ದಾರೆ.

ಹಾಗಾಗಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ. ಜುಲೈ 19ರಿಂದ ಮತ್ತೆ ಲಾಕ್ ಡೌನ್ ಜಾರಿಗೊಳಿಸುವ ಅಏನಿವಾರ್ಯತೆ ಸೃಷ್ಟಿಸಬೇಡಿ ಎಂದು ಜನರಲ್ಲಿ ಎಚ್ಚರಿಕೆ ರೂಪದ ಮನವಿ ಮಾಡಿದ್ದಾರೆ. ಅನ್ ಲಾಕ್ ಘೋಷಿಸುವಾಗಲೇ ಅವರು ಕೇವಲ 2 ವಾರಕ್ಕಾಗಿ (ಜುಲೈ 19ರ ವರೆಗೆ ) ಎಂದು ತಿಳಿಸಿದ್ದರು.

ಈ ಎಲ್ಲ ಬೆಳವಣಿಗೆಗಳು ಮತ್ತೆ ಕರ್ನಾಟಕಕ್ಕೆ ದೊಡ್ಡ ಆತಂಕ ತಂದಿಟ್ಟಿದೆ. ಜನರೇ ಎಚ್ಚರಿಕೆ ವಹಿಸಬೇಕು. ಆದಷ್ಟು ಮಹಾರಾಷ್ಟ್ರ, ಕೇರಳ ಸಂಪರ್ಕ ಕಡಿದುಕೊಳ್ಳಬೇಕು.

ಜುಲೈ 19ರಿಂದ ಮತ್ತೆ ರಾಜ್ಯದಲ್ಲಿ ಲಾಕ್ ಡೌನ್?

ರಾಜ್ಯದಲ್ಲಿ ಈವರೆಗೆ ಒಟ್ಟೂ ಎಷ್ಟು ಜನರಿಗೆ ಕೊರೋನಾ ಬಂದಿದೆ? -ಇಲ್ಲಿದೆ ಹಲವು ಮಾಹಿತಿ

ಬೆಳಗಾವಿ: ಅಮಾವಾಸ್ಯೆ ಪೂಜೆಗೆ ತೆರಳಿದ್ದ ಯುವಕರಿಬ್ಬರು ಭೀಕರ ಅಪಘಾತಕ್ಕೆ ಬಲಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button