ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕರೆದ ರಾಷ್ಟ್ರೀಯ ಕಾರ್ಯದರ್ಶಿಗಳ ಸಭೆಯಲ್ಲಿ ಬಿಜೆಪಿ ನಾಯಕರ ಕ್ಲಾಸ್ ತೆಗೆದುಕೊಂಡ ಸುದ್ದಿ ಇದೆ.
ಸಚಿವ ಹುದ್ದೆ ‘ಆಕಾಂಕ್ಷಿ’ ಹೊಂದಿರುವ ನಾಯಕರನ್ನೂ ಮೋದಿ ಅವರು ತರಾಟೆಗೆ ತೆಗೆದು ಕೊಂಡಿದ್ದಾರೆ.
“ಇದೀಗ, ಅನೇಕರು ಮಂತ್ರಿಗಳಾಗುವ ಆತುರದಲ್ಲಿದ್ದಾರೆ. ಆದರೆ ಈಗ ಜನ ಸೇವೆ ಮಾಡುವ ಸಮಯ. ಸಚಿವ ಸ್ಥಾನ ಕೇಳುವದಲ್ಲ ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಂಕಜಾ ಮುಂಡೆ ಭಾಗವಹಿಸಿದ ಸಭೆಯಲ್ಲಿ ಹೇಳಿದರು.
ಸಚಿವ ಸಂಪುಟದಲ್ಲಿ ಸ್ಥಾನ ಸಿಗದೇ ಅಸಮಾಧಾನಗೊಂಡಿರುವ ಮುಖಂಡರಿಗೆ ಮೋದಿ ಸರಿಯಾಗಿ ಮಂಗಳಾರತಿ ಮಾಡಿರುವ ಸುದ್ದಿ ರಾಜಧಾನಿಯಲ್ಲಿ ಚರ್ಚೆಯಲ್ಲಿದೆ.
ಪ್ರೀತಮ್ ಮುಂಡೆಗೆ ಕೇಂದ್ರದಲ್ಲಿ ಸ್ಥಾನ ಸಿಗದ ಕಾರಣ, ಮುಂಡೆ ಸಹೋದರಿಯರು ಅಸಮಾಧಾನಗೊಂಡಿದ್ದಾರೆ ಎಂದು ಚರ್ಚೆಗಳು ಕಾವೇರಿದ್ದವು.
ಏತನ್ಮಧ್ಯೆ, 11 ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಗಳ ಸಭೆ ಪ್ರಧಾನಿ ನರೇಂದ್ರ ಮೋದಿಯವರ ನಿವಾಸದಲ್ಲಿ ಆಯೋಜಿಸಲಾಗಿತ್ತು. ಸಭೆಯಲ್ಲಿ ಅಧ್ಯಕ್ಷ ಜೆ.ಪಿ.ನಡ್ಡಾ, ಬಿ.ಎಲ್.ಸಂತೋಷ್, ಪಂಕಜಾ ಮುಂಡೆ, ವಿನೋದ್ ತಾವ್ಡೆ, ವಿಜಯ ರಹಾಟ್ಕರ್, ಸುನಿಲ್ ದೇವಧರ್ ಭಾಗವಹಿಸಿದ್ದರು.
“ತಾಳ್ಮೆಯಿಂದಿರಿ ಇಲ್ಲದಿದ್ದರೆ ರಾಜಕೀಯ ಕೊನೆಗೊಳ್ಳುತ್ತದೆ”
ಎಷ್ಟೇ ಶ್ರೇಷ್ಠ ನಾಯಕನಾಗಿದ್ದರೂ ರಾಜಕೀಯದಲ್ಲಿ ಸಂಯಮ ವಿಲ್ಲದಿದ್ದರೆ ಅವರ ರಾಜಕೀಯ ಕೊನೆಗೊಳ್ಳುತ್ತದೆ” ಎಂದು ಸಭೆಯಲ್ಲಿ ಉಪಸ್ಥಿತರಿದ್ದ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಕಿವಿ ಮಾತು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ನೇರ ಬಾಣ ಪಂಕಜಾ ಮುಂಡೆ ಅವರ ದಿಕ್ಕಿಗಿತ್ತು ಎಂದು ಸಭೆಯ ನಂತರ ಪದಾಧಿಕಾರಿಗಳಲ್ಲಿ ಚರ್ಚೆ ಪ್ರಾರಂಭವಾಯಿತು.
ರಾಜಕೀಯದಲ್ಲಿ ಸಂಯಮದ ಉದಾಹರಣೆ ನೀಡುವಾಗ ಪ್ರಧಾನಿ ಮೋದಿ, ಮೂರು ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಮೊದಲ್ಲನೆಯದ್ದು ಶಂಕರ್‌ಸಿಂಗ್ ವಾಘೇಲಾ, ಎರಡನೇ ಮದನ್‌ಲಾಲ್ ಖುರಾನಾ ಮತ್ತು ಮೂರನೇ ಕಲ್ಯಾಣ್ ಸಿಂಗ್. ಮೂವರೂ ರಾಜಕೀಯ ರಂಗದಲ್ಲಿದ್ದ ದೂರದೃಷ್ಟಿ ನಾಯಕರು. ಆದರೆ ಸಂಯಮ ತಪ್ಪಿತು ಮತ್ತು ಮೂವರ ರಾಜಕೀಯವು ಜೀವನ ಕೊನೆಗೊಂಡಿತು ಎಂದು ಮೋದಿ ಹೇಳಿದರು.
ನೀವು ತುಂಬಾ ಮಾತನಾಡುತ್ತೀರಿ…..
ಓಟ್ಟು 11 ರಾಷ್ಟ್ರೀಯ ಕಾರ್ಯದರ್ಶಿಗಳ ಸೋಶಿಯಲ್ಲ ಮಿಡಿಯಾ ವರದಿ ಕೈಯಲ್ಲಿ ಹಿಡಿದು ಪ್ರಧಾನಿ ನರೇಂದ್ರ ಮೋದಿ ಅವರು ಕುಳಿತಿದ್ದರು. ಒಟ್ಟು 25 ರಾಷ್ಟ್ರೀಯ ವಿಷಯಗಳನ್ನು ಆಯ್ಕೆ ಮಾಡಲಾಗಿತ್ತು. ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಯಾವ ನಾಯಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂಬುದರ ಡಿಟೇಲ್ ಮಾಹಿತಿ ಅವರಲ್ಲಿತ್ತು. ಆದ್ದರಿಂದ ಎಲ್ಲರೂ ಶಾಕ್ ಬಡಿದಂತಾಯಿತು.
ಪಂಕಜಾ ಮುಂಡೆ ಅವರ ಸರದಿ ಬಂದಾಗ, “ಪಂಕಜಾ, ನೀವು ತುಂಬಾ ಮಾತನಾಡುತ್ತೀರಿ … ‘ಸ್ಥಳೀಯ’ ವಿಷಯಗಳ ಬಗ್ಗೆ ಸಾಕಷ್ಟು ಮಾತನಾಡುತ್ತೀರಿ. ಆದರೆ ನೀವು ರಾಷ್ಟ್ರೀಯ ವಿಷಯದ ಬಗ್ಗೆ ಮಾತನಾಡುತ್ತಿರುವುದು ತೋರುತ್ತಿಲ್ಲ. ರಾಷ್ಟ್ರೀಯ ವಿಷಯಗಳ ಬಗ್ಗೆ ನಿಮ್ಮ ಟ್ವೀಟ್‌ಗಳು ಕಡಿಮೆ ಇವೆ. ಸ್ಥಳೀಯ ಸಮಸ್ಯೆಗಳಿಗಿಂತ ರಾಷ್ಟ್ರೀಯ ವಿಷಯಗಳ ಬಗ್ಗೆ ಹೆಚ್ಚು ಗಮನ ಕೊಡಿ, ” ಎಂದು ಮೋದಿ ಸಲಹೆ ನೀಡಿದರು. ಆದರೆ, ಇದನ್ನು ಹೇಳುವಾಗ, ಮೋದಿಜಿ .. ನೀವು ತುಂಬಾ ಮಾತನಾಡುವ ಪದಕ್ಕೆ ಒತ್ತು ನೀಡಿದ್ದರಿಂದ ಪ್ರತಿಯೊಬ್ಬರು ಅದನ್ನು ಅರ್ಥಮಾಡಿಕೊಂಡರು.
ಬೀಡ್ ಜಿಲ್ಲೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಗೋಶಾಲೆ ನಿರ್ಮಿಸಿದ್ದಾರೆ. ನೂರಾಐವತ್ತು ದನಗಳನ್ನು ನೋಡಿಕೊಳ್ಳುತ್ತಾನೆ. ಅವರಿಗೆ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ನೀಡಲಾಗಿದೆ. ಅವರನ್ನು ಭೇಟಿ ಯಾಗಿದ್ದೀರಾ ಎಂದು ಮೋದಿ ಪಂಕಜಾ ಮುಂಡೆ ಅವರನ್ನು ಪ್ರಶ್ನಿಸಿದರು.
25 ಪೊಲೀಸ್ ಇನಸ್ಪೆಕ್ಟರ್ ಗಳ ವರ್ಗಾವಣೆ
ಪೊಲೀಸ್ ಇಲಾಖೆಯಲ್ಲಿ ವಿನೂತನ ಹುದ್ದೆ ಸೃಷ್ಟಿ; 206 ಅಧಿಕಾರಿಗಳ ನೇಮಕ; ದೇಶದಲ್ಲೇ ಮೊದಲು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ