Kannada NewsKarnataka News

ಬಹುದಿನಗಳ ಕನಸು ಸಾಕಾರ – ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಕಲೆ, ಜನಪದ, ಸೇರಿದಂತೆ ವಿವಿಧ ವೇಷ ಧರಿಸಿ ಗ್ರಾಮಗಳಲ್ಲಿ ತೇರಳಿ ಜನರಲ್ಲಿ ಮನರಂಜನೆ ಮೂಡಿಸಿ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವ ಬೋರಗಾಂವ ಪಟ್ಟಣದ ಅಲೇಮಾರಿ ಜನಾಂಗದವರಿಗೆ ಜಾಗ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಸರ್ಕಾರದ ವಿಶೇಷ ಅಧಿವೇಶನದಲ್ಲಿ ಚರ್ಚಿಸಿ ಪಟ್ಟಣದ ೧೭ ಅ ಸರ್ವೆನಲ್ಲಿ ೦೨ ಏಕರೆ ಜಾಗ ಮಂಜೂರು ಮಾಡಲಾಗಿದೆ. ಅವರ ಬೇಡಿಕೆಯಂತೆ ಶೀಘ್ರವೇ ಅವರಿಗೆ ಸೂರು ಕಲ್ಪಿಸಲು ಪ್ರಯತ್ನಿಸಲಾಗುವದು ಎಂದು ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದರು.

ತಮ್ಮ ಜೀವನೋಪಾಯಕ್ಕಾಗಿ ಒಂದೇ ಕಡೆ ನೆಲೆಯೂರದೇ ಅಲೆದಾಡುವ ಬಹುರೂಪಿ ಅಲೆಮಾರಿ ಜನಾಂಗದವರು, ತಮ್ಮದೇ ಆದ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಹೊಂದಿದ್ದು, ಸಮಾಜದ ಸಾಂಸ್ಕೃತಿಕ ಸಂಪತ್ತನ್ನು ಹೆಚ್ಚಿಸಿದ್ದಾರೆ. ಪಾರಂಪರಿಕ ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಇಂತಹ ಜನಾಂಗದವರಿಗೆ ಸೂರು ಒದಗಿಸಿ, ನೆಮ್ಮದಿಯ ಬದುಕು ನಡೆಸಲು ಅನುಕೂಲ ಕಲ್ಪಿಸಿಕೊಡಬೇಕು ಎಂಬುದು ನನ್ನ ಬಹುದಿನಗಳ ಕನಸಾಗಿತ್ತು.

ಪ್ರಸ್ತುತ ಈ ನನ್ನ ೮ ವರ್ಷಗಳ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಬೋರಗಾಂವ ಪಟ್ಟಣದ ಅಲೇಮಾರಿ, ಬುಡುಗಜಂಗಮ ಹಾಗೂ ಗೊಂಧಳಿ ಸಮಾಜದ ೩೮ ಕುಟುಂಬದವರಿಗೆ ನಿವೇಶನ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ನಿಪ್ಪಾಣ ತಾಲೂಕಿನಲ್ಲಿ ಕೃಷಿ, ಶಿಕ್ಷಣ, ಆರೋಗ್ಯ, ಸಾಮಾಜೀಕಿ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಪೂರೈಸಲಾಗುತ್ತಿದೆ. ೨೦೨೨-೨೩ ನೇ ಸಾಲಿನ ವರೇಗೂ ಬಡ ಜನರಿಗೆ ಮನೆಕಟ್ಟಿ ಕೋಡುವ ಸಂಕಲ್ಪ ಪ್ರಧಾನಿಯವರು ಹೊಂದಿದ್ದು, ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಕೂಡ ಕಾರ್ಯ ಮಾಡಲಾಗುತ್ತಿದೆ ಎಂದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಅಲೇಮಾರಿ ಜನಾಂಗದವರಿಗೆ ಜಾಗ ಮಂಜೂರಾತಿಗಾಗಿ ಅನೇಕ ಅಡಚಣೆ ಬಂದರು ಕೂಡ ಅಧಿಕಾರಿಗಳ ಸಹಕಾರ್ಯದಿಂದ ೨ ಏಕರೆ ಜಾಗ ಮಂಜೂರಾಗಿದೆ.ಅಲೇಮಾರಿ ಜನಾಂಗದ ಬಹು ದಿನದ ಬೇಡಿಕೆಗೆ ಸ್ಪಂದಿಸಿರುವ ಸಚಿವೆ ಶಶಿಕಲಾ ಜೊಲ್ಲೆ ಇವರು ನಿಪ್ಪಾಣಿ ಮತಕ್ಷೇತ್ರದಲ್ಲಿ ಬೋರಗಾಂವ ಪಟ್ಟಣಕ್ಕೆ ಹೆಚ್ಚಿನ ಅಭಿವೃದ್ಧಿಗೆ ಆದ್ಯತೆ ನಿಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಿಪ್ಪಾಣಿ ತಹಶಿಲ್ದಾರ ಪ್ರಕಾಶ ಗಾಯಕವಾಡ, ಇ.ಒ ಮಂಜುನಾಥ ಉಳಾಗಡ್ಡೆ, ತಾಲೂಕು ಹಿಂದುಳಿದ ಕಲ್ಯಾಣ ಅಧಿಕಾರಿ ಎಸ.ಬಿ. ಸೌದಾಗರ, ತಾಲೂಕು ಹೇಸ್ಕಾಂ ಅಭಿಯಂತ ಎಚ.ಬಿ. ಶೇಖರ, ನಿಪ್ಪಾಣ ಬಿಜೆಪಿ ಗ್ರಾಮೀಣ ಅಧ್ಯಕ್ಷ ಪವನ ಪಾಟೀಲ, ಸರೀಜನಿ ಜಮದಾಡೆ, ಭರತ ಬಹೂರೂಪಿ, ದತ್ತಾ ಡವದತೆ, ಪ.ಪಂ ಸದಸ್ಯೆ ಮೀನಾ ಭಾದುಲೆ, ರಾಣ ಬೇವಿನಕಟ್ಟಿ, ಬಾಬಾಸೋ ಚೌಗುಲೆ, ದಾದಾಸೋ ಭಾದುಲೆ, ರಾಮಗೋಂಡಾ ಪಾಟೀಲ, ಸುನೀಲ ಪಾಟೀಲ, ಎ.ಪಿ.ಎಂ.ಸಿ ನಿರ್ದೇಶಕ ನಿತೇಶ ಖೋತ, ಬಜರಂಗ ಚವ್ಹಾನ, ನಾರಾಯಣ ಅಡೇಕರ, ರಾಜು ಸಂಕನ್ನವರ, ಕಾಕಾಸಾಬ ವಾಘಮೋಡೆ, ಶೇಷು ಐದಮಾಳೆ, ಅಜೀತ ಪಾಟೀಲ, ಉದಯಕುಮಾರ ಪಾಟೀಲ ಹಾಜರಿದ್ದರು.

ಚಕ್ಕಡಿಯಲ್ಲಿ ಸಂಚರಿಸುವ ಮೂಲಕ ರೈತರಲ್ಲಿ ನವೋಲ್ಲಾಸ ತುಂಬಿದ ಜೊಲ್ಲೆ ದಂಪತಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button