Kannada NewsKarnataka NewsLatest

ಜಲಜೀವನ ಮಿಷನ್ ಕಾಮಗಾರಿಗೆ 36.50 ಕೋಟಿ ರೂ. : ಶಾಸಕ ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅನುದಾನದಡಿ ಅರಭಾವಿ ಮತಕ್ಷೇತ್ರಕ್ಕೆ ಜೆಜೆಎಂ ಯೋಜನೆಯಡಿ ೩೬.೫೦ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಮಂಗಳವಾರ ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ೧.೬೦ ಕೋಟಿ ರೂ. ವೆಚ್ಚದ ಜೆಜೆಎಂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ ಎಂದು ಹೇಳಿದರು.
ಪ್ರತಿ ಮನೆ ಮನೆಗಳಿಗೆ ಕುಡಿಯುವ ನೀರಿಗಾಗಿ ಸಂಪರ್ಕ ಕಲ್ಪಿಸಲು ಈಗಾಗಲೇ ಅನುದಾನ ತಂದು ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಕ್ಷೇತ್ರದ ಪ್ರತಿ ಹಳ್ಳಿಗಳಿಗೂ ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ವಡೇರಹಟ್ಟಿ ಗ್ರಾಮದ ಅಭಿವೃದ್ಧಿಗಾಗಿ ಸರ್ಕಾರದಿಂದ ಸಾಕಷ್ಟು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ವಡೇರಹಟ್ಟಿ-ಫುಲಗಡ್ಡಿ ಗ್ರಾಮಸ್ಥರ ಅನುಕೂಲಕ್ಕಾಗಿ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿದ್ದು, ಎರಡು ತಿಂಗಳೊಳಗೆ ಮನೆ ಮನೆಗೆ ನಳಗಳ ಮೂಲಕ ನೀರು ತಲುಪಲಿದೆ ಎಂದು ಹೇಳಿದರು.

ಶಾಲಾ ಕೊಠಡಿಗಳ ಉದ್ಘಾಟನೆ :

ಆರ್‌ಎಂಎಸ್‌ಎ ಯೋಜನೆಯಡಿ ೭೮.೨೦ ಲಕ್ಷ ರೂ. ವೆಚ್ಚದಲ್ಲಿ ಸರಕಾರಿ ಪ್ರೌಢ ಶಾಲೆಗೆ ನೂತನವಾಗಿ ನಿರ್ಮಿಸಲಾದ ೮ ಶಾಲಾ ಕೊಠಡಿಗಳು, ೨.೪೮ ಲಕ್ಷ ರೂ. ವೆಚ್ಚದ ಶೌಚಾಲಯ ಕಟ್ಟಡ, ೨೦೧೩-೧೪ನೇ ಸಾಲಿನ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ೬೧.೩೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬಾಲಕಿಯರ ಹೆಚ್ಚುವರಿ ವಸತಿ ನಿಲಯದ ನೂತನ ಕಟ್ಟಡವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಮಾರುತಿ ತೋಳಮರಡಿ, ಗ್ರಾಪಂ ಅಧ್ಯಕ್ಷೆ ಲಕ್ಕವ್ವಾ ಅಡಿವೆಪ್ಪ ಹಾದಿಮನಿ, ಉಪಾಧ್ಯಕ್ಷೆ ಲಕ್ಷ್ಮೀ ಹೋಳ್ಕರ, ತಾಪಂ ಸದಸ್ಯ ಗೋಪಾಲ ಕುದರಿ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲು ಪಾಟೀಲ, ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ, ಬಿಇಓ ಅಜೀತ ಮನ್ನಿಕೇರಿ, ಚಂದ್ರು ಮೋಟೆಪ್ಪಗೋಳ, ಮುಖಂಡರಾದ ಬನಪ್ಪ ವಡೇರ, ವಿಠ್ಠಲ ಗಿಡೋಜಿ, ರುದ್ರಗೌಡ ಪಾಟೀಲ, ಶಿದ್ಲಿಂಗ ಗಿಡೋಜಿ, ಪರಸಪ್ಪ ಸಾರಾಪೂರ, ಗೋಪಾಲ ಬೀರನಗಡ್ಡಿ, ರೆಬ್ಬೋಜಿ ಮಳ್ಳಿವಡೇರ, ಶಿವಪ್ಪ ಗಿಡೋಜಿ, ಕೆಂಪಣ್ಣಾ ಈರಗಾರ, ಪಿಡಿಓ ಶಿವಾನಂದ ಗುಡಸಿ, ಮುಂತಾದವರು ಉಪಸ್ಥಿತರಿದ್ದರು.

ವಿರೋಧಿಗಳ ಸುಳ್ಳು ವದಂತಿಗಳಿಗೆ ಕಿವಿಗೊಡದಿರಿ – ಬಾಲಚಂದ್ರ ಜಾರಕಿಹೊಳಿ ಮನವಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button