ಪ್ರಗತಿವಾಹಿನಿ ಸುದ್ದಿ; ಮಂಗಳೂರು: ತಾತನ ಜೊತೆ ಅಂಗಡಿಗೆ ಹೋಗಿದ್ದ ಮಗು ರಸ್ತೆ ದಾಟುವಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವ ಧಾರುಣ ಘಟನೆ ಮೂಡಬಿದರೆ ತಾಲೂಕು ತೋಡಾರು ಸಮೀಪದ ಹಂಡೆಲು ಎಂಬಲ್ಲಿ ಸಂಭವಿಸಿದೆ.
5 ವರ್ಷದ ಅಜ್ಮಾ ಫಾತಿಮಾ ಮೃತ ಮಗು. ವಿದೇಶದಲ್ಲಿ ಕೆಲಸ ಮಾಡುತ್ತಿರುವ ಹಂಡೆಲಿನ ಅಬುಸ್ವಾಲಿಹ್ ಎಂಬುವವರ ಪುತ್ರಿ ಮೃತ ಬಾಲಕಿ.
ಅಜ್ಮಾ ಫಾತಿಮಾ ಹಾಗೂ ಆಕೆಯ ಅವಳಿ ಸಹೋದರಿ ಇಬ್ಬರೂ ತಾತನ ಜೊತೆ ಅಮ್ಗಡಿಗೆ ಬಂದಿದ್ದರು. ಈ ವೇಳೆ ದೇವಿನಗರ ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದಾಗ ಏಕಾಏಕಿ ಬಂದ ಕಾರು ಮಗುವಿಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂದಿದ್ದ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಮಾರ್ಗಮಧ್ಯೆಯೇ ಮಗು ಕೊನೆಯುಸಿರೆಳೆದಿದೆ.
ರಕ್ಷಾ ರಾಮಯ್ಯ ಸೇರಿದಂತೆ 17 ಜನರ ವಿರುದ್ಧ ಎಫ್ಐ ಆರ್ ದಾಖಲು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ