
ಬೆಳಗಾವಿ, ಕಾಗವಾಡ, ಬೈಲಹೊಂಗಲ, ಖಾನಾಪುರ ತಾಲೂಕುಗಳಲ್ಲಿ ಹಲವು ಹುದ್ದೆ
ಕಾಗವಾಡ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಾಗವಾಡ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ೪ ಅಂಗನವಾಡಿ ಕಾರ್ಯಕರ್ತೆ ಹಾಗೂ ೧೬ ಸಹಾಯಕಿಯರ ಆಯ್ಕೆಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿ ಜು.೧೩ ರಂದು ಅಧಿಸೂಚನೆ ಹೊರಡಿಸಲಾಗಿದೆ.
ಅರ್ಜಿ ಸಲ್ಲಿಸಲು ಜು.೧೪ ರಂದು ಪ್ರಾರಂಭ ದಿನಾಂಕವಾಗಿದ್ದು, ಅಗಸ್ಟ್.೧೪ ರಂದು ಕೊನೆಯ ದಿನಾಂಕವಾಗಿರುತ್ತದೆ.
ಆಸಕ್ತ ಸ್ಥಳೀಯ ಮಹಿಳಾ ಅಭ್ಯರ್ಥಿಗಳು anganwadirecruit.kar.nic.in ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಖಾಲಿ ಹುದ್ದೆಗಳ ವಿವರ:
ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರ ಕೇಂದ್ರಗಳಾದ ಕಾಗವಾಡ-೬, ಕೆಂಪವಾಡ-೩, ಫರಧಖಾನವಾಡಿ, ಪಾರ್ಥನಹಳ್ಳಿ ಗ್ರಾಮಗಳಲ್ಲಿ ಕಾಗವಾಡ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳ ಖಾಲಿ ಇರುವ ಗ್ರಾಮದ ಕೇಂದ್ರಗಳ ಹೆಸರು ಪಟ್ಟಿ ಪ್ರಕಟಿಸಲಾಗಿದೆ.
ಅದೇ ರೀತಿ ಕಾಗವಾಡ-೩, ಶಿರಗುಪ್ಪಿ-೧, ಶಿರಗುಪ್ಪಿ-೨, ಶಿರಗುಪ್ಪಿ-೬, ಶಹಾಪೂರ-೧, ಜುಗೂಳ-೯, ಉಗಾರ ಕೆ.ಎಚ್-೮, ಉಗಾರ ಕೆ.ಎಚ್-೯, ಅಗ್ರಾಣ ಇಂಗಳಗಾಂವ-೧, ಖಿಳೆಗಾಂವ-೧, ಆಜೂರ-೧, ಖೋತಚವಾಡಿ-೧, ಉಗಾರ ಬಿ.ಕೆ-೨, ಉಗಾರ ಬಿ.ಕೆ-೪, ಐನಾಪೂರ-೧೪ ಗ್ರಾಮಗಳಲ್ಲಿ ಕಾಗವಾಡ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿ ವೇಳೆಯಲ್ಲಿ ಭೇಟಿ ನೀಡಿ ಕಛೇರಿ ದೂರವಾಣ ಸಂ.೦೮೩೩೯-೨೬೪೯೭೭ ಅನ್ನು ಸಂಪರ್ಕಿಸಿ ಎಂದು ಕಾಗವಾಡದ ಆಯ್ಕೆ ಸಮಿತಿಯ ಕಾರ್ಯದರ್ಶಿ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈಲಹೊಂಗಲ
ಬೈಲಹೊಂಗಲ ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಖಾಲಿಯಿರುವ ೧ ಅಂಗನವಾಡಿ ಕಾರ್ಯಕರ್ತೆ ಹಾಗೂ ೧೭ ಸಹಾಯಕಿಯರ ಆಯ್ಕೆಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಆಗಸ್ಟ್ ೧೪ ರ ಒಳಗಾಗಿ anganwadirecruit.kar.nic.in ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಬೈಲಹೊಂಗಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮಿನಿವಿಧಾನಸೌಧ ಇಲ್ಲಿಗೆ ಸಂಪರ್ಕಿಸಬಹುದು ಎಂದು ಬೈಲಹೊಂಗಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಖಾನಾಪುರ
ಖಾನಾಪೂರ ತಾಲುಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಂಗನವಾಡಿ ಕೇಂದ್ರಗಳಾದ ಘೋಟಗಳಿ, ಹಡಲಗಾ, ಮುಡೆವಾಡಿ, ಕಾರಲಗಾ-೧ ಹಾಗೂ ಗರ್ಲಗುಂಜಿ, ಕಡೊಲ್ಕರ್ ಗಲ್ಲಿ, ಸಂಗರಗಾಳಿ, ಡೊಂಗರಗಾವ, ಲೋಂಡಾ, ಮುಂಗಡವಾಡ, ಗೋಧೊಳಿ, ಲಿಂಗನಮಠ, ಡೊಂಬರ ಹೊಸಹಾತು, ವಡ್ಡೆಬೈಲ, ಶಿವೋಲಿ ಸಹಾಯಕಿಯರ ಹುದ್ದೆಗಳ ಅಂಗನವಾಡಿ ಕೇಂದ್ರಗಳಾಗಿವೆ.
ಆಸಕ್ತ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಆಗಸ್ಟ್ ೧೪ ರ ಒಳಗಾಗಿ anganwadirecruit.kar.nic.in ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕಛೇರಿ ದೂರವಾಣ ಸಂ : ೦೮೩೩೬-೨೨೨೫೦೧ ಯನ್ನು ಸಂಪರ್ಕಿಸಬಹುದು ಎಂದು ಖಾನಾಪೂರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ
ಬೆಳಗಾವಿ (ಗ್ರಾಮೀಣ) ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ೦೫ ಕಾರ್ಯಕರ್ತೆಯರು ಹಾಗೂ ೪೦ ಸಹಾಯಕಿಯರು ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಂಗನವಾಡಿ ಕೇಂದ್ರಗಳಾದ ಹಿಂಡಲಗಾ, ಕಲ್ಲೆಹೋಳ, ಯರಮಾಳ, ಬ್ರಹ್ಮನಗರ, ಚಂದಗಡ ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳ ಪಟ್ಟಿ ಪ್ರಕಟಿಸಲಾಗಿದೆ.
ಅದೇ ರೀತಿ ಬೆಳಗಾವಿ ಗ್ರಾಮೀಣ ಭಾಗದ ೪೦ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಆಗಸ್ಟ್ ೧೪ ರ ಒಳಗಾಗಿ anganwadirecruit.kar.nic.in ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಬೆಳಗಾವಿ(ಗ್ರಾಮೀಣ) ಸುವರ್ಣ ಸೌಧ, ಬೆಳಗಾವಿ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಬೆಳಗಾವಿ (ಗ್ರಾಮೀಣ)ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
16.43 ಕೋಟಿ ರೂ ವೆಚ್ಚದಲ್ಲಿ ಬೆಳಗಾವಿಯಲ್ಲಿ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ ಕಟ್ಟಡ : ಸಚಿವ ಸಂಪುಟದಲ್ಲಿ ಅನುಮೋದನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ