Latest

ಆರ್.ಟಿ.ಐ ಕಾರ್ಯಕರ್ತನ ಹತ್ಯೆ; ಪರಮೇಶ್ವರ್ ನಾಯ್ಕ್ ಆಪ್ತನ ಬಂಧನ, ಪುತ್ರ ನಾಪತ್ತೆ

ಪ್ರಗತಿವಾಹಿನಿ ಸುದ್ದಿ; ವಿಜಯನಗರ: ಆರ್.ಟಿ.ಐ ಕಾರ್ಯಕರ್ತ ಶ್ರೀಧರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್ ಆಪ್ತನನ್ನು ಪೊಲೀಸರು ಬಂಧಿಸಿದ್ದಾರೆ.

ಆರ್.ಟಿ.ಐ ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ ಪರಮೇಶ್ವರ್ ನಾಯ್ಕ್ ಪುತ್ರ ಭರತ್ ನಾಯ್ಕ್ ಹೆಸರು ಕೇಳಿಬಂದಿದ್ದು, ಇದೀಗ ಪರಮೇಶ್ವರ್ ನಾಯ್ಕ್ ಆಪ್ತ ಹೆಚ್.ಕೆ.ಹಾಲೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಹಾಲೇಶ್ ಬಂಧನವಾಗುತ್ತಿದ್ದಂತೆ ಭರತ್ ನಾಯ್ಕ್ ತಲೆಮರೆಸಿಕೊಂಡಿದ್ದಾರೆ. ಭರತ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Home add -Advt

ಕೊಲೆಗೆ ಸಂಬಂಧಿಸಿದಂತೆ ಶ್ರೀಧರ್ ಪತ್ನಿ ಶಿಲ್ಪಾ, ಆರೋಪಿ ಹಾಲೇಶ್ ಹಾಗೂ ಪಿ.ಟಿ.ಭರತ್ ನಾಯ್ಕ್ ವಿರುದ್ಧ ದೂರು ದಾಖಲಿಸಿದ್ದರು. ತನ್ನ ಪತಿಗೆ ಜೀವ ಬೆದರಿಕೆಯಿತ್ತು ಇದೇ ಕಾರಣಕ್ಕಾಗಿ ನಾಲ್ಕು ದಿನಗಳಿಂದ ಮನೆಯಲ್ಲೇ ಇದ್ದರು ವಾಕಿಂಗ್ ಗೆ ಹೋದಾಗ ಪತಿಯನ್ನು ಹತ್ಯೆ ಮಾಡಿದ್ದಾರೆ ಎಂದು ದೂರಿದ್ದರು.

ಆರ್.ಟಿ.ಐ ಕಾರ್ಯಕರ್ತ ಶ್ರೀಧರ್ ಅಕ್ರಮ ಗಣಿಗಾರಿಕ್, ಸರ್ಕಾರಿ ಭೂಮಿ ಒತ್ತುವರಿ ಸಂಬಂಧ ಪ್ರಭಾವಿ ರಾಜಕಾರಣಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ.
ಯುವಕನ ಬರ್ಬರ ಹತ್ಯೆ; ಗೋಕಾಕ್ ನಲ್ಲಿ ಘೋರ ಕೃತ್ಯ

Related Articles

Back to top button