ತೋಟದ ಮನೆಗೆ ಹೋಗಿದ್ದ ರೈತ; ವಾಪಸ್ ಬರುವಷ್ಟರಲ್ಲಿ ಪಾಂಡ್ರಿ ನದಿಯಲ್ಲಿ ಹೆಚ್ಚಿದ ಪ್ರವಾಹ; ರಕ್ಷಣೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪಾಂಡ್ರಿ ನದಿ ಪ್ರವಾಹದಿಂದ ತೋಟದ ಮನೆಯಲ್ಲಿ ಸಿಲುಕಿಕೊಂಡು, ರಕ್ಷಣೆಗಾಗಿ ಮೊರೆ ಇಡುತ್ತಿದ್ದ ರೈತನನ್ನು ಪೊಲೀಸರು ಮತ್ತು ಎಸ್.ಡಿ.ಆರ್.ಎಫ್ ತಂಡ ರಕ್ಷಣೆ ಮಾಡಿದೆ.
ರೈತ ಗಣಪತಿ ಖಾನಪುರದ ಲೋಂಡಾಗ್ರಾಮದಲ್ಲಿರುವ ತನ್ನ ತೋಟದ ಮನೆಗೆ ಹೋಗಿದ್ದ. ತೋಟದ ಮನೆಯಿಂದ ವಾಪಸ್ ಆಗುವಷ್ಟರಲ್ಲಿ ಭಾರಿ ಮಳೆಯಿಂದಾಗಿ ಪಾಂಡ್ರಿ ನದಿ ಅಪಾಯದ ಮಟ್ಟದಲ್ಲಿ ಹರಿಯಲು ಆರಂಭಿಸಿದೆ. ಮನೆ ಸುತ್ತಲೂ ನೀರು ನಿಂತಿದ್ದು, ಪ್ರವಾಹದ ಭೀತಿ ಆರಂಭವಾಗಿದೆ. ನದಿ ನೀರಲ್ಲಿ ಪ್ರಾಣಾಪಾಯಕ್ಕೆ ಸಿಲುಕಿದ ರೈತ ತನ್ನ ಬಳಿ ಇದ್ದ ಟಾರ್ಚ್ ಬಿಟ್ಟು ತನ್ನನ್ನು ರಕ್ಷಿಸುವಂತೆ ಕೂಗಿಕೊಂಡಿದ್ದಾನೆ. ಗ್ರಾಮಸ್ಥರು ರಕ್ಷಿಸಲು ಮುಂದಾಗಿದ್ದಾರೆ ಆದರೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಲೇ ಇದ್ದಿದ್ದರಿಂದ ಸಾಧ್ಯವಾಗಿಲ್ಲ.
ನದಿಯಂಚಿನ ಗ್ರಾಮಸ್ಥರು ತಕ್ಷಣ ಎಸ್ .ಡಿ.ಆರ್ ಎಫ್ ಗೆ ತಿಳಿಸಿದ್ದು, ಸ್ಥಳಕ್ಕೆ ದೌಡಾಯಿಸಿದ ತಂಡ ಪೊಲೀಸರ ನೆರವಿನಿಂದ ರೈತ ಗಣಪತಿಯನ್ನು ರಕ್ಷಿಸಿದೆ.
ಉತ್ತರ ಕನ್ನಡ: ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಗಳು; 11 ಜನರ ಏರ್ ಲಿಫ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ