Latest

ನವದೆಹಲಿಯಲ್ಲಿ ಜೆ.ಪಿ.ನಡ್ಡಾ ಸುದ್ದಿಗೋಷ್ಠಿ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಇನ್ನು ಕೆಲವೇ ಹೊತ್ತಿನಲ್ಲಿ ನಡ್ಡಾ ಪತ್ರಿಕಾಗೋಷ್ಠಿ ನಡೆಯಲಿದೆ. ಆದರೆ ಯಾವ ಕಾರಣಕ್ಕಾಗಿ ಅವರು ಪತ್ರಿಕಾಗೋಷ್ಠಿ ಕರೆದಿದ್ದಾರೆ ಎನ್ನುವುದು ಗೊತ್ತಾಗಿಲ್ಲ.

ಕರ್ನಾಟಕದಲ್ಲಿ ತೀವ್ರ ರಾಜಕೀಯ ಬೆಳವಣಿಗೆ ನಡೆದಿರುವ ಹೊತ್ತಿನಲ್ಲಿ, ಇಂದು ಸಂಜೆೆಯೊಳಗೆ ತಮಗೆ ಸಂದೇಸ ಬರಲಿದೆ ಎಂದು ಸಿಎಂ ಯಡಿಯೂರಪ್ಪ ಕಾಯುತ್ತಿರುವ ಸಂದರ್ಭದಲ್ಲಿ ಜೆ.ಪಿ.ನಡ್ಡಾ ಸುದ್ದಿಗೋಷ್ಟಿ ತೀವ್ರ ಕುತೂಹಲ ಮೂಡಿಸಿದೆ.

ಪತ್ರಿಕಾಗೋಷ್ಠಿ ನಡೆಸಿ ಕರ್ನಾಟಕದ ಬೆಳವಣಿಗೆ ಕುರಿತು ಮಾತನಾಡಲಿದ್ದಾರಾ ಎನ್ನುವ ಕುತೂಹಲ ಮೂಡಿದೆ. ಆದರೆ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯನ್ನು ಹೈಕಮಾಂಡ್ ಸೂಚನೆಯ ಮೇರೆಗೆ ಶಾಸಕಾಂಗ ಸಭೆಯಲ್ಲಿ ಆಯ್ಕೆ ಮಾಡುವುದು ಪ್ರಕ್ರಿಯೆ. ಹೈಕಮಾಂಡ್ ನೇರವಾಗಿ ಘೋಷಣೆ ಮಾಡಲು ಅವಕಾಶವಿಲ್ಲ.

Home add -Advt

ಈ ಎಲ್ಲ ಹಿನ್ನೆಲೆಯಲ್ಲಿ ನಡ್ಡಾ ಪತ್ರಿಕಾಗೋಷ್ಠಿ ಯಾವ ವಿಷಯಕ್ಕೆ ಎನ್ನುವುದನ್ನು ಕಾದು ನೋಡಬೇಕಿದೆ.

ಹೌದು, ಸಂಜೆ ಬೆಳಗಾವಿಗೆ ಬರೋದ್ರೊಳಗೆ ಹೈಕಮಾಂಡ್ ಸಂದೇಶ ಬರುತ್ತೆ, ನಿಮಗೂ ತಿಳಿಯುತ್ತೆ -ಯಡಿಯೂರಪ್ಪ

ಪಾಲಿಕೆ ಆಯುಕ್ತರ ಮನೆ ಮುಂದೆ ಕಸ ತಂದು ಚೆಲ್ಲಿದ ಶಾಸಕ ಅಭಯ ಪಾಟೀಲ (ವಿಡೀಯೋ ಸಹಿತ ವರದಿ)

Related Articles

Back to top button