ಸಾಧನಾ ಸಮಾವೇಶದ ವೇಳೆ ರಾಜಿನಾಮೆ ಘೋಷಣೆ ಮುನ್ನ ಕಣ್ಣೀರಾದ ಸಿಎಂ; ಹೋರಾಟದ ಹಾದಿ, ಅಧಿಕಾರದ ಅಗ್ನಿ ಪರೀಕ್ಷೆ ಬಗ್ಗೆ ಬಿಚ್ಚಿಟ್ಟ ಬಿಎಸ್ ವೈ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ 2 ವರ್ಷ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಎಸ್ ವೈ ಭಾಷಣದ ವೇಳೆ ಭಾವುಕರಾದ ಘಟನೆ ನಡೆದಿದೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ತಮ್ಮ ಹೋರಾಟದ ದಿನಗಳನ್ನು ಮೆಲುಕು ಹಾಕಿದರು. ಮಂಡ್ಯ ಜಿಲ್ಲೆ ಬೂಕನಕೆರೆಯಲ್ಲಿ ಹುಟ್ಟಿ, ಶಿವಮೊಗ್ಗಕ್ಕೆ ಬಂದು ಜೀವನ ಆರಂಭಿಸಿದೆ, ಶಿಕಾರಿಪುರದಲ್ಲಿ ಆರ್ ಎಸ್ ಎಸ್ ಪ್ರಚಾರಕನಾಗಿ ಕೆಲಸ ಮಾಡಿದೆ. ಪುರಸಭೆಗೆ ಆಯ್ಕೆಯಾದ ವೇಳೆ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಅಂದು ನಾನು ಬದುಕಿದ್ದರೆ ರಾಜ್ಯದ ಜನಸೇವೆ ಮಾಡುವುದಾಗಿ ಹೆಂಡತಿ ಮಕ್ಕಳಿಗೆ ಮಾತುಕೊಟ್ಟಿದ್ದೆ ಎಂದರು.
ಶಿಕಾರಿಪುರದ ಜನತೆ ನನ್ನನ್ನು 7 ಬಾರಿ ಶಾಸಾಕನಾಗಿ ಆಯ್ಕೆ ಮಾಡಿದರು. ಹಣ, ಹೆಂಡ, ಅಧಿಅಕರ, ತೋಳ್ಬಲ, ಜಾತಿ ವಿಷಬೀಜ ಬಿತ್ತಿದರೂ ಜನ ನಮ್ಮನ್ನು ಕೈಬಿಡಲಿಲ್ಲ. ಬಿಜೆಪಿ ಇಂದು ಈ ಮಟ್ಟದಲ್ಲಿ ಬೆಳವಣಿಗೆಯಾಗಲು ಲಕ್ಷಾಂತರ ಜನ ಕಾರ್ಯಕರ್ತರ ಪರಿಶ್ರಮ ಕಾರಣ. ನಾನಿಂದು ಸಿಎಂ ಸ್ಥಾನದಲ್ಲಿರಲು ಶಿಕಾರಿಪುರದ ಜನರು ಕಾರಣ. ಜನಮೆಚ್ಚಿದ ಆಡಳಿತ ನಡೆಸಿದ ತೃಪ್ತಿ ನನಗಿದೆ. ವಿಧಾನಸಭೆಯಲ್ಲಿ ಹೋರಾಟಮಾಡುವಾಗ ಯಾರೂ ಇರಲಿಲ್ಲ ಏಕಾಂಗಿಯಾಗಿ ಹೋರಾಡಿದ್ದೇನೆ. ವಾಜಪೇಯಿ ಕೇಂದ್ರ ಸಚಿವರಾಗಿ ಎಂದಿದ್ದರು. ಆದರೆ ನಾನು ರಾಜ್ಯದಲ್ಲಿ ಪಕ್ಷ ಕಟ್ಟಬೇಕಿದೆ ಎಂದಿದ್ದೆ. ಪಕ್ಷದಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಪಕ್ಷಕ್ಕಾಗಿ ಹೋರಾಟ ಅಮಡಿದ್ದೇನೆ. 75 ವರ್ಷ ಮೇಲ್ಪಟ್ಟ ಯಾರಿಗೂ ಆಡಳಿತ ನಡೆಸಲು ಅವಕಾಶ ಕೊಟ್ಟಿಲ್ಲ ಆದರೆ ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ಅವರು ವಿಶೇಷ ಕಾಳಜಿಯಿಂದ ನನಗೆ 2 ವರ್ಷ ಸಿಎಂ ಆಗಿ ಆಡಳಿತ ನಡೆಸಲು ಅವಕಾಶ ನೀಡಿದ್ದಾರೆ. ಅವರೆಲ್ಲರ ಸಹಕಾರಕ್ಕೆ ನನೌ ಚಿರಋಣಿ. ವರಿಷ್ಠರ ಸೂಚನೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ.
ಮಧ್ಯಾಹ್ನ ಊಟದ ಬಳಿಕ ರಾಜ್ಯಪಾಲ ಗೆಹ್ಲೋಟ್ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಭಾವುಕರಾಗಿ ನುಡಿದರು.




