ಪ್ರಗತಿವಾಹಿನಿ ಸುದ್ದಿ, ಧಾರವಾಡ
ಸಚಿವ ಸಿ.ಎಸ್.ಶಿವಳ್ಳಿ ನಿಧನದ ಹಿನ್ನೆಲೆಯಲ್ಲಿ ಶನಿವಾರ ಧಾರವಾಡ ಜಿಲ್ಲೆಯಾದ್ಯಂತ ಸರಕಾರಿ ರಜೆ ಘೋಷಿಸಲಾಗಿದೆ. ಸರಕಾರಿ ಕಚೇರಿಗಳು ಮತ್ತು ಶಾಲೆ ಕಾಲೇಜಿಗೆ ರಜೆ ಘೋಷಿಸಲಾಗಿದ್ದು, 3 ದಿನ ಶೋಖಾಚರಣೆ ಘೋಷಿಸಲಾಗಿದೆ.
ಶನಿವಾರ ಶಿವಳ್ಳಿ ಅವರ ಅಂತ್ಯಕ್ರಿಯೆ ಕುಂದಗೋಳ ಸಮೀಪ ಯರಗುಪ್ಪಿಯ ರುದ್ರಭೂಮಿಯಲ್ಲಿ ನಡೆಯಲಿದೆ.
ಇಂದು ಸಂಜೆಯವರೆಗೆ ಜೆಪಿ ನಗರದ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಟ್ಟು , ಸಂಜೆ 6 ಗಂಟೆಗೆ ಕುಂದಗೋಳಕ್ಕೆ ಪಾರ್ಥಿವ ಶರೀರ ಒಯ್ಯಲಾಗುವುದು. ರಾತ್ರಿ ಅವರ ಹುಟ್ಟೂರಿಗೆ ಒಯ್ದು ನಾಳೆ ಅಂತಿಮ ಸಂಸ್ಕಾರ ನಡೆಸಲಾಗುವುದು.
ಶಿವಳ್ಳಿ ನಿಧನಕ್ಕೆ ಮುಖ್ಯಮಂತ್ರಿ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ನಿಧನ