ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಎಲ್ಇ ಸಂಗೀತ ಮಹಾವಿದ್ಯಾಲಯದಲ್ಲಿ ಗುರುಪೂರ್ಣಿಮೆ ನಿಮಿತ್ತ ಸಂಗೀತ ಕಾರ್ಯಕ್ರಮಗಳು ಜರಗಿದವು.
ಪ್ರಾರಂಭದಲ್ಲಿ ಗುರು ಪೂರ್ಣಿಮೆಯ ಮಹತ್ವವನ್ನು ತಿಳಿಸಿ ಸಂಗೀತ ವಿಭಾಗದ ಸಂಸ್ಥಾಪಕರಾದ ದಿವಂಗತ ಪಂಡಿತ್ ಹಯವದನ ಜೋಶಿ ಇವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ನಂತರ ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಗೀತ ವಿಭಾಗದ ನಿರ್ದೇಶಕರಾದ ಡಾಕ್ಟರ್ ರಾಜೇಂದ್ರ ಭಾಂಡನಕರ ಹಾರ್ಮೋನಿಯಂ ವಾದನದಲ್ಲಿ ಗಣೇಶನ ಆರತಿ ಹಾಗೂ ರಾಗ್ ಸಾರಂಗ ನುಡಿಸಿದರು.
ತದನಂತರ ಎಲ್ಲ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮವನ್ನು ನೀಡಿದರು. ಇದೇ ವೇಳೆ ಸಂಗೀತ ವಿಭಾಗದ ಹಿರಿಯ ತಬಲಾ ಕಲಾವಿದರಾದ ಜೀತೆಂದ್ರ ಸಾಬಣ್ಣವರ ಇವರಿಗೆ 60 ವರ್ಷ ಪೂರೈಸಿದ ನಿಮಿತ್ತ ಅವರಿಗೆ ಸತ್ಕಾರ ಮಾಡಿ ಅಭಿನಂದಿಸಲಾಯಿತು. ಸುಮಾರು ಹದಿನಾಲ್ಕು ವರ್ಷಗಳ ಕಾಲ ಸಂಗೀತ ಭಾಗದಲ್ಲಿ ಅವರ ಸೇವೆ ಶ್ಲಾಘನೀಯ, ಈ ನಿಮಿತ್ತ ಸಂಗೀತ ಪ್ರಾಧ್ಯಾಪಕರ ಎಲ್ಲರೂ ಅವರಿಗೆ ಅಭಿನಂದಿಸಿದರು. ಈ ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ಮುಖ್ಯಸ್ಥೆ ಡಾ ಸ್ನೇಹಾ ರಾಜೂರಿಕರ್, ಪ್ರಾಧ್ಯಾಪಕರಾದ ಡಾ ಸುನಿತಾ ಪಾಟೀಲ್, ಡಾ ದುರ್ಗಾ ನಾಡಕರ್ಣಿ, ಸೀಮಾ ಕುಲಕರ್ಣಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ತಬಲಾ ಸಾಥ್ ರಾಜೇಂದ್ರ ಭಾಗವತ ಹಾಗೂ ಹಾರ್ಮೋನಿಯಂ ಸಾಥ್ ಯಾದವೆಂದ್ರ ಪೂಜಾರಿ ನೀಡಿದರು. ಸ್ವಾತಿ ಹುದ್ದಾರ್ ಹಾಗೂ ಸುಹಾಸಿನಿ ದೇಶಪಾಂಡೆ ಕಾರ್ಯಕ್ರಮವನ್ನು ನಿರೂಪಿಸಿದರು.
ಬೊಮ್ಮಾಯಿಗೆ ‘ಮಾಮಾ’ ಎಂದ ಕಿಚ್ಚಾ ಸುದೀಪ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ