Latest

ಅಂತರ್ ಜಿಲ್ಲಾ ದನಗಳ್ಳರ ಬಂಧನ

ಪ್ರಗತಿವಾಹಿನಿ ಸುದ್ದಿ; ಶಿರಸಿ: ಐಷಾರಾಮಿ ವಾಹನದಲ್ಲಿ ಬಂದು ದನಗಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ದನಗಳ್ಳರಿಬ್ಬರನ್ನು ಉತ್ತರ ಕನ್ನಡ ಜಿಲ್ಲೆ ಶಿರಸಿ ಪೊಲೀಸರು ಬಂಧಿಸಿದ್ದಾರೆ.

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿವೇಕಾನಂದನಗರ ಮತ್ತು ಮರಾಠಿಕೊಪ್ಪದಲ್ಲಿ ದನಗಳ್ಳತನ ಆದ ಬಗ್ಗೆ ಪ್ರಕರಣಗಳು ವರದಿಯಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧೀಕ್ಷಕ ಶಿವಪ್ರಕಾಶ್ ದೇವರಾಜ್, ಸಿ.ಪಿ.ಐ ರಾಮಚಂದ್ರ ನಾಯಕ, ಪಿ.ಎಸ್.ಐ ಭಿಮಾಶಂಕರ ಸಿನ್ನೂರ ಸಂಗಣ್ಣ ರವರ ಒಂದು ವಿಶೇಷ ತಂಡವನ್ನು ರಚಿಸಲಾಗಿತ್ತು.

ಪಿ.ಎಸ್.ಐ ಭೀಮಾಶಂಕರ್ ಹಾಗೂ ಸಿಬ್ಬಂದಿಗಳು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಬೆಳಗಿನ ಜಾವ 3-30ರ ಸುಮಾರಿಗೆ ದನಗಳನ್ನು ಸಾಗಾಟಮಾಡುತ್ತಿದ್ದಾಗ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಕೋಟೆಕೆರೆ ಜಂಕ್ಷನ್ ಹತ್ತಿರ ನಾಕಾಬಂದಿ ಮಾಡಿ ವಾಹನಗಳನ್ನು ಚಕ್ ಮಾಡುತ್ತಿರುವಾಗ ಬಂದ ಫಾರ್ಚುನರ್ ಕಾರ್ ಹಾಗೂ ಕ್ರೇಟಾ ಕಾರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಫಾರ್ಚುನರ್ ಕಾರಿನಲ್ಲಿದ್ದ ಮೂವರು ವಾಹವನ್ನು ಬಿಟ್ಟು ಓಡಿ ಹೊಗಿದ್ದು ಮತ್ತು ಕ್ರೇಟಾ ಕಾರಿನಲ್ಲಿದ್ದ ಇಬ್ಬರು ತಪ್ಪಿಸ್ಕೊಳ್ಳಲು ಯತ್ನಿಸುತ್ತಿದ್ದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಫಾರ್ಚುನರ್ ಮತ್ತು ಕ್ರೇಟಾ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರನ್ನು ವಿಚಾರಿಸಿದಾಗ ತಾವು ಶಿರಸಿಗೆ ದನಗಳ್ಳತನ ಮಾಡಲು ಬಂದಿದ್ದು, ಈ ಹಿಂದೆ ಶಿರಸಿಯಲ್ಲಿ ನಡೆದ ದನಗಳ್ಳತನ ಪ್ರಕರಣದ ಬಗ್ಗೆಯೂ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತರನ್ನು 29 ವರ್ಷದ ಅಬ್ದುಲ್ ಅಜೀಜ್ ತಂದೆ ಅಬ್ದುಲ್ ಗಫಾರ ಹಾಗೂ ದಕ್ಷಿಣ ಕನ್ನಡ ಮೂಲದ 36 ವರ್ಷದ ಫೈಜಲ್ ತಂದೆ ಅಬ್ದುಲ್ ರಜಾಕ್ ಬದ್ರಿಯಾನಗರ ಎಂದು ತಿಳಿದುಬಂದಿದೆ.

ಪರಾರಿಯಾಗಿರುವ ಮೂವರನ್ನು ಇಮ್ರಾನ್, ಅಂಡು @ ಅಯಾಸ್, ರೆಹೆಮಾನ್ ಎಂದು ಗುರುತಿಸಲಾಗಿದ್ದು ಮೂವರು ಶಿವಮೊಗ್ಗ ನಿವಾಸಿಗಳು ಎಂದು ಬಂಧಿತ ಆರೋಪಿಗಳು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಮೂವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಈ ಕಾರ್ಯಚರಣೆಯು ಮಾನ್ಯ ಪೊಲೀಸ್ ಅಧೀಕ್ಷಕರು ಉ.ಕ. ಕಾರವಾರ ಹಾಗೂ ಮಾನ್ಯ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಮಾನ್ಯ ಡಿ.ಎಸ್.ಪಿ. ಶಿರಸಿ ರವರ ಮಾರ್ಗದರ್ಶನದಲ್ಲಿ ರಾಮಚಂದ್ರ ನಾಯಕ ಸಿ.ಪಿ.ಐ ಶಿರಸಿ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ ಠಾಣೆಯ ಉಪ ನಿರೀಕ್ಷಕರಾದ ಭೀಮಾಶಂಕರ ಸಿನ್ನೂರ ಸಂಗಣ್ಣ, ಹಾಗೂ ಸಿಬ್ಬಂಧಿಯವರಾದ ಮೊಹಮ್ಮದ ಇಸ್ಮಾಯಿಲ್ ಕೋಣನಕೇರಿ, ರಾಮಯ್ಯ ಪೂಜಾರಿ, ಮಹಾಂತೇಶ ಬಾರಕೇರ, ರೋನಾಲ್ಡ್ ಆಲ್ಮೇಡಾ, ಅಶೋಕ ನಾಯ್ಕ, ಶಿರಸಿ ಗ್ರಾಮೀಣ ಪೊಲೀಸ ಠಾಣೆಯ ಚೇತನ ನಾಯ್ಕ, ಪ್ರದೀಪ ರೇವಣಕರ ಹಾಗೂ ಶಿರಸಿ ನಗರ ಠಾಣೆಯ ರಾಮದೇವ ಗಾಂವಕರ, ಹಾಗೂ ಚಾಲಕರಾದ ಪಾಂಡು ನಾಗೋಜಿ, ಮೋಹನ ನಾಯ್ಕ ಇವರು ಭಾಗವಹಿಸಿ ಆರೋಪಿತರನ್ನು ವಶಕ್ಕೆ ಪಡೆಯಲು ಸಹಕರಿಸಿರುತ್ತಾರೆ. ಈ ಕಾರ್ಯಚರಣೆಯ ಬಗ್ಗೆ ಪೊಲೀಸ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
ರಾಜ್ಯದ ಸಂಸದರೊಂದಿಗೆ ಸಿಎಂ ಬೊಮ್ಮಾಯಿ ಸಭೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button