ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸ್ಥಳೀಯ ಎಸ್ ಜಿ ವಿ ಮಹೇಶ ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿ ಹತ್ತನೇ ತರಗತಿ ಮುಗಿದ ವಿದ್ಯಾರ್ಥಿಗಳಿಗೆ ಸಂಪರ್ಕಸೇತು ವಿಶೇಷ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಪ್ರಾಚಾರ್ಯ ಎಂ ವಿ ಭಟ್ಟ, ಕಣ್ಣೆದುರಿನ ಯಾವ ಸಮಸ್ಯೆಯೂ ನಮ್ಮ ಗುರಿಯನ್ನು ಹಾಳು ಮಾಡಬಾರದು, ಅನುಭವ ಮತ್ತು ಜ್ಞಾನದ ಅನುಸಂಧಾನವೇ ಯಶಸ್ಸು, ಅಂತಹ ಯಶಸ್ಸನ್ನು ಕೊಡುವಲ್ಲಿ ಎಸ್ ಜಿ ವಿ ಮಹೇಶ ಪದವಿ ಪೂರ್ವ ಮಹಾವಿದ್ಯಾಲಯ ಕಳೆದ ೧೧ ವರ್ಷಗಳಿಂದ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಅತಿಥಿಗಳಾದ ಸತ್ಯಪ್ರಮೋದ ಕುಲ್ಕರ್ಣಿ ಮಾತನಾಡಿ, ವಿದ್ಯಾರ್ಥಿಯಾದವನು ನಮ್ಮಲ್ಲಿರುವ ಅಂಧಕಾರವನ್ನು ಹೋಗಲಾಡಿಸಲು ಗುರುವಿಗೆ ಶರಣಾಗಬೇಕು ಎಂದರು.
ಉಪಪ್ರಾಚಾರ್ಯ ಆನಂದ ಖೋತ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಕಾಲೇಜಿನ ವಾರ್ಷಿಕ ಕಾರ್ಯಚಟುವಟಿಕೆಯನ್ನು ವಿವರಿಸಿದರು.
ಉಪನ್ಯಾಸಕ ಸತೀಶ ಭಟ್ಟ ಪ್ರಾರ್ಥನೆ ಹಾಡಿದರು. ಹಿರಿಯ ಉಪನ್ಯಾಸಕ ಮುಕುಂದ ಗೋಖಲೆ ಸ್ವಾಗತಿಸಿದರು. ಉಪನ್ಯಾಸಕಿ ಸ್ವಾತಿ ಹೆಗ್ಗರೆ ನಿರೂಪಿಸಿದರು. ವಿಶಾಲ ಮಿರ್ಜಿ ವಂದನಾರ್ಪಣೆ ಮಾಡಿದರು.
ನಾಳೆ ವಿಧಾನ ಪರಿಷತ್ ಸದಸ್ಯರ ಮಹತ್ವದ ಸಭೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ