Kannada NewsLatest

ಸಚಿವರಿಗೆ ಜಿಲ್ಲೆಗಳ ಉಸ್ತುವಾರಿ ಹಂಚಿಕೆ

ಇದು ಕೋವಿಡ್ ಹಾಗೂ ನೆರೆ ನಿರ್ವಹಣೆಗೆ ಮಾತ್ರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 29 ನೂತನ ಸಚಿವರಿಗೆ ಕೋವಿಡ್ ಹಾಗೂ ನೆರೆ ನಿರ್ವಹಣೆ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಿ ಆದೇಶ ಹೊರಡಿಸಲಾಗಿದೆ.

ಇದು ಕೋವಿಡ್ ಹಾಗೂ ನೆರೆ ನಿರ್ವಹಣೆಗೆ ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಜಿಲ್ಲಾ ಉಸ್ತುವಾರಿ ಅಲ್ಲ.

ನಾಳೆಯಿಂದಲೇ ಸಚಿವರು ತಮ್ಮ ತಮ್ಮ ಜಿಲ್ಲೆಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ವಿತರಣೆ ಕಾರ್ಯಗಳಲ್ಲಿ ತೊಡಗಲಿದ್ದಾರೆ. ಯಾವ ಸಚಿವರಿಗೆ ಯಾವ ಜಿಲ್ಲೆಗಳ ಜವಾಬ್ದಾರಿ ವಹಿಸಲಾಗಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.

 

ಗೋವಿಂದ ಕಾರಜೋಳ- ಬೆಳಗಾವಿ
ಕೆ ಎಸ್ ಈಶ್ವರಪ್ಪ -ಶಿವಮೊಗ್ಗ
ಆರ್ ಅಶೋಕ್ – ಬೆಂಗಳೂರು ನಗರ
ಡಾ ಅಶ್ವಥ್ ನಾರಾಯಣ – ರಾಮನಗರ
ಬಿ ಶ್ರೀರಾಮುಲು – ಚಿತ್ರದುರ್ಗ
ವಿ ಸೋಮಣ್ಣ – ರಾಯಚೂರು
ಜೆ ಸಿ ಮಾಧುಸ್ವಾಮಿ -ತುಮಕೂರು
ಸಿ ಸಿ ಪಾಟೀಲ್ -ಗದಗ
ಪ್ರಭು ಚವಾಣ – ಬೀದರ್
ಆನಂದ್ ಸಿಂಗ್ – ಬಳ್ಳಾರಿ, ವಿಜಯನಗರ
ಕೆ. ಗೋಪಾಲಯ್ಯ – ಹಾಸನ
ಬೈರತಿ ಬಸವರಾಜ -ದಾವಣಗೆರೆ
ಎಸ್ ಟಿ ಸೋಮಶೇಖರ – ಮೈಸೂರು-ಚಾಮರಾಜನಗರ
ಬಿ ಸಿ ಪಾಟೀಲ್ -ಹಾವೇರಿ
ಕೆ ಸುಧಾಕರ್- ಚಿಕ್ಕ ಬಳ್ಳಾಪುರ
ಕೆ ಸಿ ನಾರಾಯಣಗೌಡ- ಮಂಡ್ಯ
ಶಿವರಾಮ ಹೆಬ್ಬಾರ್-ಉತರ ಕನ್ನಡ
ಉಮೇಶ್ ಕತ್ತಿ -ಬಾಗಲಕೋಟೆ
ಎಸ್ ಅಂಗಾರ-ದಕ್ಷಿಣ ಕನ್ನಡ
ಮುರುಗೇಶ್ ನಿರಾಣಿ- ಕಲಬುರ್ಗಿ
ಎಂ ಟಿ ಬಿ ನಾಗರಾಜ- ಬೆಂಗಳೂರು ಗ್ರಾಮಾಂತರ
ಕೋಟ ಶ್ರೀನಿವಾಸ ಪೂಜಾರಿ- ಕೊಡಗು
ಶಶಿಕಲಾ ಜೊಲ್ಲೆ-ವಿಜಯಪುರ
ವಿ ಸುನಿಲ್ ಕುಮಾರ್-ಉಡುಪಿ
ಹಾಲಪ್ಪ ಆಚಾರ್-ಕೊಪ್ಪಳ
ಅರಗ ಜ್ಞಾನೇಂದ್ರ – ಚಿಕ್ಕಮಗಳೂರು
ಶಂಕರ್ ಪಾಟೀಲ್ ಮುನೇನಕೊಪ್ಪ-ಧಾರವಾಡ
ಬಿ ಸಿ ನಾಗೇಶ್ -ಯಾದಗಿರಿ
ಮುನಿರತ್ನ-ಕೋಲಾರ

ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ –

DOC040821-04082021214911

ಜಿಲ್ಲಾವಾರು ಮಂತ್ರಿಗಳ ಪಟ್ಟಿ

 

ನೂತನ ಸಚಿವ ಸಂಪುಟದ ಮೊದಲ ಸಭೆಯಲ್ಲಿ ಕೈಗೊಂಡ ತೀರ್ಮಾನಗಳು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button