Kannada NewsLatest

ವಿಶ್ವ ಮಿನಿ ಪುಟಬಾಲ್ ಪಂದ್ಯಾವಳಿಗೆ ಲಿಂಗರಾಜ ಕಾಲೇಜಿನ ವಿದ್ಯಾರ್ಥಿನಿಯರು ಆಯ್ಕೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇದೇ ಆಗಸ್ಟ್ 11 ರಿಂದ 16ರ ವರೆಗೆ ಯುಕ್ರೇನ್‌ದಲ್ಲಿ ಜರುಗಲಿರುವ ವಿಶ್ವ ಮಿನಿ ಪುಟಬಾಲ್-2021 ಮಹಿಳಾ ಪಂದ್ಯಾವಳಿಗೆ ನಗರದ ಲಿಂಗರಾಜ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿನಿಯರಾದ ಅಂಜಲಿ ಹಿಂಡಲಗೇಕರ ಹಾಗೂ ಅದಿತಿ ಜಾಧವ ರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆಯಾಗಿದ್ದಾರೆ.

ಈ ಪುಟ್‌ಬಾಲ್ ಪಂದ್ಯಾವಳಿಯನ್ನು ಯುಕ್ರೇನ್ ಮಿನಿ ಪುಟ್‌ಬಾಲ್‌ ಅಸೋಸಿಯೇಶನ್ ಆಯೋಜಿಸುತ್ತಿದೆ. ವಿಶ್ವ ಮಿನಿ ಪುಟಬಾಲ್ ಮಹಿಳಾ ಪಂದ್ಯಾವಳಿಗೆ ಲಿಂಗರಾಜ ಕಾಲೇಜಿನ ವಿದ್ಯಾರ್ಥಿನಿಯರು ಆಯ್ಕೆಯಾಗಿ ಭಾರತದ ಮಹಿಳಾ ಪುಟ್ಬಾಲ್‌ ತಂಡವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆ ಹಾಗೂ ಅಭಿಮಾನವನ್ನುಂಟುಮಾಡಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಅಂಜಲಿ ಹಿಂಡಲಗೇಕರ ಹಾಗೂ ಅದಿತಿ ಜಾಧವ ಅವರನ್ನು ಸತ್ಕರಿಸಿ ಅಭಿನಂದಿಸಿದ್ದಾರೆ.

ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಬಿ.ಎಂ.ತೇಜಸ್ವಿ ಹಾಗೂ ದೈಹಿಕ ನಿರ್ದೇಶಕರಾದ ಡಾ.ಸಿ.ರಾಮರಾವ್ ಉಪಸ್ಥಿತರಿದ್ದರು.
ನೂತನ ಸಚಿವರಿಗೆ ಕೋವಿಡ್, ನೆರೆ ವೀಕ್ಷಣೆಗೆ ಜಿಲ್ಲೆ ಹಂಚಿಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button