Latest

ಬೆಂಗಳೂರು ಸೇರಿ 5 ಕಡೆ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ; ಕೇಂದ್ರ ಸಚಿವ

ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಯವರ ಪ್ರಶ್ನೆಗೆ ಉತ್ತರ

 

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕರ್ನಾಟಕದಲ್ಲಿ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಸ್ಥಾಪನೆ” ಬಗ್ಗೆ ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಯವರ ಪ್ರಶ್ನೆಗೆ ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಮನಸುಕ್ ಮಂಡವಿಯಾ ಮಂಗಳವಾರ ಉತ್ತರಿಸಿದ್ದಾರೆ.

ಕೇಂದ್ರ ಸರ್ಕಾರವು ತಮಿಳನಾಡಿನ ಮಧುರೈ, ಛತ್ತಿಸಗಡನ ಹೊಸ ರಾಯಪೂರ, ಮಹಾರಾಷ್ಟ್ರದ ನಾಗಪೂರ, ರಾಜಸ್ಥಾನದ ಜಲವಾರ ಮತ್ತು ಕರ್ನಾಟಕದ ಬೆಂಗಳೂರಿನಲ್ಲಿ ಹೀಗೆ ಒಟ್ಟು 5 ರಾಜ್ಯಗಳಲ್ಲಿ ಹೊಸ ರಾಷ್ಟ್ರೀಯ ಔಷದ ಶಿಕ್ಷಣ (ಫಾರ್ಮಾಸ್ಯೂಟಿಕಲ್) ಮತ್ತು ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಲು ಪ್ರಸ್ತಾಪಿಸಿದೆ.

2020-21 ರಿಂದ 2024-25ರ ಅವಧಿಯಲ್ಲಿ ಸುಮಾರು 4300 ಕೋಟಿ ವೆಚ್ಚದ ಏಕೀಕೃತ ಐಎಫ್‌ಸಿ ಪ್ರಸ್ತಾವನೆಯನ್ನು ಈಗಾಗಲೇ ಅಸ್ತಿತ್ವದಲ್ಲಿರುವ ಕೇಂದ್ರಗಳ ಬಲವರ್ಧನೆ ಹಾಗೂ 5 ಹೊಸ ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತಾವನೆಯನ್ನು ಅನುಮೋದನೆಗಾಗಿ ಹಣಕಾಸು ಇಲಾಖೆಗೆ ಅನುಮೋದನೆಗೆ ಸಲ್ಲಿಸಿದೆ.

ಸದರಿ ಎನ್‌ಐಪಿಇಆರ್ (ತಿದ್ದುಪಡಿ) ಮಸೂದೆ 2021 ಪ್ರಸ್ತುತ ಸಂಸತ್ತಿನ ಪರಿಗಣನೆಯಲ್ಲಿದ್ದು, ಈಗಾಗಲೇ ಸ್ಥಾಪಿಸಲಾದ ಇಂತಹ ಸಂಶೋಧನಾ ಕೇಂದ್ರಗಳು ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಕಾರ್ಯದ ಕಾಯಿದೆಯಡಿ  ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳಾಗಿರಬೇಕೆಂದು ನಿಬಂಧನೆಗೆ ಒಳಪಟ್ಟಿರುವುದಾಗಿದೆ ಎಂದು ತಿಳಿಸಿದ್ದಾರೆ.

ಇಂಡಿಯನ್ ಕೋಸ್ಟ್ ಗಾರ್ಡ್ ಕಚೇರಿಗೆ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಭೇಟಿ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button