Latest

ಡಿಸಿಸಿ ಬ್ಯಾಂಕ್ ನಿವೃತ್ತಿ ನೌಕರರಿಂದ ಉದ್ಯಮಿ ಮೀನಾಕ್ಷಿಗೆ ಸತ್ಕಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಮೀನಾಕ್ಷಿ ಪುಡ್ಸ್ ಮತ್ತು ಗೃಹ ಉದ್ಯೋಗ ಮೂಲಕ ಗ್ರಾಮೀಣ ಪರಂಪರೆಯ ಖಾದ್ಯಗಳು, ಆಹಾರ ಪದಾರ್ಥಗಳನ್ನು ತಯಾರಿಸುವ ಗೃಹ ಉದ್ಯಮ ಪ್ರಾರಂಭಿಸಿ ಹಲವಾರು ಬಡ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಮೀನಾಕ್ಷಿ ಮಿಶ್ರಿಕೋಟಿ ಅವರಿಗೆ ಡಿಸಿಸಿ ಬ್ಯಾಂಕ್ ನಿವೃತ್ತಿ ಹೊಂದಿದ ನೌಕರರು ಹಾಗೂ ಇತರರು ಸತ್ಕಾರ ಮಾಡಿದರು.

ಶನಿವಾರ  ನಗರದ ಕೋರಿಗಲ್ಲಿಯಲ್ಲಿ ಅವರ ನಿವಾಸದಲ್ಲಿ ಸತ್ಕಾರ ಮಾಡಿ ಅವರನ್ನು ಉದ್ದೇಶಿಸಿ ಮಾತನಾಡಿದ ಅಪ್ಪಾಸಾಹೇಬ ಇಬೂತಿ ಅವರು, ಚಿಕ್ಕ ವಯಸಿನಲ್ಲೇ ಚಿಕ್ಕ ಉದ್ಯಮ ಪ್ರಾರಂಭಿಸಿ ತನ್ನ ಪರಿಶ್ರಮದಿಂದ ದುಡಿದು ತನ್ನ ಉದ್ಯಮವನ್ನು ದೊಡ್ಡ ಪ್ರಮಾಣ ಮಟ್ಟಕ್ಕೆ ಬೆಳಸಿ ಬಹಳಷ್ಟು ಮಹಿಳೆಯರಿಗೆ ಉದ್ಯೋಗ ಕಲ್ಪಿಸಿ ಕೊಟ್ಟಿದ್ದಾರೆ. ಇವರ ಸಾಧನೆ ಮೆಚ್ಚಿ ಸರ್ಕಾರ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿದೆ ಎಂದರು.

ಬಳಿಕ ಮಾತನಾಡಿದ ಶಂಕ್ರಯ್ಯ ಪೂಜಾರಿ ಅವರು ಚಿಕ್ಕ ವಯಸ್ಸಿನಲ್ಲಿ ಮೀನಾಕ್ಷಿ ಪುಡ್ಸ್ ಮತ್ತು ಗೃಹ ಉದ್ಯೋಗ ಪ್ರಾರಂಭಿಸಿ ಹಗಲು ರಾತ್ರಿ ಎನ್ನದೇ ಕಷ್ಟ ಪಟ್ಟು ದುಡಿದು ಈ ಉದ್ಯಮವನ್ನು ಡೊಡ್ಡ ಮಟ್ಟಕ್ಕೆ ಬೆಳೆಸಿ ನಾವು ಯಾವುದರಲ್ಲೂ ಕಮ್ಮಿ ಇಲ್ಲ ಎನ್ನುವಂತೆ ಮಾದರಿಯಾಗಿದ್ದಾಳೆ. ಕಿತ್ತೂರು ಉತ್ಸವ, ಬೆಳವಡಿ ಮಲ್ಲಮ್ಮ ಉತ್ಸವ ಸೇರಿದಂತೆ ಹಲವು ಉತ್ಸವ ಕಾರ್ಯಕ್ರಮದಲ್ಲಿ ೭ ದಿನದಲ್ಲಿ ೧೭ ಲಕ್ಷ ವ್ಯಾಪಾರ ಮಾಡಿ ಸಾಧನೆ ಮೇರಿದಿದ್ದಾಳೆ. ಮೀನಾಕ್ಷಿ ಅವರ ಸಾಧನೆ ಮೆಚ್ಚಿ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಹಲವು ಪ್ರಶಸ್ತಿ ನೀಡಿ ಸತ್ಕಾರ ಮಾಡಿದ್ದಾವೆ ಎಂದರು.

ಈ ಸಂದರ್ಭದಲ್ಲಿ ಜೆ.ವಿ. ಹಿರೇಮಠ, ಎಸ್.ಎನ್. ಪೂಜಾರಿ, ಎಸ್.ಎಸ್ ಸಾಣಿಕೊಪ್ಪ, ಎಂ.ವಿ. ತವಸಿ, ಎನ್.ಡಿ. ನರಗುಂದ, ಸಂಗಪ್ಪ ಅಂಗಡಿ, ಅಶೋಕ ಅಂಗಡಿ, ಎಸ್.ಬಿ. ಸವದತ್ತಿ, ಉಪ್ಪಲದಿನ್ನಿ ಜಿ.ಜಿ, ಆಯ್.ಎಸ್. ಕಡಪಟ್ಟಿ, ಜಿ.ಎ. ಹೊಳೆಹಾಚಿ. ಕಸ್ತೂರಿ ಇಬೂತಿ, ಸಂಗಪ್ಪ ಕಿರಗಿ, ಶಿವಾನಂದ ಅಂಗಡಿ, ಗೀತಾ ಡವಳೆ, ಮಲ್ಲಿಕಾರ್ಜುನ ಹಿರೇಮಠ, ಚಂದ್ರಶೇಖರ ಹಿರೇಮಠ, ಶಾಂಬವಿ ಹಿರೇಮಠ ಸೇರಿದಂತೆ ಇತರರು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button