ಡಿಸಿಪಿ ವಿಕ್ರಂ ಅಮಟೆ ಮಾಹಿತಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಮತ್ತೆ ವೀಕ್ ಎಂಡ್ ಕರ್ಫ್ಯೂ ಜಾರಿಯಾಗಿದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆಯವರೆಗೂ ಕರ್ಫ್ಯೂ ಜಾರಿಯಲ್ಲಿರಲಿದೆ.
ಶನಿವಾರ ಮೊದಲ ದಿನವೇ ಕರ್ಫ್ಯೂ ಉಲ್ಲಂಘಿಸಿದ 46 ವಾಹನಗಳನ್ನು ಬೆಳಗಾವಿ ಮಹಾನಗರ ಪೊಲೀಸರು ಸೀಜ್ ಮಾಡಿದ್ದಾರೆ. ಜೊತೆಗೆ ಮಾಸ್ಕ್ ಧರಿಸದ 208 ಜನರಿಗೆ ದಂಡ ವಿಧಿಸಿದ್ದಾರೆ.
ಡಿಸಿಪಿ ವಿಕ್ರಂ ಅಮಟೆ ಈ ಮಾಹಿತಿ ನೀಡಿದ್ದಾರೆ.
ಪೊಲೀಸರು ಶುಕ್ರವಾರ ರಾತ್ರಿ ಹಾಗೂ ಶನಿವಾರ ಮುಂಜಾನೆಯಿಂದಲೇ ತೀವ್ರ ಕಾರ್ಯಚರಣೆಗಿಳಿದಿದ್ದಾರೆ. ಅನಗತ್ಯವಾಗಿ ಹೊರಗೆ ಬರುವ ವಾಹನಗಳನ್ನು ಮುಲಾಜಿಲ್ಲದೆ ವಶಪಡಿಸಿಕೊಳ್ಳುತ್ತಿದ್ದಾರೆ. ಪ್ರೆಸ್ ಎಂದು ಬರೆದುಕೊಂಡು ಬಂದಿದ್ದ ದ್ವಿಚಕ್ರ ವಾಹನವನ್ನು ಸಹ ತಡೆದು ದಂಡ ವಿಧಿಸಲಾಗಿದೆ.
ಭಾನುವಾರವೂ ಕಾರ್ಯಚರಣೆ ಮುಂದುವರಿಯಲಿದೆ. ಕೊರೋನಾ ನಿಯಂತ್ರಿಸಲು ಮತ್ತು 3ನೇ ಅಲೆ ತಡೆಯಲು ಸಾರ್ವಜನಿಕರು ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ಪೊಲೀಸರು ಸರಿಯಾಗಿ ಪಾಠ ಕಲಿಸಲಿದ್ದಾರೆ.
ವೀಕ್ ಎಂಡ್ ಕರ್ಫ್ಯೂ: ಸಂಚಾರ ಸಂಪೂರ್ಣ ನಿರ್ಬಂಧ: ಇಲ್ಲಿದೆ ಸಮಗ್ರ ಮಾರ್ಗಸೂಚಿ
ಬೆಳಗಾವಿ ಸೇರಿ 8 ಜಿಲ್ಲೆಗಳಲ್ಲಿ ಇಂದು ರಾತ್ರಿಯಿಂದಲೇ ವೀಕ್ ಎಂಡ್ ಕರ್ಫ್ಯೂ: ನಾಳೆ, ನಾಡಿದ್ದು ಏನೆಲ್ಲ ಇರಲಿದೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ