Kannada NewsKarnataka NewsLatest

ದೇಶ ಮೊದಲು, ಪಕ್ಷ ನಂತರ, ವ್ಯಕ್ತಿ ಲಾಸ್ಟ್ ಎನ್ನುವುದು ಬಿಜೆಪಿ ತತ್ವ – ಡಾ.ಸೋನಾಲಿ ಸರ್ನೋಬತ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆ ವತಿಯಿಂದ ಆರೋಗ್ಯ ಸ್ವಯಂಸೇವಕರ ಅಭಿಯಾನ ಕಾರ್ಯಾಗಾರ  ಜಿಲ್ಲಾ ಕಾರ್ಯಾಲಯದಲ್ಲಿ  ನೆರವೇರಿತು.
ಕಾರ್ಯಕ್ರಮದ ಸಂಚಾಲಕರಾದ ಡಾ ಸೋನಾಲಿ ಸರ್ನೋಬತ್, ದೇಶ ಮೊದಲು, ಪಕ್ಷ ನಂತರ, ವ್ಯಕ್ತಿ ಲಾಸ್ಟ್ ಎನ್ನುವುದು ಬಿಜೆಪಿ ತತ್ವ, ಇದನ್ನು ಎಲ್ಲರೂ ಪಾಲಿಸಬೇಕು ಎಂದರು.
 ಜಿಲ್ಲಾಧ್ಯಕ್ಷ ಸಂಜಯ ಪಾಟೀಲ್ ಉದ್ಘಾಟನೆ ಮಾಡಿ ಪಕ್ಷ ಕೊಟ್ಟಿರುವ ಅಭೂತಪೂರ್ವ ಸೇವೆಯನ್ನು ನಾವು ಮಾಡಲಿಕ್ಕೆ ಹೊರಟಿದ್ದೇವೆ. ಇದರ ಪರಿಣಾಮವಾಗಿ ಪ್ರತಿ ಬೂತಿನಲ್ಲಿ ಪಕ್ಷದ ವತಿಯಿಂದ ಆರೋಗ್ಯ ಸ್ವಯಂಸೇವಕರಾಗಿ ಒಬ್ಬರು ಪುರುಷ ಹಾಗೆ ಒಬ್ಬರು ಮಹಿಳೆಯನ್ನು ನಿಯೋಜಿಸಲಾಗುವುದು ಎಂದರು.
ಮುಂಬರುವ ಮಹಾಮಾರಿ ಕರೋನಾದ ಮೂರನೆಯ ಅಲೆಯನ್ನು ಎದುರಿಸಲು ಸನ್ನದ್ಧರಾಗಿ ದೇಶದ ಪ್ರಜೆಗಳನ್ನು ಕಾಪಾಡೋಣ ಎಂದು ಅವರು ಹೇಳಿದರು.
 ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಮೋಹಿತೆ ಸುಭಾಷ್ ಪಾಟೀಲ್ ಸಂದೀಪ್ ದೇಶಪಾಂಡೆ ಈ ಕಾರ್ಯಕ್ರಮದ ಸಂಚಾಲಕರಾದ ಡಾ ಸೋನಾಲಿ ಸರ್ನೋಬತ್, ಸಹ ಸಂಚಾಲಕರಾದ ಜ್ಯೋತಿ ಕೋಲಾರ್, ಡಾ. ನಯನಾ ಭಸ್ಮೆ, ಸಂತೋಷ್ ದೇಶನೂರ, ನಿತೀನ್ ಚೌಗುಲೆ, ಜಿಲ್ಲಾ ಕೋಶಾಧ್ಯಕ್ಷರಾದ ಮಲ್ಲಿಕಾರ್ಜುನ ಮಾದಮನವರ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ವೀರಭದ್ರಯ್ಯ ಪೂಜಾರಿ ಮಂಡಲಗಳ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಹಾಗೂ ಆರೋಗ್ಯ ಸ್ವಯಂಸೇವಕರು ಉಪಸ್ಥಿತರಿದ್ದರು.

 

  Today Bjp health volunteers program was launched in BELGAVI district BJP office on Khanapur Road.
To prevent third wave of corona pandemic and if it’s inevitable then to prepare for it a huge force of Karyakartas is being ready.
District bjp president  Sanjay Patil, secreteries Mahesh Mohite, Subhas Patil, Sandeep Deshpande, Health volunteers belgavi president Dr Sonali Sarnobat, sahsachalak Jyoti Kolhar, Santosh Deshmur , all mandal Adhyaksh and Karyakarta were present.
One Pulse oxymeter, one thermal scanner, gloves and masks were given to all mandals.
This Abhiyan will take care of each and every village in district.
This was launched in Delhi for all states on 28 th of July and on 7 th August in Karnataka.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button