ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಬಳ್ಳಾರಿಯಲ್ಲಿ ಕೃಷಿ ವಿಚಕ್ಷಣಾ ದಾಳಿ ನಡೆಸಿದ್ದು, ಅನಧಿಕೃತ ಗೋದಾಮಿನಲ್ಲಿ ಸಂಗ್ರಹಿಸಿದ್ದ ರಸಗೊಬ್ಬರ, ಕೀಟನಾಶಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಳ್ಳಾರಿ ತಾಲೂಕಿನ ಮೊಕಾ ಗ್ರಾಮದ ಶ್ರೀಸಾಯಿ ಲಕ್ಷ್ಮೀ ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟ ಮಳಿಗೆ ಮೇಲೆ ಖಚಿತ ಮಾಹಿತಿಯನ್ನಾಧರಿಸಿ ವಿಚಕ್ಷಣಾ ದಳದ ಅಧಿಕಾರಿಗಳು ದಾಳಿ ನಡೆಸಿದ್ದು, ಮಾರಾಟ ಮಳಿಗೆಯಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಿದ್ದ ಸುಮಾರು 14.32 ಲಕ್ಷ ರೂ. ಮೌಲ್ಯದ ರಸಗೊಬ್ಬರ ಕೀಟನಾಶಕಗಳನ್ನು ಹಾಗೂ ಇದೇ ಗ್ರಾಮದಲ್ಲಿ ಅನಾಮಧೇಯ ವ್ಯಕ್ತಿಯೋರ್ವ ಪರವಾನಿಗೆಯಿಲ್ಲದೇ ದಾಸ್ತಾನು ಮಾಡಿದ್ದ 5.89 ಲಕ್ಷ ರೂ. ಮೌಲ್ಯದ ರಸಗೊಬ್ಬರವನ್ನು ವಶಪಡಿಸಿಲೊಳ್ಳಲಾಗಿದೆ.
ದಾಳಿಯಲ್ಲಿ ಬಳ್ಳಾರಿ ವಿಚಕ್ಷಣಾ ದಳದ ಅಧಿಕಾರಿಗಳಾದ ರೆಹಮಾನ್, ನಾಗರಾಜ್ ಹಾಗೂ ಮೊಕಾ ಆರ್.ಎಸ್.ಕೆ ಕೃಷಿ ಅಧಿಕಾರಿ ಯಶೋಧಾ ಪಾಲ್ಗೊಂಡಿದ್ದರು.
ಬೆಳಗಾವಿ ಹೊಟೆಲ್ ನಿಂದ ಹಿಂದೂ ಸಾಧು-ಸಂತರ ಅಪಮಾನ: ಕ್ಷಮೆ ಯಾಚನೆಗೆ 24 ಗಂಟೆ ಗಡುವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ